ಬೆಂಗಳೂರು : ದೀಪಾವಳಿ ಹಬ್ಬವನ್ನು ಅಕ್ಟೋಬರ್ 20 ರಂದು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಮತ್ತು ಪ್ರಾಣಿ-ಪಕ್ಷಿಗಳ ಕಲರವಕ್ಕೆ ಘಾಸಿ ಉಂಟುಮಾಡುತ್ತಿದೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ಮನವಿ ಮಾಡಲಾಗಿದೆ.
ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು
ವಿದ್ಯುತ್ ಜಾಲ, ಕಂಬ ಅಥವಾ ಟಿಸಿಗಳ ಸಮೀಪ ಪಟಾಕಿ/ದೀಪಗಳನ್ನು ಹಚ್ಚದಿರಿ.
ಅಲಂಕಾರಿಕ ಸೀರಿಯಲ್ ಲೈಟ್ಗಳಿಗೆ ಸರಿಯಾಗಿ ಇನ್ಸುಲೇಟ್ ಮಾಡಿ ಸುರಕ್ಷಿತವಾಗಿ ಉಪಯೋಗಿಸಿ.
ಹಣತೆ ಮತ್ತು ಮೇಣದ ಬತ್ತಿಗಳನ್ನು ವಿದ್ಯುತ್ ದೀಪಗಳಿಂದ ದೂರವಿಡಿ.
ವಿದ್ಯುತ್ ದೀಪಗಳನ್ನು ಕಬ್ಬಿಣದ ಕಂಬಗಳಿಗೆ ಯಾವತ್ತೂ ಕಟ್ಟಬೇಡಿ.
ವಿದ್ಯುತ್ ದೀಪಾಲಂಕಾರವನ್ನು ವೃತ್ತಿಪರ ಎಲೆಕ್ನಿಷಿನ್ರಿಂದಲೇ ಮಾಡಿಸಿ.
ಅಕಾಶ ಬುಟ್ಟಿ, ಪಟಾಕಿ ಶಾಟ್ಸ್ ( ಮೇಲಕ್ಕೆ ಚಿಮ್ಮುವ ಸಿಡಿಮದ್ದು )ಗಳನ್ನು ವಿದ್ಯುತ್ ತಂತಿಗಳ, ಪರಿವರ್ತಕಗಳ ಕೇಳಗೆ/ಸಮೀಪ ಹಚ್ಚಬೇಡಿ.
ವಿದ್ಯುತ್ ಸುರಕ್ಷೆತೆಗೆ ಪ್ರಾಮುಖ್ಯತೆ ಕೊಡಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ.
ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಹೆಸ್ಕಾಂನ 24×7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆಮಾಡಿ.