ತುಮಕೂರು: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ 28 ಪ್ರವಾಸಿಗರು ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಇಡೀ ದೇಶವೇ ಶೋಕಾಚರಣೆಯಲ್ಲಿ ಇರುವಾಗ, ತುಮಕೂರು ಸಿಬಿಐ ಮಾತ್ರ ತೆರೆದ ಜೀಪ್ ನಲ್ಲಿ ರೋಡ್ ಶೋ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದಂತ ಘಟನೆ ನಡೆದಿದೆ.
ತುಮಕೂರಿನ ಸಿಪಿಐ ಆಗಿದ್ದಂತ ಬಿಎಸ್ ದಿನೇಶ್ ಕುಮಾರ್ ಗೆ ಕುಶಾಲನಗರಕ್ಕೆ ವರ್ಗಾವಣೆಯಾಗಿತ್ತು. ಇಂದು ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಪ್ರವಾಸಿಗರು ಮೃತಪಟ್ಟು ಶೋಕಾಚರಣೆಯಲ್ಲಿ ಇಡೀ ದೇಶವೇ ತೊಡಗಿರುವಾಗ ಅದ್ಧೂರಿ ಬೀಳ್ಕೊಡುಗೆ ನೀಡಲಾಗಿದೆ.
ತೆರೆದ ಜೀಪಿನಲ್ಲಿ Rally ಕೂಡ ಮಾಡಿರುವಂತ ಅವರಿಗೆ ಕ್ರೇನ್ ಮೂಲಕ ಹಾರವನ್ನು ಹಾಕಿ, ಬೀಳ್ಕೊಡುಗೆ ನೀಡಲಾಗಿದೆ. ಈ ಮೂಲಕ ಶೋಕಾಚರಣೆಯ ಘಟನೆಯ ನಡುವೆ ತುಮಕೂರು ಸಿಪಿಐ ಬಿಎಸ್ ದಿನೇಶ್ ಕುಮಾರ್ ಅವರು ಬೀಳ್ಕೊಡುಗೆಯನ್ನು ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್!