ಬೆಂಗಳೂರು: ನಗರದಲ್ಲಿ ಲಾಲ್ ಬಾಗ್ ಫಲ ಪುಷ್ಪದ ಮಾದರಿಯಲ್ಲೇ ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಸಿದ್ಧವಾಗಿದೆ. ನವೆಂಬರ್.27ರಿಂದ ಡಿಸೆಂಬರ್.7ರವರೆಗೆ ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ ಮಾಹಿತಿ ಹಂಚಿಕೊಂಡಂತ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ಅವರು, ಕಬ್ಬನ್ ಪಾರ್ಕ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9ರಿಂದ ಸಂಜೆ 8 ಗಂಟೆಯವರೆಗೆ ವೀಕ್ಷಣೆಗೆ ಲಭ್ಯವಿರಲಿದೆ ಎಂದರು.
ಮಕ್ಕಳ ದಿನಾಚರಣೆಯ ಸಲುವಾಗಿ ಮಕ್ಕಳ ಹಬ್ಬದ ರೀತಿಯಲ್ಲಿ ಕಬ್ಬನ್ ಪಾರ್ಕ್ ನಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ. ಪ್ರತಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ. ಹಾಡು, ಸಂಗೀತಗಳನ್ನು ಆಯೋಜಿಸಲಾಗಿದೆ. ಮಕ್ಕಳನ್ನು ಆಕರ್ಷಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. 100 ಮಳಿಗೆಗಳು ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನದಲ್ಲಿ ಇರಲಿವೆ. ಬೀಜ, ಸಸಿಗಳು ದೊರೆಯಲಿವೆ ಎಂದು ಹೇಳಿದರು.
ವಿವಿಧ ಬಗೆಯ ಹೂವುಗಳಿಂದ ಹಂಪಿ ರಥ ನಿರ್ಮಿಸಲಾಗುತ್ತಿದೆ. ಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತ ಮಕ್ಕಳು, ಪೋಷಕರಿಗೆ ಪುಡ್ ಸ್ಟಾಲ್ ಕೂಡ ಇರಲಿದ್ದು, ಬಗೆ ಬಗೆಯ ಖಾದ್ಯಗಳನ್ನು ಸವಿಯಬಹುದಾಗಿದೆ. ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನ ಮಕ್ಕಳಿಗೆ, ಪೋಷಕರಿಗೆ ಅದ್ಬುತ ಅನುಭವವನ್ನು ನೀಡಲಿದೆ. ತಪ್ಪದೇ ನವೆಂಬರ್.27ರಿಂದ ಡಿಸೆಂಬರ್.7ರಲ್ಲಿ ಭೇಟಿ ನೀಡುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ಮನವಿ ಮಾಡಿದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
BREAKING: ಗ್ಯಾಂಗ್ ಸ್ಟರ್ ಅನ್ಮೋಲ್ ಬಿಷ್ಣೋಯ್ ಗೆ 11 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ | Anmol Bishnoi
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!








