ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಬಿಜೆಪಿಯ 18 ಶಾಸಕರ ಅಮಾನತ್ತಿನೊಂದಿಗೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ಪರಿಷತ್ ಕಲಾಪವನ್ನು ಮುಸ್ಲೀಂ ಸಮುದಾಯದವರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ಸಂಬಂಧ ಚರ್ಚೆಯ ನಡುವೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಗೌರವ ತೋರಿದಂತ ಬಿಜೆಪಿಯ 18 ಶಾಸಕರನ್ನು ಸದನದ ಕಲಾಪದಿಂದ 6 ತಿಂಗಳವರೆಗೆ ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದರು. ಆ ಬಳಿಕ ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕ ಹಾಗೂ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿ ಮಸೂದೆಗೆ ತೀವ್ರ ವಿರೋಧದ ನಡುವೆ ಅಂಗೀಕಾರ ದೊರೆಯಿತು. ಆ ಬಳಿಕ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಇತ್ತ ವಿಧಾನ ಪರಿಷತ್ತಿನಲ್ಲೂ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿ ವಿಧೇಯಕದ ಬಗ್ಗೆ ಚರ್ಚೆ ನಡೆಯಿತು. ಈ ವಿಧೇಯಕವನ್ನು ಪರಿಷತ್ ಸದಸ್ಯ ಸಿ.ಟಿ ರವಿ ಅವರು ತೀವ್ರವಾಗಿ ವಿರೋಧಿಸಿದರು. ಸದನದಲ್ಲಿ ಗದ್ದಲ ಕೋಲಾಹಲಕ್ಕೂ ಕಾರಣವಾಯಿತು. ಹೀಗಾಗಿ ಚರ್ಚೆಯ ಬಳಿಕ ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದೂಡಿಕೆ ಮಾಡಿದ್ದಾರೆ.
BIG NEWS: ‘ಹೋಂ ಸ್ಟೇ ಮಾಲೀಕ’ರ ಗಮನಕ್ಕೆ: ನೋಂದಣಿ ಕಡ್ಡಾಯ, ಇಲ್ಲದಿದ್ದರೇ ‘ಕೇಸ್ ಫಿಕ್ಸ್’
ಬಳ್ಳಾರಿ: ಮಾ.23ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut