ಬೆಂಗಳೂರು: 32 ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ (ಆಟೋ, ಟ್ಯಾಕ್ಸಿ, ವ್ಯಾನ್, ಶಾಸಗಿ ಬಸ್ಸುಗಳು, ಶಾಲಾ ಬಸ್ಸುಗಳು ಸರಕು ಸಾಗಣೆ ವಾಹನಗಳು ಹಾಗೂ ಇತರೆ ಸರಕು ಸಾಗಣೆ ವಾಹನಗಳು) ಮತ್ತು ವಾಹನಗಳ ಮಾಲೀಕರು ಮತ್ತು ಚಾಲಕರಿಂದ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಅವರಿಗೆ ಬೆಂಬಲ ಘೋಷಿಸಿದ್ದಾರೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಕಳೆದ ವರ್ಷ ಸೆಪ್ಟೆಂಬರ್ 11 ರಂದು ಮುಷ್ಕರ ನಡೆಸಿದ್ದ ಸಂದರ್ಭದಲ್ಲಿ ತಮ್ಮ 30 ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮಾನ್ಯ ಸಾರಿಗೆ ಸಚಿವರು 9 ತಿಂಗಳು 5 ದಿನದ ಅವಧಿಯಲ್ಲಿಯೇ 20 ಪ್ರಮುಖ ಬೇಡಿಕೆಗಳನ್ನು ಈಡೇರಿಸಿ, ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡು ಖಾಸಗಿ ವಾಹನ ಚಾಲಕರ ಹಿತಕಾಯುವಲ್ಲಿ ಶ್ರಮಿಸಿದ ಶ್ರೀ .ರಾಮಲಿಂಗಾ ರೆಡ್ಡಿ ಅವರಿಗೆ ಹಾಗೂ ಅವರ ಮಗಳಿಗೆ ನಮ್ಮ ಸಂಪೂರ್ಣ ಬೆಂಬಲವೆಂದು
ನಟರಾಜ್ ಶರ್ಮಾ, ವಕೀಲರು ಹಾಗೂ ಒಕ್ಕೂಟದ ಅಧ್ಯಕ್ಷರು ಘೋಷಿಸಿದ್ದಾರೆ.
ಪ್ರಮುಖ ಕ್ರಮಗಳಾದ ರ್ಯಾಪಿಡೋ ಬೈಕ್ ಟ್ಯಾಕ್ಸಿ ರದ್ಧತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.5.40 ಕೋಟಿ ವೆಚ್ಚದಲ್ಲಿ 2 ಇಂದಿರಾ ಕ್ಯಾಂಟೀನ್, ಅಗ್ರೀಗೇಟರ್ ಆ್ಯಪ್ Concept Note ತಯಾರಿ,ಅಸಂಘಟಿತ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಅದಕ್ಕಾಗಿ ಹಣ ಒದಗಿಸಲು ವಿಧಾನಸಭೆಯಿಂದ ಒಪ್ಪಿಗೆ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ, ಅಗ್ರಿಗೇಟರ್ ಲೈಸನ್ಸ್ ಹೊಂದಿರುವ ಓಲಾ/ ಊಬರ್ ಕಂಪನಿಗಳ ಡೈನಾಮಿಕ್ ದರ ರದ್ದು, ಹೀಗೆ ತಮ್ಮ 20 ಬೇಡಿಕೆಗಳನ್ನು ಅತ್ಯಲ್ಪ ಸಮಯದಲ್ಲಿ ಬಗೆಹರಿಸಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಚಿವರ ಪಾತ್ರ ಹಿರಿದಿದೆ.
ಖಾಸಗಿ ಚಾಲಕರ ಹಾಗೂ ಕುಟುಂಬದವರಿಗೆ ಸಚಿವರು ನ್ಯಾಯ ಒದಗಿಸಿರುವುದಕ್ಕೆ ಪ್ರಮುಖ ಸಂಘಟನೆಗಳ ಮುಖಂಡರಾದ ಶ್ರೀ. ರಘು, ಅಧ್ಯಕ್ಷರು,ಪೀಸ್ ಆಟೋ, ಜಿ.ನಾರಾಯಣಸ್ವಾಮಿ ಅಧ್ಯಕ್ಷರು, ಕರ್ನಾಟಕ ಚಾಲಕರ ಒಕ್ಕೂಟ, ಸದಾನಂದ ಸ್ವಾಮಿ, ಅಧ್ಯಕ್ಷರು, ಇಂಡಿಯನ್ ವೆಹಿಕಲ್ ಟ್ರೇಡ್ ಯುನಿಯನ್, ಜಯಣ್ಣ , ಅಧ್ಯಕ್ಷರು ಭಾರತ್ ಟ್ರಾನ್ಸಪೊರ್ಟ ಅಸೋಸಿಯೆಶನ್ , ಹಮೀದ್ ಮಾಲೀಕರು, ಟ್ಯಾಕ್ಸಿ ಚಾಲಕರ ಸಂಘ ಹಾಗೂ ಇತರೆ 32 ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಒಕ್ಕೊರಲಿನಿಂದ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ನಮ್ಮ ಬೆಂಬಲ ಎಂದು ಘೋಷಿಸಿದ್ದಾರೆ.
‘ಸ್ಯಾನಿಟರಿ ಪ್ಯಾಡ್’ ನಂತೆ ಚೀನಾದಲ್ಲಿ ರೈಲು ನಿಲ್ದಾಣ ನಿರ್ಮಾಣ! ಫೋಟೋ ವೈರಲ್