ಮಂಡ್ಯ: ಜಿಲ್ಲೆಯಲ್ಲಿ ಅಕ್ರಮವಾಗಿ ಕರುಗಳ ಮಾರಾಟಕ್ಕೆ ಗ್ಯಾಂಗ್ ಮುಂದಾಗಿತ್ತು. ವಿಷಯ ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಗ್ತಿದ್ದಂತೆ ಕರುಗಳನ್ನ ಬಿಟ್ಟು ಎಸ್ಕೇಪ್ ಆಗಿರುವಂತ ಘಟನೆ ತೆಂಡೆಕೆರೆ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ತೆಂಡೆಕೆರೆ ಗ್ರಾಮದ ಸಂತೆಯಲ್ಲಿ 50 ಕ್ಕೂ ಹೆಚ್ಚು ಕರುಗಳನ್ನ ಖರೀದಿಸಿ ಕಟ್ಟಡವೊಂದರಲ್ಲಿ ಕೂಡಿಟ್ಟದದ್ದರು. ವಿಷಯ ತಿಳಿದ ಮೈಸೂರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಹೀಗೆ ದಾಳಿ ಮಾಡ್ತಿದ್ದಂತೆ ಅಕ್ರಮ ಗೋ ಸಾಗಾಣಿಕೆ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದೆ. 50ಕ್ಕೂ ಹೆಚ್ಚು ಕರುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ








