ನವದೆಹಲಿ : ಭಾರತೀಯ ಹಾಕಿ ತಂಡದ ಆಟಗಾರರು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಫಾರ್ಮ್ ಮುಂದುವರೆಸಿದ್ದಾರೆ. ಚೀನಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ ಸತತ ಐದನೇ ಗೆಲುವು ಸಾಧಿಸಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿದೆ.
ಈ ಟೂರ್ನಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಗೆಲುವಿನ ಹೀರೋ ಆದರು. ಪಾಕಿಸ್ತಾನ ಸ್ಕೋರಿಂಗ್ ಆರಂಭಿಸಿದ್ದರೂ, ಟೀಂ ಇಂಡಿಯಾ ತಿರುಗೇಟು ನೀಡಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಭಾರತ ಮತ್ತು ಪಾಕಿಸ್ತಾನ ತಂಡಗಳು 350 ದಿನಗಳ ನಂತರ ಪಂದ್ಯವನ್ನು ಆಡುತ್ತಿವೆ. ಪಂದ್ಯ ಆರಂಭವಾದ ತಕ್ಷಣ ದಾಳಿ ಆರಂಭಿಸಿದ ಪಾಕಿಸ್ತಾನ 7ನೇ ನಿಮಿಷದಲ್ಲಿ ಹನ್ನಾನ್ ಶಾಹಿದ್ ನೆರವಿನಿಂದ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. ಆದ್ರೆ, ಭಾರತ ಪುನರಾಗಮನಕ್ಕೆ ತಡ ಮಾಡಲಿಲ್ಲ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 13ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ತಂಡವನ್ನು 1-1ರಲ್ಲಿ ಸಮಬಲಗೊಳಿಸಿದರು. ಎರಡನೇ ಕ್ವಾರ್ಟರ್’ನಲ್ಲಿ ಪಂದ್ಯದ 19ನೇ ನಿಮಿಷದಲ್ಲಿ ಟೀಂ ಇಂಡಿಯಾಗೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ನಂತರ ಭಾರತ ತಂಡದ ‘ಸರ್ಪಂಚ್’ ಪಂದ್ಯದ ಎರಡನೇ ಗೋಲು ಗಳಿಸಿದರು. ಇದರೊಂದಿಗೆ ಭಾರತ 2-1 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಮುನ್ನಡೆ ಸಾಧಿಸಿತು.
ವಂಶಪಾರಂಪರ್ಯತೆ ರಾಜಕೀಯ ಜಮ್ಮು-ಕಾಶ್ಮೀರವನ್ನ ಟೊಳ್ಳಾಗಿಸಿದೆ : ಪ್ರಧಾನಿ ಮೋದಿ
ಹಾಲಿನ ದರ ಹೆಚ್ಚಳದ ಬಗ್ಗೆ ಶೀಘ್ರದಲ್ಲಿ ನಿರ್ಧಾರ: ಸಚಿವ ಕೆ.ಎನ್ ರಾಜಣ್ಣ
Modi 3.0 : ಮೊದಲ 100 ದಿನದಲ್ಲಿ ‘3 ಲಕ್ಷ ಕೋಟಿ ಮೌಲ್ಯದ ಮೂಲ ಯೋಜನೆ’ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ