ಬೆಳಗಾವಿ: ಜಿಲ್ಲೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯ ಎದುರೇ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಆರೋಪಿಯೊಬ್ಬ ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರದಂದು ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಲಯಕ್ಕೆ ಆಸ್ತಿ ವಿಚಾರಕ್ಕಾಗಿ ಮೀನಾಕ್ಷಿ ರಾಮಚಂದ್ರ ಶಿಂಧೆ ಎಂಬುವರು ಆಗಮಿಸಿದ್ದರು. ಇದೇ ಕೇಸ್ ಸಂಬಂಧ ಕೋತನಟ್ಟಿ ಗ್ರಾಮದ ಬಾಬಾ ಸಾಹೇಬ್ ಚೌಹಾಣ್ ಕೂಡ ಹಾಜರಾಗಿದ್ದರು.
ಆಸ್ತಿ ವಿಚಾರಕ್ಕಾಗಿ ಸೋದರತ್ತೆಯ ಜೊತೆಗೆ ಬಾಬು ಸಾಹೇಬ್ ಅನೇಕ ಬಾರಿ ಜಗಳ ಕೂಡ ಆಡಿದ್ದರಂತೆ. ಮಂಗಳವಾರದಂದು ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದಂತ ಬಾಬಾ ಸಾಹೇಬ್ ಸಿಟ್ಟಿನಿಂದ ಕುಡುಗೋಲಿನಿಂದ ಮೀನಾಕ್ಷಿ ಮೇಲೆ ದಾಳಿ ನಡೆಸಿದ್ದಾನೆ.
ಸ್ಥಳದಲ್ಲಿದ್ದಂತ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಕ್ಷಣಕಾಲ ನಡೆದಂತ ಈ ಘಟನೆಯಿಂದ ಕೋರ್ಟ್ ಆವರಣದಲ್ಲಿ ಆತಂಕವನ್ನೂ ಮೂಡಿಸಿತ್ತು. ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದಂತ ಆರೋಪಿ ಬಾಬಾ ಸಾಹೇಬ್ ಬಂಧಿಸಿ, ಜೈಲಿಗಟ್ಟಿದ್ದಾರೆ.
ಶಿವಮೊಗ್ಗ: ಸಾಗರ ತಾಲ್ಲೂಕು KUWJ ಸಂಘದ ‘ಅಧ್ಯಕ್ಷರಾಗಿ ಮಹೇಶ್ ಹೆಗಡೆ’ ಅವಿರೋಧವಾಗಿ ಆಯ್ಕೆ
BIG NEWS: ಸಾಗರ ತಾಲ್ಲೂಕಲ್ಲಿ ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಆರ್ಥಿಕ ಇಲಾಖೆ’ ಅನುಮತಿಸಿ ಆದೇಶ








