ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವಂತ ಹಾಸನಾಂಬೆಯ ಭಾಗಿಲು ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯೋದು. ಇದೀಗ ಭಾಗಿಲು ತೆಗೆದಿದ್ದು, ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀವು ಹಾಸನಾಂಬೆ ತಾಯಿಯ ದರ್ಶನಕ್ಕೆ ತೆರಳುತ್ತಿದ್ದರೇ ದರ್ಶನದ ಸಮಯವನ್ನು ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ಹಾಸನ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 16-10-2025, ದಿನಾಂಕ 18-10-2025 ಮತ್ತು ದಿನಾಂಕ 21-10-2025ರಂದು ಮೂರು ದಿನಗಳ ಕಾಲ ರಾತ್ರಿ 12 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ತಾಯಿ ಹಾಸನಾಂಬ ದೇವಿಯ ಅಲಂಕಾರ ಬದಲಾವಣೆ, ಧಾರ್ಮಿಕ ವಿಧಿ ವಿಧಾನ ಕಾರ್ಯ ಪ್ರಯುಕ್ತ ದೇವಿಯ ದರ್ಶನದ ಸಮಯ ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ 5 ಗಂಟೆಗಳ ದೀರ್ಘ ಕಾಲಾವಧಿಯಲ್ಲಿ ದೇವಾಲಯದ ಪ್ರವೇಶ ಬಾಗಿಲು ಮುಚ್ಚಲಾಗುವ ಬಗ್ಗೆ ಭಕ್ತಾದಿಗಳು ದರ್ಶನಕ್ಕೆ ಬರುವ ಸಮಯ ಯೋಜನೆ ರೂಪಿಸಿಕೊಳ್ಳಲು ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ವಿಶೇಷ ಸೂಚನೆಯಲ್ಲಿ ಈ ಮೂರು ದಿನಗಳಲ್ಲಿ 2 ಗಂಟೆ ಮುಂಚಿತವಾಗಿ ರಾತ್ರಿ 10 ಗಂಟೆಗೆ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು ಎಂದಿದ್ದಾರೆ.
ಹೀಗಿದೆ ಮೂರು ದಿನಗಳು ಹಾಸನಾಂಬ ದೇವಿಯ ದರ್ಶನದ ಸಮಯ ಬದಲಾವಣೆ ವಿವರ
ದಿನಾಂಕ 16-10-2025ರ ಗುರುವಾರದಂದು ಮುಂಜಾನೆ 5ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೇ ರಾತ್ರಿ 12ರಿಂದ ಮುಂದಿನ ಮುಂಜಾನೆ 5ರವರೆಗೆ ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ದಿನಾಂಕ 18-10-2025ರ ಶನಿವಾರದಂದು ಮುಂಜಾನೆ 5ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೇ ರಾತ್ರಿ 12ರಿಂದ ಮುಂದಿನ ಮುಂಜಾನೆ 5ರವರೆಗೆ ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ದಿನಾಂಕ 21-10-2025ರ ಶನಿವಾರದಂದು ಮುಂಜಾನೆ 5ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೇ ರಾತ್ರಿ 12ರಿಂದ ಮುಂದಿನ ಮುಂಜಾನೆ 5ರವರೆಗೆ ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

ಸಾಗರದ ಶ್ರೀಗಂಧದ ಕಲಾ ಸಂಕೀರ್ಣದ ಶಿಲ್ಪಗುರುಕುಲದ ದುರಸ್ತಿ ಕಾಮಗಾರಿಗೆ 65.80 ಲಕ್ಷ ಮಂಜೂರು ಮಾಡಿ ಸರ್ಕಾರ ಆದೇಶ
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT








