ಶಿವಮೊಗ್ಗ: ಸಾಗರ ತಾಲೂಕಿನ ವಕೀಲರೊಬ್ಬರ ಮೇಲೆ ಊಟಕ್ಕೆ ಹೋಗಿದ್ದಂತ ಸಂದರ್ಭದಲ್ಲಿ ವಿನಾ ಕಾರಣ ಹಲ್ಲೆ ನಡೆಸಿದಂತ ಈ ಹಿಂದಿನ ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಕೀಲ ರಾಜೇಶ್.ಎಸ್.ಬಿ ಎಂಬುವರು ಮೂರು ವರ್ಷಗಳ ಹಿಂದೆ ಅಂದ್ರೆ ದಿನಾಂಕ 28-02-20219ರಂದು ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ್ದಂತ ಸಂದರ್ಭದಲ್ಲಿ ಪೊಲೀಸರು ಹಾಗೂ ಅವರ ನಡುವೆ ಜಗಳ ಉಂಟಾಗಿತ್ತು. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ಪೊಲೀಸರು ನಿಂದಿಸಿದ್ದರು.
ಇದಷ್ಟೇ ಅಲ್ಲದೇ ಅಂದಿನ ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಆಗಿದ್ದಂತ ಮಂಜುನಾಥ, ಹೋಂ ಗಾರ್ಡ್ ಕೃಷ್ಣಪ್ಪ ಹಾಗೂ ಪೊಲೀಸ್ ಪೇದೆ ಸೈನು ನಡಾಫ್ ಎಂಬುವರು ವಕೀಲ ರಾಜೇಶ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಈ ಸಂಬಂಧ ಆನಂತ್ರ ವಿನಾಕಾರಣ ಹಲ್ಲೆ ನಡೆಸಿದಂತ ಪೊಲೀಸರ ವಿರುದ್ಧ ದೂರು ದಾಖಲಿಸೋದಕ್ಕೆ ಹೋದಾಗ ಪೊಲೀಸರು ತೆಗೆದುಕೊಂಡಿರಲಿಲ್ಲ ಅಂತ ನ್ಯಾಯಾಲಯದ ಮೆಟ್ಟಿಲೋರಿದ್ದರು. ಇದೀಗ ಮೂರು ವರ್ಷಗಳ ನಂತ್ರ ಕೋರ್ಟ್ ಸೂಚನೆಯ ಮೇರೆಗೆ ಸಾಗರ ನಗರ ಪೊಲೀಸ್ ಠಾಣೆಯಲ್ಲಿ IPC 1860 (U/s-193, 323, 337, 341, 342, 352, 355, 357, 504, 506) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಕೀಲ ರಾಜೇಶ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದಂತ ಅಂದಿನ ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಮಂಜುನಾಥ ಅವರನ್ನು ಎ.1 ಆರೋಪಿಯಾಗಿಸಲಾಗಿದೆ. ಆ ನಂತ್ರ ಹೋಂ ಗಾರ್ಡ್ ಕೃಷ್ಣಪ್ಪ ಎ.2 ಮತ್ತು ಪೊಲೀಸ್ ಕಾನ್ಸ್ ಸ್ಟೇಬಲ್ ಸಾಯಿನು ನಡಾಫ್ ಅವರನ್ನು ಎ.3 ಆರೋಪಿಯನ್ನಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಈ ಮೂಲಕ ವಿನಾ ಕಾರಣ ಜಗಳ ತೆಗೆದು ಹಲ್ಲೆ ನಡೆಸಿದಂತ ಪೊಲೀಸರ ವಿರುದ್ಧ ಈಗ ಕೇಸ್ ದಾಖಲಾಗಿದೆ.
ಅಂದಹಾಗೇ 2019ರಲ್ಲಿಯೇ ಸಾಗರದ ವಕೀಲನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಂತ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಬಾರ್ ಕೌನ್ಸಿಲ್ ನಿಂದ ಪ್ರತಿಭಟನೆ ನಡೆಸಲಾಗಿತ್ತು. ಸಾಗರ ತಾಲೂಕು ವಕೀಲರ ಸಂಘದಿಂದಲೂ ಪ್ರತಿಭಟನೆ ನಡೆಸಿ, ಸಿಪಿಐ ಮಂಜುನಾಥ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಆದ್ರೇ ಯಾವುದೇ ಕಾನೂನು ಕ್ರಮ ಅವರ ವಿರುದ್ಧ ಜರುಗಿಸಲಾಗಿರಲಿಲ್ಲ. ಈಗ ವಕೀಲ ರಾಜೇಶ್.ಎಸ್.ಬಿ ಅವರು ಕೋರ್ಟ್ ಮೊರೆ ಹೋಗಿದ್ದರಿಂದ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಪೊಲೀಸರ ವಿರುದ್ಧ FIR ದಾಖಲಾಗಿದೆ.
ವರದಿ: ಉಮೇಶ್ ಮೊಗವೀರ, ಸಾಗರ
ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ
‘ಯುವನಿಧಿ ಯೋಜನೆ’ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ‘ಶಿವಮೊಗ್ಗ ಸಜ್ಜು’