ಮಂಡ್ಯ : ರಾಜ ಮಹಾರಾಜರು ಮಾಡದಷ್ಟು ಆಸ್ತಿಯನ್ನು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಲೂಟಿ ಮಾಡಿ ನೂರಾರು ಎಕರೆ ಆಸ್ತಿ ಪಾಸ್ತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಮದ್ದೂರು ಶಾಸಕ ಕೆಂಡಾಮಂಡಲವಾದರು.
ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆಯಷ್ಟೇ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಎಲ್ಲೋ ಲೂಟಿ ಮಾಡ್ಕೋಂಡು ಬಂದು ಇಲ್ಲಿ ಜನಸೇವೆ ನಾಟಕ ಮಾಡ್ತಿದ್ದಾರೆ. ಈ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು.
ಈ ವಿಚಾರವಾಗಿ ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ದೊಡ್ಡರಸಿನಕೆರೆ ಗ್ರಾಮದಲ್ಲಿ ಯಾರಾದ್ರೂ ರಾಜ ವಂಶಸ್ಥರು ಇದ್ರ, ರಾಜ ಮಹಾರಾಜರು ಮಾಡದಷ್ಟು ಆಸ್ತಿಯನ್ನು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಲೂಟಿ ಮಾಡಿ ಬೆಂಗಳೂರು, ಬಿಡದಿ, ಮೈಸೂರು, ಮಾದನಾಯಕನಹಳ್ಳಿ ಹಾಗೂ ವಿವಿಧೆಡೆ ನೂರಾರು ಎಕರೆ ಆಸ್ತಿ ಮಾಡಿದ್ದಾರೆ. ಇವ್ರ ಮಕ್ಕಳು, ಮೊಮ್ಮಕ್ಕಳು, ಮುಮ್ಮೋಕ್ಕಳು ತಿಂದು ತೇಗುವಷ್ಟು ನೂರಾರು ಕೋಟಿ ಆಸ್ತಿ ಮಾಡಿಟ್ಟಿದ್ದಾರಲ್ಲ ಇಷ್ಟೋಂದು ಆಸ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಇವರು ಒಬ್ಬರಿಗೆ ನಾಲ್ಕಾಣೆ ಸಹಾಯ ಮಾಡೋದಿಲ್ಲ ಇಂತವರು ನನ್ನ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು.
ನಾನೇನು ಸರ್ಕಾರಿ ಅಧಿಕಾರಿಯಾಗಿ ನೂರಾರು ಕೋಟಿಯಷ್ಟು ಲೂಟಿ ಮಾಡಿಲ್ಲ. ನಾವು ಕಷ್ಟ ಪಟ್ಟು ನಮ್ಮ ಶ್ರಮದಿಂದ ಬೆಳೆದು ದುಡಿದ ಸಂಪಾದನೆಯಲ್ಲಿ ಜನರಿಗೆ ಸಹಾಯ ಮಾಡ್ತಿದ್ದೇನೆ. ಜನರ ಆಶೀರ್ವಾದದಿಂದ ಮೊದಲ ಬಾರಿಗೆ ಶಾಸಕನಾಗಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಮೈಷುಗರ್ ಆರಂಭಕ್ಕೆ 50 ಕೋಟಿ ನೀಡಿದೆ. ಕೃಷಿ ವಿಶ್ವವಿದ್ಯಾನಿಲಯ ಮೇಲ್ದರ್ಜೆಗೆ ಮುಂದಾಗಿದೆ. 280 ಕೋಟಿ ಅನುದಾನವನ್ನು ಮದ್ದೂರು ಕ್ಷೇತ್ರಕ್ಕೆ ನೀಡಿದೆ. ಇನ್ನು ಐದು ವರ್ಷಗಳಲ್ಲಿ ನನ್ನ ಶಕ್ತಿ ಮೀರಿ ಅನುದಾನ ತಂದು ಮಾದರಿ ಕ್ಷೇತ್ರ ಮಾಡುತ್ತೇನೆ ಇದರಲ್ಲಿ ಕ್ಷೇತ್ರದ ಜನತೆಗೆ ಯಾವುದೇ ಅನುಮಾನ ಬೇಡ ಎಂದು ಅಭಯ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ರೈತ ಕುಟುಂಬದಿಂದ ಬಂದಿರೋದು, ರೈತರ ಸಮಸ್ಯೆ ಏನು ಎಂದು ಹತ್ತಿರದಿಂದ ಬಲ್ಲವರು. ಹಳ್ಳಿಗಳ ಸಮಸ್ಯೆ ಬಗ್ಗೆ ಸಾಕಷ್ಟು ಗೊತ್ತಿರೋರು ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರಿಗೆ ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಕೊಟ್ಟು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಹಗಲು ರಾತ್ರಿ ಶ್ರಮಿಸುವಂತೆ ಮನವಿ ಮಾಡಿದರು.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌ಗೆ ಟ್ವಿಸ್ಟ್: ಮಾಲೀಕ ಮುಖೇಶ್ ಮೇಲೆ FIR ದಾಖಲು