ಬೆಂಗಳೂರು: ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇಂದು ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ನಾಳೆಯ ವಿಧಾನಮಂಡಲದ ಕಲಾಪವನ್ನು ಬುಧವಾರಕ್ಕೆ ಮುಂದೂಡುವುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಆದರೇ ಇದೀಗ ಸ್ಪೀಕರ್ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ನಾಳೆ ನಿಗದಿಯಂತೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂಬುದಾಗಿ ಮಾಹಿತಿ ನೀಡಿದೆ.
ಇಂದು ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾದ ಕಾರಣ, ನಾಳೆಯ ವಿಧಾನಮಂಡಲದ ಕಲಾಪ ಮುಂದೂಡುವ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಪ್ರಕಟಿಸಿದ್ದರು. ಮಂಗಳವಾರದಂದು ರಾಜ್ಯಸಭಾ ಚುನಾವಣೆಯ ಕಾರಣ ಬುಧವಾರಕ್ಕೆ ವಿಧಾನಮಂಡಲದ ಕಲಾಪ ಮುಂದೂಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದರು.
ಆದರೇ ಈಗ ಸ್ಪೀಕರ್ ಕಚೇರಿಯಿಂದ ಶಾಸಕರಿಗೆ ಮೆಸೇಜ್ ರವಾನೆ ಮಾಡಲಾಗಿದ್ದು, ನಾಳೆ ನಿಗದಿಯಂತೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂಬುದಾಗಿ ಕಳುಹಿಸಲಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ನಾಳೆ ನಿಗದಿಯಂತೆ ವಿಧಾನಮಂಡಲದ ಕಲಾಪ ನಡೆಯೋದಾಗಿ ಸ್ಪೀಕರ್ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಳೆ ಬೆಳಿಗ್ಗೆ 9.30ಕ್ಕೆ ವಿಧಾನಸಭೆ ಕಾರ್ಯಕಲಾಪಗಳಲ್ಲಿ ಭಾಗಿಯಾಗಲಿದ್ದೇನೆ. 10.30ಕ್ಕೆ ವಿಧಾನ ಪರಿಷತ್ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಳ್ಳೋದಾಗಿ ತಿಳಿಸಿದ್ದಾರೆ.
ಇನ್ಮುಂದೆ ‘1ನೇ ತರಗತಿ ಪ್ರವೇಶ’ಕ್ಕೆ ‘ಕನಿಷ್ಠ 6 ವರ್ಷ’ ಕಡ್ಡಾಯ- ಕೇಂದ್ರ ಸರ್ಕಾರ
BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ವೃದ್ಧೆ’ಯನ್ನು ತುಂಡು ತುಂಡಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ