ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೋವಿಡ್ ಸೋಂಕಿತರ ಸಂಖ್ಯೆ ಆರ್ಭಟಿಸಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 328 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, RTPCR ಮೂಲಕ ಕಳೆದ 24 ಗಂಟೆಯಲ್ಲಿ 6418 ಹಾಗೂ RAT ಪರೀಕ್ಷೆಯ ಮೂಲಕ 787 ಸೇರಿದಂತೆ 7205 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 328 ಜನರಿಗೆ ಪಾಸಿಟಿವ್ ಬಂದಿದೆ ಅಂತ ತಿಳಿಸಿದೆ.
ಬೆಂಗಳೂರು ನಗರದಲ್ಲಿ 163, ಬಾಗಲಕೋಟೆ 04, ಬಳ್ಳಾರಿ 09, ಬೆಂಗಳೂರು ಗ್ರಾಮಾಂತರ 18, ಚಾಮರಾಜನಗರ 05, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 07, ಚಿತ್ರದುರ್ಗ 05, ದಕ್ಷಿಣ ಕನ್ನಡ 08, ದಾವಣಗೆರೆ 03, ಧಾರವಾಡ 02, ಗದಗ 01 ಕೇಸ್ ಪತ್ತೆಯಾಗಿದೆ.
ಹಾಸನ 12, ಹಾವೇರಿ, ಕೋಲಾರ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಮಂಡ್ಯ 07, ಮೈಸೂರು 26, ರಾಯಚೂರು 04, ರಾಮನಗರ 03, ಶಿವಮೊಗ್ಗ 06, ತುಮಕೂರು 15, ಉತ್ತರ ಕನ್ನಡ 06, ವಿಜಯನಗರ 07 ಸೇರಿದಂತೆ 328 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 409 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1159 ಇದೆ ಅಂತ ತಿಳಿಸಿದೆ.
ಗಮನಿಸಿ: ‘KSRTC ತಾಂತ್ರಿಕ ಸಹಾಯಕ ಹುದ್ದೆ’ಯ ‘ಸಂಭವನೀಯ ಆಯ್ಕೆ ಪಟ್ಟಿ’ ಪ್ರಕಟ