ಹುಬ್ಬಳ್ಳಿ: ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದಾಗಿ, ನೈಋತ್ಯ ರೈಲ್ವೆಯು ರೈಲು ಸಂಖ್ಯೆ 17347/17348 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲುಗಳ ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಡುವಿನ ಭಾಗಶಃ ರದ್ದತಿಯನ್ನು ವಿಸ್ತರಿಸಿದೆ.
ಈ ಹಿಂದೆ ಜೂನ್ 30, 2025 ರವರೆಗೆ ಸೂಚಿಸಲಾಗಿದ್ದ ಈ ಭಾಗಶಃ ರದ್ದತಿಯು, ಈಗ ಜುಲೈ 2 ರಿಂದ ಡಿಸೆಂಬರ್ 31, 2025ರವರೆಗೆ ಜಾರಿಯಲ್ಲಿರುತ್ತದೆ.
ಇದರನ್ವಯ, ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಈಗ ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಿಂದ ಹೊರಡಲಿದೆ.
ಈ ಅವಧಿಯಲ್ಲಿ ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಡುವಿನ ರೈಲು ಸೇವೆಗಳು ಭಾಗಶಃ ರದ್ದುಗೊಂಡಿರುತ್ತವೆ.