ಶಿವಮೊಗ್ಗ: ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರಿಗೆ 3000 ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿ ಬಿದ್ದಿರುವಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪಿರಾದುದಾರರಾದ ವಿನೋದ ಬಿ. ಬಿನ್ ಬಾಲಕೃಷ್ಣ ವಾಸ 1ನೇ ಕ್ರಾಸ್, ಶ್ರೀರಾಮಪುರ ಗ್ರಾಮ, ಶಿವಮೊಗ್ಗ ತಾಲ್ಲೂಕ್, ಶಿವಮೊಗ್ಗ ಜಿಲ್ಲೆ ರವರು ದಿನಾಂಕ:17-07-2025 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನಲ್ಲಿ ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶಂಕರಿರವರ ಹೆಸರಿನಲ್ಲಿನ 30×50 ಅಳತೆಯ ಸೈಟಿನಲ್ಲಿ 23X38 ಅಡಿ ಅಳತೆಯಲ್ಲಿ ಆರ್.ಸಿ.ಸಿ.ಮನೆಯನ್ನು ಕಟ್ಟಿದ್ದು, ಸದರಿ ಮನೆಯ ಇ-ಸ್ವತ್ತು ಮಾಡಿಸಲು ಪಿದ್ಯಾದಿ ತಾಯಿಯವರು ದಿನಾಂಕ: 28-11-2024 ರಂದು ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಛೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ ಎಂದಿದೆ.
ಈ ಬಗ್ಗೆ ವಿದ್ಯಾದುದಾರರು ಇ-ಸ್ವತ್ತು ಮಾಡಿಕೊಡುವಂತೆ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಾದ ಕುಮಾರನಾಯ್ಕ ಅವರ ಬಳಿ ಹಲವು ಬಾರಿ ಹೋದಾಗ ಕುಮಾರನಾಯ್ಕ ಅವರು ಇ-ಸ್ವತ್ತು ಮಾಡಿಕೊಡದೆ ಓಡಾಡಿಸುತ್ತಿದ್ದು ನಂತರ ರೂ.3000/- ಲಂಚದ ಹಣಕ್ಕೆ ಬೇಡಿಕೆ ಇಟ್ಟದ್ದು ಸಂಭಾಷಣೆಯನ್ನು ಪಿರಾದುದಾರರು ವಾಯ್ಸ್ ರೆಕಾರ್ಡ್ ಅನ್ನು ಮಾಡಿಕೊಂಡಿರುತ್ತಾರೆ ಮತ್ತು ಪಿದ್ಯಾದುದಾರರಿಗೆ ಲಂಚದ ಹಣವನ್ನು ಕೊಡಲು ಇಷ್ಟವಿಲ್ಲದೆ ಇರುವುದರಿಂದ ಸದರಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಾದ ಕುಮಾರನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಿದ ಮೇರೆಗೆ ಕಲಂ 7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದೆ.
ದಿನಾಂಕ: 17-07-2025ರ ಇಂದು ಮದ್ಯಾಹ್ನ 02-10 ಗಂಟೆ ಸಮಯದಲ್ಲಿ ಅಪಾದಿತರಾದ ಕುಮಾರನಾಯ್ಕ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ರವರು ಪಿಲ್ಯಾದಿಯವರಿಂದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರ ಕೊಠಡಿಯಲ್ಲಿ ಪಿರಾದಿಯಿಂದ ರೂ 3000/- ಲಂಚದ ಹಣವನ್ನು ತೆಗೆದಕೊಂಡಿದ್ದು, ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ. ಲಂಚದ ಹಣವನ್ನು ಜಪ್ತಿ ಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಸರ್ಕಾರಿ ನೌಕರನಾದ ಕುಮಾರನಾಯ್ಕ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ರವರನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಗುರುರಾಜ್ ಎನ್ ಮೈಲಾರ ಪೊಲೀಸ್ ನಿರೀಕ್ಷಕರು ಕೈಗೊಂಡಿರುತ್ತಾರೆ ಎಂದು ತಿಳಿಸಿದೆ.
ಸದರಿ ಟ್ರ್ಯಾಪ್ ಕಾರ್ಯಚರಣೆಯನ್ನು ಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಗುರುರಾಜ್ ಎನ್ ಮೈಲಾರ್ ಪೊಲೀಸ್ ನಿರೀಕ್ಷಕರು ಕಾರ್ಯಚರಣೆಯನ್ನು ನಡೆಸಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ರುದ್ರೇಶ್ ಕೆ.ಪಿ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಸಿಬ್ಬಂದಿಯವರಾದ ಯೋಗೇಶ್, ಸಿ.ಹೆಚ್.ಸಿ, ಟೀಕಪ್ಪ ಸಿ.ಹೆಚ್.ಸಿ ಸುರೇಂದ್ರ ಸಿ.ಹೆಚ್.ಸಿ, ಮಂಜುನಾಥ್ ಸಿ.ಹೆಚ್.ಸಿ. ಬಿ.ಟಿ ಚನ್ನೇಶ್, ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ ಪ್ರಕಾಶ್ ಬಾರಿದಮರ, ಸಿ.ಪಿ.ಸಿ. ಅರುಣ್ ಕುಮಾರ್ ಯು.ಬಿ ಸಿ.ಪಿ.ಬಿ ಅಂಜಲಿ ಮ.ಪಿ.ಸಿ, ಚಂದ್ರಿಬಾಯಿ ಮ.ಪಿ.ಸಿ, ಗೋಪಿ ಎ.ಪಿ.ಸಿ ಪ್ರದೀಪ್ ಎ.ಹೆಚ್.ಸಿ ಜಯಂತ್ ಎ.ಪಿ.ಸಿ ರವರುಗಳು ಹಾಜರಿರುತ್ತಾರೆ ಎಂಬುದಾಗಿ ಹೇಳಿದೆ.
BREAKING: ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | Vijay Deverakonda
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!