ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ, 2023ರ ಆಗಸ್ಟ್ 18 ರಿಂದ- 2024ರ ಫೆಬ್ರವರಿ 12ರ ವರೆಗೆ 18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ತು ಕಾರ್ಯಕಲಾಪದ ವೇಳೆ ಶಾಸಕ ಮಧು ಜಿ. ಮಾದೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಆಗಿರುವ ವಾಹನಗಳ ಸಂಖ್ಯೆ ಎಷ್ಟು ಹಾಗೂ ಇಲ್ಲಿಯವರೆಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸಿಕೊಂಡಿರುವ ವಾಹಗಳ ಸಂಖ್ಯೆ ಮತ್ತು ಇದರ ಶೇಕಡವಾರು ಪ್ರಮಾಣ ಎಷ್ಟು ಎಂದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದಂತೆ, ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿದ್ದು, ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ಕೋಟಿ ವಾಹನಗಳು ಅಸ್ತಿತ್ವದಲ್ಲಿವೆ ಹಾಗೂ ಇಲ್ಲಿಯವರೆಗೆ ಶೇ.9.16% ಪ್ರಮಾಣದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಹೇಳಿದರು.
ವಾಹನಗಳಿಗೆ ಹೆಚ್.ಎಸ್.ಅರ್.ಪಿ ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು ಒಇಎಮ್ ಗಳ ಅಧಿಕೃತ ಹೆಚ್.ಎಸ್.ಅರ್.ಪಿ ತಯಾರಕರು ಅಧಿಕೃತಗೊಳಿಸಿದ ಪೆÇೀರ್ಟಲ್ ಮೂಲಕ ವಾಹನದ ಮಾಲೀಕರು ಆನ್ ಲೈನ್ ನಲ್ಲಿ ಮಾತ್ರ ಶುಲ್ಕ ಪಾವತಿಸಿ, ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರವಾದ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇ-ವಾಹನ್ ಪೆÇೀರ್ಟಲ್‍ನಲ್ಲಿ ಇರುವ ವಾಹನದ ವಿವರಗಳು ಹಾಗೂ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಆನ್‍ಲೈನ್ ಪೆÇೀರ್ಟಲ್‍ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಹೇಳಿದರು.
ನಿಗದಿತ ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ ರೂ. 500 ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ ರೂ 1000 ದಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದರು.