ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ-ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ, ಆಲಮಟ್ಟಿ–ಜಡ್ರಾಮಕುಂಟಿ–ಮುಗಳಳ್ಳಿ–ಬಾಗಲಕೋಟೆ ನಡುವಿನ ಡಬ್ಲಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳ ವಿವರ ಈ ಕೆಳಗಿನಂತಿವೆ:
ರೈಲುಗಳ ಸಂಚಾರ ರದ್ದು:
1. ಆಗಸ್ಟ್ 14 ರಿಂದ 23, 2025 ರವರೆಗೆ ಸೋಲಾಪುರ – ಹೊಸಪೇಟೆ ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11415), ಮತ್ತು ಆಗಸ್ಟ್ 15 ರಿಂದ 24, 2025 ರವರೆಗೆ ಹೊಸಪೇಟೆ – ಸೋಲಾಪುರ ದೈನಂದಿನ ಎಕ್ಸ್‌ಪ್ರೆಸ್ (11416) ರೈಲುಗಳ ಸಂಚಾರ ರದ್ದುಗೊಳ್ಳಲಿವೆ.
2. ಆಗಸ್ಟ್ 16 ರಿಂದ 23, 2025 ರವರೆಗೆ, ರೈಲು ಸಂಖ್ಯೆ 56906 ಎಸ್.ಎಸ್.ಎಸ್. ಹುಬ್ಬಳ್ಳಿ – ಸೋಲಾಪುರ ದೈನಂದಿನ ಪ್ಯಾಸೆಂಜರ್ ಮತ್ತು ಆಗಸ್ಟ್ 17 ರಿಂದ 24, 2025 ರವರೆಗೆ ರೈಲು ಸಂಖ್ಯೆ 56905 ಸೋಲಾಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
3. ಆಗಸ್ಟ್ 17 ರಿಂದ 24, 2025 ರವರೆಗೆ ರೈಲು ಸಂಖ್ಯೆ 56903 ಸೋಲಾಪುರ – ಧಾರವಾಡ ದೈನಂದಿನ ಪ್ಯಾಸೆಂಜರ್ ಮತ್ತು ಆಗಸ್ಟ್ 16 ರಿಂದ 23, 2025 ರವರೆಗೆ ರೈಲು ಸಂಖ್ಯೆ 56904 ಧಾರವಾಡ – ಸೋಲಾಪುರ ದೈನಂದಿನ ಪ್ಯಾಸೆಂಜರ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
4. ಆಗಸ್ಟ್ 17 ರಿಂದ 22, 2025 ರವರೆಗೆ ರೈಲು ಸಂಖ್ಯೆ 07329 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ಮತ್ತು ಆಗಸ್ಟ್ 18 ರಿಂದ 23, 2025 ರವರೆಗೆ ರೈಲು ಸಂಖ್ಯೆ 07330 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
5. ಆಗಸ್ಟ್ 20 ರಿಂದ 23, 2025 ರವರೆಗೆ ರೈಲು ಸಂಖ್ಯೆ 06920 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ಮತ್ತು ರೈಲು ಸಂಖ್ಯೆ 06919 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
ರೈಲುಗಳ ಸಂಚಾರ ಭಾಗಶಃ ರದ್ದು:
1. ಆಗಸ್ಟ್ 13 ರಿಂದ 22, 2025 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ – ವಿಜಯಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
2. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 06546 ವಿಜಯಪುರ – ಯಶವಂತಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಪ್ರಾರಂಭವಾಗಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
3. ಆಗಸ್ಟ್ 13 ರಿಂದ 22, 2025 ರವರೆಗೆ ಹೊರಡುವ ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ ಬಸವ ದೈನಂದಿನ ಎಕ್ಸ್‌ಪ್ರೆಸ್ ರೈಲು ವಿಜಯಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ವಿಜಯಪುರದಲ್ಲಿ ಕೊನೆಗೊಳ್ಳಲಿದೆ.
4. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಬಸವ ದೈನಂದಿನ ಎಕ್ಸ್‌ಪ್ರೆಸ್ ರೈಲು ಬಾಗಲಕೋಟೆಯ ಬದಲಿಗೆ ವಿಜಯಪುರದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
5. ಆಗಸ್ಟ್ 13 ರಿಂದ 22, 2025 ರವರೆಗೆ ಮುಂಬೈಯಿಂದ ಹೊರಡುವ ರೈಲು ಸಂಖ್ಯೆ 11139 ಸಿ.ಎಸ್.ಎಮ್.ಟಿ, ಮುಂಬೈ – ಹೊಸಪೇಟೆ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಿಜಯಪುರ ಮತ್ತು ಹೊಸಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ವಿಜಯಪುರದಲ್ಲಿ ಕೊನೆಗೊಳ್ಳಲಿದೆ.
6. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ – ಸಿ.ಎಸ್.ಎಮ್.ಟಿ, ಮುಂಬೈ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೊಸಪೇಟೆಯ ಬದಲಿಗೆ ವಿಜಯಪುರದಿಂದ ಹೊರಡಲಿದೆ. ಹೊಸಪೇಟೆ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
7. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ಈ ಕೆಳಗಿನಂತೆ ಭಾಗಶಃ ರದ್ದುಗೊಳ್ಳಲಿದೆ:
* ಆಗಸ್ಟ್ 13 ರಿಂದ 18, 2025 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಪ್ರಯಾಣ ಬಾಗಲಕೋಟೆ ಮತ್ತು ವಿಜಯಪುರ ನಡುವೆ ರದ್ದುಗೊಂಡಿದೆ. ಈ ರೈಲಿನ ಸೇವೆ ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
* ಆಗಸ್ಟ್ 19 ರಿಂದ 22, 2025 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಪ್ರಯಾಣ ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ರದ್ದುಗೊಂಡಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.
8. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ಈ ಕೆಳಗಿನಂತೆ ಭಾಗಶಃ ರದ್ದುಗೊಳ್ಳಲಿದೆ:
* ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ಪ್ರಯಾಣ: ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಹೊರಡಲಿದೆ; ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
* ಆಗಸ್ಟ್ 20 ರಿಂದ 23, 2025 ರವರೆಗೆ ಹೊರಡುವ ಪ್ರಯಾಣ: ವಿಜಯಪುರದ ಬದಲಿಗೆ ಎಸ್.ಎಸ್.ಎಸ್. ಹುಬ್ಬಳ್ಳಿಯಿಂದ ಹೊರಡಲಿದೆ; ಹುಬ್ಬಳ್ಳಿ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
9. ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ರೈಲು ಸಂಖ್ಯೆ 06919 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
10. ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ರೈಲು ಸಂಖ್ಯೆ 06920 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
ರೈಲುಗಳ ಮಾರ್ಗ ಬದಲಾವಣೆ:
1. ಆಗಸ್ಟ್ 15 ರಿಂದ 22, 2025 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17319 ಎಸ್ಎಸ್ಎಸ್ ಹುಬ್ಬಳ್ಳಿ – ಹೈದರಾಬಾದ್ ದೈನಂದಿನ ಎಕ್ಸ್‌ಪ್ರೆಸ್ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ರಾಯಚೂರು, ಯರಮರಸ, ಚಿಕ್ಕಸೂಗೂರು, ಯದ್ಲಾಪುರ, ಕೃಷ್ಣಾ, ನಾಲವಾರ ನಾರ್ತ್ ಮತ್ತು ವಾಡಿ ಮಾರ್ಗವಾಗಿ ಚಲಿಸಲಿದೆ. ಮಾರ್ಗ ಬದಲಾಗಿ ಚಲಿಸುವುದರಿಂದ ಹೊಳೆ ಆಲೂರು ಮತ್ತು ಶಹಾಬಾದ್ ನಡುವಿನ ನಿಲುಗಡೆ ಇರುವುದಿಲ್ಲ.
2. ಆಗಸ್ಟ್ 16 ರಿಂದ 22, 2025 ರವರೆಗೆ ಹೈದೆರಾಬಾದಿನಿಂದ ಹೊರಡುವ ರೈಲು ಸಂಖ್ಯೆ 17320 ಹೈದರಾಬಾದ್ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು ವಾಡಿ, ನಾಲವಾರ ನಾರ್ತ್, ಕೃಷ್ಣಾ, ಯದ್ಲಾಪುರ, ಚಿಕ್ಕಸೂಗೂರು, ಯರಮರಸ,, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಮಾರ್ಗ ಬದಲಾಗಿ ಚಲಿಸುವುದರಿಂದ ಶಹಾಬಾದ್‌ನಿಂದ ಹೊಳೆ ಆಲೂರುವರೆಗಿನ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
ತಡವಾಗಿ ಪ್ರಾರಂಭ:
1. ಪಂಢರಪುರ – ಮೈಸೂರು ಗೋಲ್ ಗುಂಬಜ್ ದೈನಂದಿನ ಎಕ್ಸ್‌ಪ್ರೆಸ್ (ಸಂಖ್ಯೆ 16536) ರೈಲು ಆಗಸ್ಟ್ 23, 2025 ರಂದು ಪಂಢರಪುರದಿಂದ ಹೊರಡುವ ಈ ರೈಲು 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ಆಲಮಟ್ಟಿಯಲ್ಲಿ ರೈಲುಗಳ ನಿಲುಗಡೆ ತಾತ್ಕಾಲಿಕ ರದ್ದು:
ಸೂಚಿಸಲಾದ (JCO-ರೈಲು ಪ್ರಯಾಣ ದಿನಾಂಕ) ದಿನಾಂಕಗಳಲ್ಲಿ ಈ ಕೆಳಗಿನ ರೈಲುಗಳಿಗೆ ಆಲಮಟ್ಟಿ ನಿಲ್ದಾಣದಲ್ಲಿನ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
1. ಮೈಸೂರು–ಪಂಢರಪುರ ಗೋಲ್ ಗುಂಬಜ್ (16535) ಎಕ್ಸ್‌ಪ್ರೆಸ್ (ಆಗಸ್ಟ್ 18 ರಿಂದ 22, 2025)
2. ಪಂಢರಪುರ–ಮೈಸೂರು ಗೋಲ್ ಗುಂಬಜ್ (16536) ಎಕ್ಸ್‌ಪ್ರೆಸ್ (ಆಗಸ್ಟ್ 19 ರಿಂದ 23, 2025)
3. ಸಿಎಸ್ಎಮ್’ಟಿ ಮುಂಬೈ–ಹೊಸಪೇಟೆ ಸೂಪರ್‌ಫಾಸ್ಟ್ (11139) ಎಕ್ಸ್‌ಪ್ರೆಸ್ (ಆಗಸ್ಟ್ 18 ರಿಂದ 22, 2025)
4. ಹೊಸಪೇಟೆ–ಸಿಎಸ್ಎಮ್’ಟಿ ಮುಂಬೈ ಸೂಪರ್‌ಫಾಸ್ಟ್ (11140) ಎಕ್ಸ್‌ಪ್ರೆಸ್ (ಆಗಸ್ಟ್ 19 ರಿಂದ 23, 2025)
5. ಯಶವಂತಪುರ–ಬಿಕಾನೇರ್ ದ್ವಿ-ಸಾಪ್ತಾಹಿಕ (16587) ಎಕ್ಸ್‌ಪ್ರೆಸ್ (ಆಗಸ್ಟ್ 22, 2025)
6. ಬಿಕಾನೇರ್–ಯಶವಂತಪುರ ದ್ವಿ-ಸಾಪ್ತಾಹಿಕ (16588) ಎಕ್ಸ್‌ಪ್ರೆಸ್ (ಆಗಸ್ಟ್ 17 ಮತ್ತು 19, 2025)
7. ಸಾಯಿ ನಗರ ಶಿರಡಿ–ಮೈಸೂರು ಸಾಪ್ತಾಹಿಕ (16218) ಎಕ್ಸ್‌ಪ್ರೆಸ್ (ಆಗಸ್ಟ್ 20, 2025)
8. ಬನಾರಸ್–ಎಸ್.ಎಸ್.ಎಸ್. ಹುಬ್ಬಳ್ಳಿ ಸಾಪ್ತಾಹಿಕ (17324) ಎಕ್ಸ್‌ಪ್ರೆಸ್ (ಆಗಸ್ಟ್ 17, 2025).
GOOD NEWS: ರಾಜ್ಯದ ಕಂದಾಯ ಗ್ರಾಮಗಳ 1.62 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಕೃಷ್ಣಭೈರೇಗೌಡ
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್