Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಭಾರತ’ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯಲಿದೆ ; ಫಿಚ್ ರೇಟಿಂಗ್ಸ್

12/02/2026 10:06 PM

ತಪ್ಪು ಮತ್ತು ಊಹಾಪೋಹ : ಏರ್ ಇಂಡಿಯಾ ಅಪಘಾತ ತನಿಖೆಯ ಕುರಿತ ಇಟಾಲಿಯನ್ ಮಾಧ್ಯಮ ವರದಿ ತಳ್ಳಿಹಾಕಿದ ಭಾರತ

12/02/2026 9:49 PM

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

12/02/2026 9:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ
KARNATAKA

ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ

By kannadanewsnow0916/12/2024 7:26 PM

ಬೆಳಗಾವಿ ಸುವರ್ಣಸೌಧ : ಬಡವರನ್ನು ಅತಿ ಹೆಚ್ಚಿನ ಬಡ್ಡಿ ನೀಡುವ ಆಸೆಯೊಡ್ಡಿ, ಠೇವಣಿ ಪಡೆದು, ನಂತರ ವಂಚಿಸುವ ಯತ್ನವನ್ನು ತಡೆಗಟ್ಟುವುದು ಹಾಗೂ ವಂಚಕರನ್ನು ಕಠಿಣವಾಗಿ ಶಿಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ವಿಧಾನಸಭೆಯಲ್ಲಿ ಸೋಮವಾರ 2024 ನೇ ಸಾಲಿನ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಬಡವರು, ಮಧ್ಯವರ್ಗದವರು, ಮತ್ತಿತರರು ಹಣಕಾಸು ವ್ಯವಹಾರಗಳಲ್ಲಿ ಆಸೆಗೆ ಬಲಿಯಾಗಿ ವಂಚನೆಗೆ ಒಳಗಾಗುವುದನ್ನು ತಡೆಗಟ್ಟಲು ಹಾಗೂ ವಂಚಕರನ್ನು ಶಿಕ್ಷಿಸುವ ನಿಟ್ಟಿನಲ್ಲಿ ವಿಧೇಯಕ ತರಲಾಗುತ್ತಿದೆ. ಈ ದಿಸೆಯಲ್ಲಿ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲು ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, 2003-04 ರಲ್ಲಿ ವಿನಿವಿಂಕ್ ಶಾಸ್ತಿç ಕೋಟ್ಯಾಂತರ ರೂ. ಗಳ ಠೇವಣಿ ಸಂಗ್ರಹಿಸಿ, ಜನರು ವಂಚನೆಗೊಳಗಾದಂತಹ ಪ್ರಕರಣದಲ್ಲಿ ಅನೇಕ ಅಮಾಯಕರು ಠೇವಣಿದಾರರು ವಂಚನೆಗೊಳಗಾಗಿದ್ದರು. ಹೀಗಾಗಿ 2004 ರಲ್ಲಿಯೇ ಇದರ ತಡೆಗೆ ಕಾನೂನನ್ನು ಜಾರಿಗೆ ತರಲಾಗಿತ್ತು. ಆದರೆ ಪಿರಮಿಡ್ ಸ್ಕೀಂ, ಸ್ಪಾಂಜ್ ಸ್ಕೀಮ್ ಮುಂತಾದ ವಂಚನೆ ಪ್ರಕರಣಗಳು ಕಾಲ ಬದಲಾದ ಹಾಗೆ ವಂಚನೆ ಸ್ವರೂಪ ಹಾಗೂ ವಂಚನೆಯ ವಿಧಾನ ಬದಲಾಗುತ್ತಿದ್ದು, ಕಾನೂನಿನಲ್ಲಿನ ಲೋಪಗಳನ್ನು ಸರಿಪಡಿಸಿ, ವಂಚಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನಿನಲ್ಲಿಯೂ ತಿದ್ದುಪಡಿ ತರಲಾಗುತ್ತಿದೆ. ಐಎಂಎಎ ನಂತಹ ಪ್ರಕರಣಗಳಲ್ಲಿ ವಂಚಕರನ್ನು ಹಿಡಿದು, ಪ್ರಕರಣಗಳು ಸೆಟಲ್‌ಮೆಂಟ್ ಆಗ್ತಾ ಇದೆಯೇ ಹೊರತು, ಬಾಧಿತರಿಗೆ ಸಮರ್ಪಕ ನ್ಯಾಯ ಒದಗಿವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಬಾಧಿತರಿಗೆ ಇನ್ನಷ್ಟು ಅನುಕೂಲ ತರಲು, ವಂಚನೆ ಪ್ರಕರಣಗಳಲ್ಲಿನ ಅನುಷ್ಠಾನಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ, ನಷ್ಟಕ್ಕೆ ಒಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ತಿದ್ದುಪಡಿ ತರಬೇಕಿದೆ. ಹೌಸಿಂಗ್ ಲೋನ್ಸ್, ಗೋಲ್ಡ್ ಲೋನ್ಸ್ ಮುಂತಾದ ಹೆಸರಿನಲ್ಲಿ ಕೆಲವೆಡೆ ವಂಚನೆ ನಡೆಯುವುದು ಕೂಡ ಗಮನಕ್ಕೆ ಬಂದಿದೆ. ಹೀಗಾಗಿ ಬಡವರು ವಂಚನೆಗೆ ಒಳಗಾಗುವುದನ್ನು ತಡೆಯಲು ಸಕ್ಷಮ ಪ್ರಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಠೇವಣಿಗಳ ಹೊಣೆ ನಿರ್ಧರಣೆ, ಹಣಕಾಸು ಸಂಸ್ಥೆಯಿಂದ ವಂಚನೆಯ ಉದ್ದೇಶವನ್ನು ತಪ್ಪಿಸುವುದು, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವುದು, ವಶ ಪಡೆದ ಸ್ವತ್ತುಗಳ ನಗದು ಪರಿವರ್ತನೆ ಮತ್ತು ಠೇವಣಿದಾರರಿಗೆ ಹಣ ಸಂದಾಯಕ್ಕೆ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿ ನೀಡುವುದು, ವಂಚಕರ ಸ್ವತ್ತಿನ ಜಪ್ತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿಧೇಯಕದಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಠೇವಣಿದಾರರ ಸಂರಕ್ಷಣೆಗಾಗಿ ಮಂಡಿಸಲಾಗಿರುವ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸುತ್ತೇವೆ. ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದ ಸಲಕರಣೆಗಳು, ಸ್ವತ್ತು, ಉಪಕರಣಗಳನ್ನು ವಿಲೇವಾರಿ ಮಾಡುವ ವಿಧಾನ ಸರಳೀಕರಣ ಆಗಬೇಕು. ಈ ರೀತಿ ವಂಚಿಸುವವರ ಮೇಲೆ ಗೂಡಾ ಕಾಯ್ದೆ ಹಾಕಬೇಕು ಎಂದರು. ಶಾಸಕರುಗಳಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ನರೇಂದ್ರಸ್ವಾಮಿ ಅವರು ಕೂಡ ದನಿಗೂಡಿಸಿ, ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಸಂಗ್ರಹಣೆ ಹೆಸರಿನಲ್ಲಿ ನಡೆಯುವ ವಂಚನೆಗಳನ್ನು ತಡೆಗಟ್ಟಬೇಕು, ಕಾನೂನು ಇನ್ನಷ್ಟು ಬಲಪಡಿಸಿ ವಂಚನೆ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ತಿದ್ದುಪಡಿ ತಂದು ಕಾನೂನು ಬಿಗಿಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದರು.

BIG BREAKING: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿಗೌಡ ವಿಧಿವಶ | Padma Shri Tulsi Gowda No More

SHOCKING : ಡಾಬಾದಲ್ಲಿ ಊಟ ಮಾಡುವಾಗಲೇ `ಹೃದಯಾಘಾತ’ : ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು.! ಆಘಾತಕಾರಿ ವಿಡಿಯೋ ವೈರಲ್

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

12/02/2026 9:47 PM1 Min Read

ಮಾ.6ಕ್ಕೆ ರಾಜ್ಯ ಬಜೆಟ್, ಬೆಂಗಳೂರಲ್ಲೇ IPL ಪಂದ್ಯ ಫಿಕ್ಸ್, ರೇಸ್ ಕೋರ್ಸ್ ಶಿಫ್ಟ್: ಹೀಗಿವೆ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್

12/02/2026 9:42 PM3 Mins Read

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

12/02/2026 9:03 PM1 Min Read
Recent News

‘ಭಾರತ’ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯಲಿದೆ ; ಫಿಚ್ ರೇಟಿಂಗ್ಸ್

12/02/2026 10:06 PM

ತಪ್ಪು ಮತ್ತು ಊಹಾಪೋಹ : ಏರ್ ಇಂಡಿಯಾ ಅಪಘಾತ ತನಿಖೆಯ ಕುರಿತ ಇಟಾಲಿಯನ್ ಮಾಧ್ಯಮ ವರದಿ ತಳ್ಳಿಹಾಕಿದ ಭಾರತ

12/02/2026 9:49 PM

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

12/02/2026 9:47 PM

ಮಾ.6ಕ್ಕೆ ರಾಜ್ಯ ಬಜೆಟ್, ಬೆಂಗಳೂರಲ್ಲೇ IPL ಪಂದ್ಯ ಫಿಕ್ಸ್, ರೇಸ್ ಕೋರ್ಸ್ ಶಿಫ್ಟ್: ಹೀಗಿವೆ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್

12/02/2026 9:42 PM
State News
KARNATAKA

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

By kannadanewsnow0912/02/2026 9:47 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೇ ಕೆಲವೆಡೆ…

ಮಾ.6ಕ್ಕೆ ರಾಜ್ಯ ಬಜೆಟ್, ಬೆಂಗಳೂರಲ್ಲೇ IPL ಪಂದ್ಯ ಫಿಕ್ಸ್, ರೇಸ್ ಕೋರ್ಸ್ ಶಿಫ್ಟ್: ಹೀಗಿವೆ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್

12/02/2026 9:42 PM

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

12/02/2026 9:03 PM

BIG BREAKING: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘IPL ಪಂದ್ಯ’ಗಳನ್ನಾಡಿಸಲು ಸರ್ಕಾರ ಗ್ರೀನ್ ಸಿಗ್ನಲ್

12/02/2026 8:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.