ಚಿತ್ರದುರ್ಗ: ಜಿಲ್ಲೆಯಲ್ಲಿ ಗಣೆ ಟ್ರಸ್ಟ್ ಮೂಲಕ ಕಾಡುಗೊಲ್ಲ ಸಮುದಾಯದ ಅರಿವು, ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೀಗ ಸಮುದಾಯದ ಯುವಕ-ಯುವತಿಯರಿಗಾಗಿ ಬುಡಕಟ್ಟು ಸಮುದಾಯದ ಸಾಹಿತ್ಯ, ಸಂಸ್ಕೃತಿ, ಅರಿವು ಎಂಬ ವಿಷಯದ ಕುರಿತಂತೆ ವಿಚಾರ ಕಮ್ಮಟವನ್ನು ಜನವರಿ.10, 11ರಂದು ಆಯೋಜಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಗಣೆ ಟ್ರಸ್ಟ್ ನ ಡಾ.ಪ್ರೇಮಾ ಅವರು ಮಾಹಿತಿ ನೀಡಿದ್ದು, ಗಣೇಟ್ರಸ್ಟ್ (ರಿ), ಹಿರಿಯೂರು, ಬುಡಕಟ್ಟು ಮಹಿಳಾ ಜಾಗೃತಿ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಒಂದು ಸಂಸ್ಥೆ ಆಗಿದೆ. ಈಗಾಗಲೇ ಕಾಡುಗೊಲ್ಲರ ಹಟ್ಟಿಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಅಂತಯೇ ಕಾಡುಗಲ್ಲ ಸಮುದಾಯದ ಯುವತಿ ಯುವಕರಿಗಾಗಿ ಬುಡಕಟ್ಟು ಸಮುದಾಯ ಸಾಹಿತ್ಯ ಸಂಸ್ಕೃತಿ ಅರಿವು ಎಂಬುವ ವಿಷಯದಡಿಯಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲೂಕಿನಲ್ಲಿ ಇದೆ 2026 ಜನವರಿ 10 ಮತ್ತು 11 ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು ವಿಚಾರ ಕಮ್ಮಟವನ್ನು (ವರ್ಕ್ ಷಾಪ್)ಏರ್ಪಡಿಸಲಾಗಿದೆ ಎಂದಿದ್ದಾರೆ.
ಈ ಕಮ್ಮಟದಲ್ಲಿ ಕಾಡುಗೊಲ್ಲ ಬುಡಕಟ್ಟು ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ ರಾಜಕೀಯ, ಆರ್ಥಿಕ ಸ್ವಾವಲಂಬಿ ಹಾಗು ವರ್ತಮಾನದಲ್ಲಿ ಕಾಡುಗೊಲ್ಲ ಬುಡಕಟ್ಟು ಅಸ್ಮಿತೆ ಮುಂತಾದ ವಿಷಯ ಕುರಿತು ಚರ್ಚಿಸಲಾಗುವುದು. ಇಂತಹ ವಿಚಾರಗಳಲ್ಲಿ ಆಳವಾಗಿ ಅದ್ಯಯನ ಮತ್ತು ಸಂಶೋಧನಾ ಕೆಲಸಮಾಡಿದ ನುರಿತ ಪ್ರಾಜ್ಞ ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು. ಕಾಡುಗೊಲ್ಲ ಸಮುದಾಯದ ವಿದ್ಯಾವಂತ ಯುವತಿ ಯುವಕರು ಸಂಶೋಧಕರು ಸಂಶೋಧನಾಸಕ್ತಿ ಇರುವವರು ಭೋಧಕ ಭೋಧನಾಸಕ್ತಿ ಇರುವವರು, ಸಮುದಾಯದ ಪರ ಕಾಳಜಿ ಇರುವ ಹೋರಾಟಗಾರರು, ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಿ ವಿಚಾರಪರರು ಮತ್ತು ಚಿಂತನಾಶೀಲರಾಗಲು ಒಂದು ಸದವಕಾಶವಾಗಲಿದೆ. ಬನ್ನಿ ಭಾಗವಹಿಸಿ ಸದುಪಯೋಗ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಜನವರಿ 10, 11ರಂದು ಎರಡು ದಿನಗಳ ಕಾಲ ವಿಚಾರ ಕಮ್ಮಟವು ತುಮಕೂರು ಜಿಲ್ಲೆಯ ಶಿರಾ ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ನಡೆಯಲಿದೆ. ವಸತಿ ವ್ಯವಸ್ಥೆ ಕೂಡ ಇದೆ. https://forms.gle/yAbUYnXDtyTZYNUaA ಈ ಲಿಂಕ್ ಕ್ಲಿಕ್ ಮಾಡಿ, ಗೂಗಲ್ ಫಾರ್ಮ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಶಿಬಿರಾರ್ಥಿಗಳು ಜನವರಿ.10ರ ಶನಿವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ಹಾಜರಿರಬೇಕು ಎಂಬುದಾಗಿ ಗಣೆ ಟ್ರಸ್ಟ್ ತಿಳಿಸಿದೆ.
BIG NEWS: ಮತ್ತೆ ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ಕ್ಕೆ ಚುನಾವಣೆಗೆ ದಿನಾಂಕ ಫಿಕ್ಸ್
BREAKING: ಬೆಂಗಳೂರಲ್ಲಿ ಕಾಲೇಜು ಹಿಂಭಾಗ ನವಜಾತ ಶಿಶು ಪತ್ತೆ: ನಿನ್ನೆ ಜನಿಸಿದ ಮಗು ಎಸೆದು ಹೋದ ದುರುಳರು








