ತೈವಾನ್: ಮಧ್ಯ ತೈವಾನ್ ನಗರ ತೈಚುಂಗ್ ನ ಡಿಪಾರ್ಟ್ ಮೆಂಟ್ ಸ್ಟೋರ್ ನಲ್ಲಿ ಗುರುವಾರ ಶಂಕಿತ ಅನಿಲ ಸ್ಫೋಟ ಸಂಭವಿಸಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ನಿರ್ಮಾಣ ಕಾರ್ಯ ನಡೆಯುತ್ತಿದ್ದ ಕಟ್ಟಡದ 12 ನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಕಟ್ಟಡ ಕಾಮಗಾರಿಯಿಂದಾಗಿ 12 ನೇ ಮಹಡಿಯಲ್ಲಿರುವ ಫುಡ್ ಕೋರ್ಟ್ ಅನ್ನು ಆ ಸಮಯದಲ್ಲಿ ಮುಚ್ಚಲಾಗಿತ್ತು ಎಂದು ಅದು ಹೇಳಿದೆ.
ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದು, ಸ್ಫೋಟದ ಕಾರಣದ ಬಗ್ಗೆ ತ್ವರಿತ ತನಿಖೆಗೆ ಕರೆ ನೀಡಿದ್ದಾರೆ