ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಂದಿನಿ ಉತ್ಪನ್ನ ಪ್ರಿಯರಿಗೆ ಸಂತಸದ ಸುದ್ದಿ ಎನ್ನುವಂತೆ ನೂತನ ನಂದಿನಿ ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಕುರಿತು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 5 ದಶಕಗಳಿಂದ “ನಂದಿನಿ” ಬ್ಯಾಂಡ್‌ನಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಪರಿಶುದ್ಧ ಮತ್ತು ರುಚಿಕರವಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವ ಮೂಲಕ ಗ್ರಾಹಕರ ನೆಚ್ಚಿನ ಬ್ರಾಂಡ್ ಆಗಿದೆ. ನಂದಿನಿ ಬ್ರಾಂಡ್‌ನಲ್ಲಿ 175 ಕ್ಕೂ ಅಧಿಕ ಮಾದರಿಯ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
2025 ರ ದಸರಾ ಹಬ್ಬದ ಸಂದರ್ಭದಲ್ಲಿ ನಂದಿನಿ ಸಿಹಿಗಳ ಮಾರಾಟವು 750 ಮೆ.ಟನ್‌ಗಳನ್ನು ದಾಟಿದ್ದು ಈ ಯಶಸ್ಸು ನಂದಿನಿ ಬ್ಯಾಂಡ್ ಶುದ್ಧತೆ, ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದ್ದು, ಗ್ರಾಹಕರ ನಂಬಿಕೆಯ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ.
ಇಂದಿನ ಆರೋಗ್ಯ ಜಾಗೃತ ಯುಗದಲ್ಲಿ ಗ್ರಾಹಕರು ಸಕ್ಕರೆ ರಹಿತ -No added sugar ಸಿಹಿಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಇವು ಮಧುಮೇಹಿಗಳಿಗೆ ಅನುಕೂಲಕರವಾಗಿದ್ದು, ತೂಕ ನಿಯಂತ್ರಣಕ್ಕೆ ಸಹಕಾರಿ ಹಾಗೂ ಹಲ್ಲುಗಳ ಆರೈಕೆಗೆ ಉತ್ತಮ, ಸಕ್ಕರೆಯಿಲ್ಲದಿದ್ದರೂ ಸಹ ಸಹಜ ಸಿಹಿತನ ಮತ್ತು ರುಚಿಯನ್ನು ಕಾಪಾಡಿಕೊಳ್ಳುವ ಈ ಸಿಹಿಗಳು ಆರೋಗ್ಯಕರ ಆಯ್ಕೆಯಾಗಿ ಜನಪ್ರಿಯತೆ ಪಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯೊಂದಿಗೆ ಗ್ರಾಹಕರ ಆಸಕ್ತಿಯನ್ನು ಸಹ ಗಮನದಲ್ಲಿಟ್ಟುಕೊಂಡು, ಕರ್ನಾಟಕ ಹಾಲು ಮಹಾಮಂಡಳಿಯು ಗ್ರಾಹಕರಿಗೆ ಹೊಸ ವೈವಿಧ್ಯಮಯ ಈ ಕೆಳಕಂಡ ಸಕ್ಕರೆ ರಹಿತ -No added sugar ಸಿಹಿಗಳನ್ನು ನಂದಿನಿ ಬ್ಯಾಂಡ್ ಅಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧಪಡಿಸಿದೆ ಎಂದಿದ್ದಾರೆ.
ಈ ನೂತನ ನಂದಿನಿ ಸಿಹಿ ಉತ್ಪನ್ನಗಳನ್ನು ಬಿಡುಗಡೆ
- “ನಂದಿನಿ ಖೋವಾ ಗುಲಾಬ್ ಜಾಮೂನ್” (ಸಕ್ಕರೆ ರಹಿತ -No added sugar) — 500 ಗ್ರಾಂ ಪ್ಯಾಕ್‌ನ ದರ – ರೂ.220/-.
- ಎಲ್ಲರ ಮೆಚ್ಚಿನ ಪರಿಶುದ್ಧ “ನಂದಿನಿ ಹಾಲಿನ ಪೇಡಾ” (ಸಕ್ಕರೆ ರಹಿತ -No added sugar) – 200 ಗ್ರಾಂ ಪ್ಯಾಕ್‌ನ ದರ – ರೂ.170/-
- ರುಚಿಯ ಸಮ್ಮಿಲನವಾಗಿರುವ “ನಂದಿನಿ ಬೆಲ್ಲದ ಓಟ್ಸ್ ಅಂಡ್ ನಟ್ಸ್ ಬರ್ಫಿ” – (ಬೆಲ್ಲದಿಂದ ತಯಾರಿಸಲಾದ ಸಿಹಿ) 200 ಗ್ರಾಂ ಪ್ಯಾಕ್‌ನ ದರ – ರೂ.170/-.
ಈ ಎಲ್ಲಾ ಸಿಹಿಗಳನ್ನು ದಿನಾಂಕ:15.10.2025 ರಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶರವರು ಸಾಂಕೇತಿಕವಾಗಿ ತಮ್ಮ ವಿಕಾಸ ಸೌಧದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಸದರಿ ಸಂದರ್ಭದಲ್ಲಿ ಕಹಾಮದ ಆಡಳಿತಾಧಿಕಾರಿಗಳಾದ ಟಿ.ಹೆಚ್.ಎಂ ಕುಮಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದಬಿ. ಶಿವಸ್ವಾಮಿರವರು ಹಾಜರಿದ್ದರು.
ಹಾಸನಾಂಬ ಭಕ್ತರ ಗಮನಕ್ಕೆ: ಈ ಮೂರು ದಿನ ದರ್ಶನದ ಸಮಯ ಬದಲಾವಣೆ, ಇಲ್ಲಿದೆ ಮಾಹಿತಿ | Hasanamba Temple Time
ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ








