ಬೆಂಗಳೂರು : ಆಸ್ಟರಿಯಾ ಏರೋಸ್ಪೇಸ್ ಎಂಬುದು ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿ. ಅದು ಅತ್ಯಾಧುನಿಕ ನವೀನ ಬಗೆಯ ಕ್ಲೌಡ್ ಪ್ಲಾಟ್ ಫಾರ್ಮ್ ಅನ್ನು ಪರಿಚಯಿಸುತ್ತಿದ್ದು, ಆ ಪ್ಲಾಟ್ ಫಾರ್ಮ್ ಹೆಸರು ಸ್ಕೈಡೆಕ್. ಇದೀಗ ಅದನ್ನು ಸೆಲ್ಫ್ ಸರ್ವೀಸ್ SaaS ಸಲ್ಯೂಷನ್ ಆಗಿ ನೀಡುತ್ತಿದೆ.
ಉದ್ಯಮಗಳಿಗೆ ಡ್ರೋನ್ ದತ್ತಾಂಶ ನಿರ್ವಹಣೆಯನ್ನು ಸುವ್ಯವಸ್ಥಿತ ಮಾಡುವುದಕ್ಕೆ ಸ್ಕೈಡೆಕ್ ಪ್ಲಾಟ್ ಫಾರ್ಮ್ ಬಲ ತುಂಬುತ್ತದೆ. ಡ್ರೋನ್ ಡೇಟಾದ ಬಳಕೆದಾರರು ಹಾಗೂ ಸೇವಾ ಪೂರೈಕೆದಾರರು ಇಬ್ಬರಿಗೂ ಇದು ಸಮಗ್ರ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ರೀತಿಯಲ್ಲಿ ಸೇವೆ ಒದಗಿಸುತ್ತದೆ. ಆ ಮೂಲಕ ಅವರ ಡಿಜಿಟಲ್ ರೂಪಾಂತರ ಪ್ರಯಾಣವನ್ನು ಸರಳಗೊಳಿಸುತ್ತದೆ ಮತ್ತು ಡ್ರೋನ್ ನಿಂದ ಡೇಟಾ ಚಾಲಿತ ಒಳನೋಟಗಳನ್ನು ಸಕ್ರಿಯಗೊಳಿಸುತ್ತದೆ.
ಜಿಐಎಸ್ ನಂಥ ಉದ್ಯಮಗಳು ನಿರ್ಮಾಣ, ತೈಲ ಹಾಗೂ ಅನಿಲ, ಕೃಷಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿವೆ. ಸ್ಕೈಡೆಕ್ ಇಂಥವುಗಳಿಗೆ ತಂತ್ರಜ್ಞಾನದ ದೃಷ್ಟಿಯಿಂದ ಆಧುನಿಕವಾದ ಸಲಕರಣೆಗಳು ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಡ್ರೋನ್ ಡೇಟಾವನ್ನು ಬಳಸಿಕೊಂಡು, ಸೈಟ್ ಗಳು ಮತ್ತು ತಮ್ಮ ನಿರ್ಣಾಯಕ ಸ್ವತ್ತುಗಳನ್ನು ಡಿಜಿಟಲ್ ಆಗಿ ರೂಪಾಂತರ ಮಾಡಿಕೊಳ್ಳಬಹುದಾಗಿರುತ್ತದೆ.
ಈ ಕ್ಲೌಡ್ ಪ್ಲಾಟ್ ಫಾರ್ಮ್ ಸುರಕ್ಷಿತವಾದ, ಕೇಂದ್ರೀಕೃತ ಡ್ರೋನ್ ನಿರ್ವಹಣೆ ಒದಗಿಸುವುದರ ಜೊತೆಗೆ ತತ್ ಕ್ಷಣಕ್ಕೆ ದೃಶ್ಯವನ್ನು ಸಹ ತಂದುಕೊಳ್ಳುತ್ತದೆ, ಸಹಯೋಗ ಹಾಗೂ ವರದಿ ಮಾಡುವ ಸಾಧನಗಳೊಂದಿಗೆ ಸುವ್ಯವಸ್ಥಿತ ಸೈಟ್ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಅನುಕೂಲ ಮಾಡಿಕೊಡುತ್ತದೆ. ಸ್ಕೈಡೆಕ್ ಎಷ್ಟು ವಿಶಿಷ್ಟ ಅಂದರೆ, ಅದರ ಪೂರ್ವ- ನಿರ್ಮಿತ, ಉದ್ಯಮಕ್ಕೆ ನಿರ್ದಿಷ್ಟ ಕೃತಕ ಬುದ್ಧಿಮತ್ತೆ (ಎಐ- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮಾದರಿಗಳಿಂದಾಗಿ ಅದು ವೈಮಾನಿಕ ದತ್ತಾಂಶಗಳನ್ನು ಶೀಘ್ರವಾಗಿ ವಿಶ್ಲೇಷಣೆ ಮಾಡುತ್ತದೆ. ಪೂರ್ವಭಾವಿಯಾಗಿ ನಿರ್ಧಾರ ಒದಗಿಸುತ್ತದೆ ಮತ್ತು ಉದ್ಯಮದ ಉತ್ಕೃಷ್ಟತೆಯನ್ನು ಸಾಧಿಸುತ್ತದೆ.
ಯೋಜನಾ ನಿರ್ವಹಣೆ, ಹಾರಾಟದ ಯೋಜನೆ, ಮತ್ತು ಅನುಷ್ಠಾನ ಇವೆಲ್ಲವನ್ನೂ ಸಂಯೋಜನೆ ಮಾಡುವ ಮೂಲಕವಾಗಿ ಡ್ರೋನ್ ಸೇವಾ ಪೂರೈಕೆದಾರರಿಗೆ ಕೆಲಸದ ಹರಿವು (ವರ್ಕ್ ಫ್ಲೋ) ಸರಾಗ ಮಾಡಿಕೊಡುತ್ತದೆ ಸ್ಕೈಡೆಕ್. ಆಟೋಮೆಟೆಡ್ ಡ್ರೋನ್ ದತ್ತಾಂಶದ ಸಂಸ್ಕರಣೆಗೆ ಇದು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ, ಕ್ಲೌಡ್ ಆಧಾರಿತವಾದ ಸಲ್ಯೂಷನ್ ಆಗಿದ್ದು, ಉದ್ಯಮದ ಅಗತ್ಯಗಳಿಗೆ ವ್ಯಾಪಕವಾಗಿ ನೆರವಾಗುತ್ತದೆ. ಇದರ ಜೊತೆಗೆ ಸ್ಕೈಡೆಕ್ ಏಕೀಕೃತವಾದ ರೆಪಾಸಿಟರಿ ಡ್ರೋನ್ ದತ್ತಾಂಶವನ್ನು ಒದಗಿಸುತ್ತದೆ, ಸಹಯೋಗ ವಿಶ್ಲೇಷಣೆಯನ್ನು ಸರಳಗೊಳಿಸುತ್ತದೆ, ಮತ್ತು ಬಳಕೆದಾರರೊಂದಿಗೆ ಡೇಟಾ ಹಂಚಿಕೊಳ್ಳುತ್ತದೆ.
ಆಸ್ಟರಿಯಾ ಏರೋಸ್ಪೇಸ್ ಸಹ ಸಂಸ್ಥಾಪಕರಾದ ನೀಲ್ ಮೆಹ್ತಾ ಮಾತನಾಡಿ, “ಸುರಕ್ಷಿತ ಮತ್ತು ವ್ಯಾಪಕವಾದ ಡ್ರೋನ್ ಕಾರ್ಯಾಚರಣೆಗಳು ಮತ್ತು ಡೇಟಾ ನಿರ್ವಹಣೆ ಸಲ್ಯೂಷನ್ ಗಳನ್ನು ಬಯಸುವ ಉದ್ಯಮಗಳು ಮತ್ತು ವೃತ್ತಿಪರರಿಗೆ ಸ್ಕೈಡೆಕ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಹೇಳಿದ್ದಾರೆ.
“ಸ್ಕೈಡೆಕ್ ಕಠಿಣವಾದ ಸವಾಲಿನ ಅಂಶಗಳನ್ನು ಸರಿಪಡಿಸುತ್ತದೆ, ದತ್ತಾಂಶವನ್ನು ದಾಖಲಿಸುವುದರಿಂದ ಹಿಡಿದು ಕಾರ್ಯಸಾಧುವಾಗುವಂಥ ಒಳನೋಟಗಳ ತನಕ ಎಲ್ಲ ಉದ್ಯಮಗಳಿಗೂ ಡ್ರೋನ್ ಆಧಾರಿತವಾದ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಕೆಲಸದ ಹರಿವನ್ನು ಸುವ್ಯವಸ್ಥಿತಗೊಳಿಸುತ್ತದೆ. ನಮ್ಮಲ್ಲಿನ ಹೊಂದಿಕೊಳ್ಳುವ ಬೆಲೆಯು ಎಲ್ಲ ಗಾತ್ರದ ಉದ್ಯಮಗಳಿಗೂ – ವ್ಯವಹಾರಗಳಿಗೂ ತಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವುದನ್ನು ಸ್ಕೈಡೆಕ್ ಸಾಮರ್ಥ್ಯ ಖಾತ್ರಿ ಮಾಡುತ್ತದೆ,”
ಉಚಿತವಾಗಿ ಸ್ಕೈಡೆಕ್ ಪ್ರಯೋಗಾರ್ಥವನ್ನು ಆರಂಭಿಸುವುದಕ್ಕೆ ಮತ್ತು ಸ್ಕೈಡೆಕ್ ನ ರೂಪಾಂತರ ಸಾಮರ್ಥ್ಯವನ್ನು ಅನುಭವ ಪಡೆಯುವುದಕ್ಕೆ https://asteria.co.in/skydeck ಗೆ ಭೇಟಿ ನೀಡಿ.
ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಬಗ್ಗೆ
ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಎಂಬುದು ವೈಮಾನಿಕ ದತ್ತಾಂಶದಿಂದ ಕ್ರಿಯಾಶೀಲ ಬುದ್ಧಿಮತ್ತೆಯನ್ನು ಒದಗಿಸುವ ಪೂರ್ಣ-ಪ್ರಮಾಣದ ಡ್ರೋನ್ ತಂತ್ರಜ್ಞಾನ ಕಂಪನಿಯಾಗಿದೆ. ಆಸ್ಟರಿಯಾ ತನ್ನ ಆಂತರಿಕ ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಸರ್ಕಾರ ಹಾಗೂ ಉದ್ಯಮ ಗ್ರಾಹಕರಿಗೆ ಅವರಿಗೆ ಬೇಕಾದಂಥ ರೀತಿಯಲ್ಲಿ ರೂಪಿಸಿದ ಗ್ರಾಹಕ ನಿರ್ದಿಷ್ಟ ಡ್ರೋನ್ ಸಲ್ಯೂಷನ್ ಗಳನ್ನು ಅಭಿವೃದ್ಧಿಪಡಿಸುತ್ತದೆ. ದೀರ್ಘಾವಧಿಯ, ಗುಣಮಟ್ಟ-ಕೇಂದ್ರಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ರಕ್ಷಣೆ ಮತ್ತು ಹೋಮ್‌ಲ್ಯಾಂಡ್ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಯುಟಿಲಿಟಿ, ದೂರಸಂಪರ್ಕ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಒದಗಿಸಲು ಆಸ್ಟರಿಯಾವು ವಿಶ್ವಾಸಾರ್ಹ ಪಾಲುದಾರ ಆಗಿದೆ. ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ, ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಹುಪಾಲು ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.asteria.co.in
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ