ರಾಮನಗರ: ಚನ್ನಪಟ್ಟಣದ ಉಪ ಚುನಾವಣೆ ಸಂಬಂಧ ನಡೆಸಲಾಗುತ್ತಿದ್ದಂತ ಸಭೆಯ ಮೇಲೆ ಎಸಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ 500 ಕಾರ್ಯಕರ್ತರಿಗಾಗಿ ತಯಾರಿಸಿದ್ದಂತ ಬಾಡೂಟವನ್ನು ಜಪ್ತಿ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಶಿಶಿರ ಹೋಂ ಸ್ಟೇನಲ್ಲಿ ಸಿ.ಪಿ ಯೋಗೇಶ್ವರ್ ಅವರ ನೇತೃತ್ವದಲ್ಲಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋ ಸಂಬಂಧ ಮುಖಂಡರ ಸಭೆ ನಡೆಸಲಾಗುತ್ತಿತ್ತು. ಈ ಸಭೆಯನ್ನು ನಡೆಸಲು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ.
ಈ ಹಿನ್ನಲೆಯಲ್ಲಿ ಚನ್ನಪಟ್ಟಣ ಚುನಾವಣಾಧಿಕಾರಿ ಹಾಗೂ ಎಸಿ ಬಿಜೋಯ್ ನೇತೃತ್ವದಲ್ಲಿ ಪೊಲೀಸರು, ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ 500 ಕಾರ್ಯಕರ್ತರಿಗೆ ಊಟ ಹಾಕಲು ತಯಾರಿಸಿದ್ದಂತ ಬಾಡೂಟವನ್ನು ಸೀಜ್ ಮಾಡಿದ್ದಾರೆ.
ಶಿಶಿರ ಹೋಂ ಸ್ಟೇನಲ್ಲಿ ರೆಡಿಯಾಗಿದ್ದಂತ ಮಟನ್ ಸುಕ್ಕಾ, ಮಟನ್ ಬೋಟಿ, ಚಿಕನ್ ಕಬಾಬ್, ಗೀ ರೈಸ್, ಅನ್ನ, ಸಾಂಬಾರ್ ಹಾಗೂ ಮುದ್ದೆಯನ್ನು ಜಪ್ತಿ ಮಾಡಲಾಗಿದೆ. ಕಾರ್ಯಕರ್ತರಿಗೆ ಊಟ ಹಾಕೋದಕ್ಕೂ ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಅನುಮತಿಯನ್ನು ಪಡೆಯಬೇಕಿತ್ತು. ಆದರೇ ಅದ್ಯಾವ ಅನುಮತಿಯನ್ನು ಪಡೆದಿರಲಿಲ್ಲ.
ರಾಜ್ಯದ ಪರಿಶಿಷ್ಟ ಪಂಗಡದವರಿಗೆ ಗುಡ್ ನ್ಯೂಸ್: ಶೇ.50ರಷ್ಟು ಸಬ್ಸಿಡಿ ದರದಲ್ಲಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
BREAKING ; ದೇಶದ ರೈತರಿಗೆ ದೀಪಾವಳಿ ಗಿಫ್ಟ್ ; ಹಿಂಗಾರು ಬೆಳೆಗಳ ‘ಕನಿಷ್ಠ ಬೆಂಬಲ ಬೆಲೆ’ ಹೆಚ್ಚಳ |MSP Hike