ಬೆಂಗಳೂರು: ಚನ್ನಪಟ್ಟಣ ತಾಲ್ಲೂಕಿನ ದಶಾವರ ಬಳಿಯಲ್ಲಿ ಭಾರತೀಯ ಚಿತ್ರರಂಗದ ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ಅವರನ್ನು ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಚಲನ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿಯೆಂದೇ ಗುರುತಿಸಿಕೊಂಡಿದ್ದಂತ ಬಿ.ಸರೋಜಾ ದೇವಿ ಅವರು ಇನ್ನಿಲ್ಲವಾಗಿದ್ದಾರೆ. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಂತ ಬಿ.ಸರೋಜಾ ದೇವಿ ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಮೂಲಕ ಅಭಿನಯ ಸರಸ್ವತಿ ಇನ್ನೂ ನೆನಪಾಗಿ ಉಳಿಸಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡದ ಅರಗಿಣಿ, ಸೌಥ್ ಲೇಡಿ ಸೂಪರ್ ಸ್ಟಾರ್ ಎಂಬುದಾಗಿಯೇ ಬಿ.ಸರೋಜಾದೇವಿ ಕರೆಸಿಕೊಳ್ಳುತ್ತಿದ್ದರು. ಚತುರ್ಭಾಷಾ ನಟಿ ಬಿ.ಸರೋಜಾದೇವಿ ಗುರುತಿಸಿಕೊಂಡಿದ್ದರು. ತಮ್ಮ ಮಾತನಾಡುವ ಕಣ್ಣುಗಳಿಂದಲೇ ಕೋಟ್ಯಂತರ ಜನರ ಮನಗೆದ್ದ ನಟಿ ಏಳು ದಶಕಗಳವರೆಗೆ ಚಿತ್ರರಂಗವನ್ನು ಆಳಿದ ಕಲಾವಿದೆ.
200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅವರು, 2019ರಲ್ಲಿ ಬಿಡುಗಡೆಗೊಂಡ ಪುನೀತ್ ರಾಜ್ಕುಮಾರ್ ನಟನೆಯ ನಟ ‘ಸಾರ್ವಭೌಮ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದರು. 7 ಜನವರಿ 1938ರಲ್ಲಿ ಹುಟ್ಟಿದ್ದ ನಟಿಗೆ ಈಗ 87 ವರ್ಷ ವಯಸ್ಸಾಗಿತ್ತು. ತುಂಬು ಜೀವನ ನಡೆಸಿದ ನಟಿಯನ್ನೀಗ ಸಿನಿಮಾ ಇಂಡಸ್ಟ್ರಿ ಕಳೆದುಕೊಂಡಿದೆ.