ಬೆಂಗಳೂರು: ಹಾಸನಾಂಭ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ಯಾಕೇಜ್ ಪ್ರವಾಸವನ್ನು ಕೆ ಎಸ್ ಆರ್ ಟಿಸಿ ಆರಂಭಿಸಿದೆ. ಈ ಮೂಲಕ ಹಾಸನಾಂಭ ಭಕ್ತರಿಗೆ ಕೆ ಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್-2025ರ ಮಾಹೆಯಲ್ಲಿ ಹಾಸನ ನಗರದಲ್ಲಿ ಜರುಗುವ ಹಾಸನಾಂಭ ಜಾತ್ರಾ ಮಹೋತ್ಸವ-2025 ರ ಅಂಗವಾಗಿ ಹಾಸನಾಂಭ ದೇವಿಯ ದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ (8 ಕರ್ನಾಟಕ ಸಾರಿಗೆ+2 ಅಶ್ವಮೇಧ+2 ವೋಲ್ವೊ) 10 ಮಾರ್ಗಗಳ ಟೂರ್ ಪ್ಯಾಕೇಜ್‌ನ್ನು ಸಿದ್ದಪಡಿಸಿ ಸದರಿ ಟೂರ್ ಪ್ಯಾಕೇಜ್ ಅನ್ನು ದಿನಾಂಕ:10.10.2025 ರಿಂದ ದಿನಾಂಕ:22.10.2025 ರವರೆಗೆ ಹಮ್ಮಿಕೊಳ್ಳಲಾಗಿರುತ್ತದೆ. ಸದರಿ 10(+2 ವೋಲ್ವೋ) ಪ್ಯಾಕೇಜ್ ಪ್ರವಾಸದ ಮಾರ್ಗಗಳ ವಿವರ ಈ ಕೆಳಕಂಡಂತಿರುತ್ತದೆ.
ಪ್ಯಾಕೇಜ್ ಟೂರ್
ಹಾಸನ ನಗರ ಬಸ್ ನಿಲ್ದಾಣದಿಂದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಗಳಿಗೆ ವೊಲ್ವೋ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆ ವಾಹನಗಳನ್ನು ಕಾರ್ಯಾಚರಣೆ, ಹೊರಡುವ ಸಮಯ ಹಾಗೂ ಸ್ಥಳಗಳ ವಿವರ ಕೆಳಕಂಡಂತಿದೆ.
ಸದರಿ ಪ್ಯಾಕೇಜ್ ಪ್ರವಾಸ ಸಂಬಂಧ ಕರಾರಸಾನಿಗಮದ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 7760990518, 7760990519, 7760990520, 7760990523. ಆನ್ ಲೈನ್ ಮೂಲಕವೂ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದಾಗಿದೆ. ಕೆ ಎಸ್ ಆರ್ ಟಿ ಸಿಯ www.ksrtc.in ಜಾಲತಾಣಕ್ಕೆ ಭೇಟಿ ನೀಡಿ, ಟಿಕೆಟ್ ಬುಕ್ ಮಾಡುವಂತೆ ಮನವಿ ಮಾಡಲಾಗಿದೆ.
BREAKING: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್, ಬೆದರಿಕೆ ಕೇಸ್: 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’