ಬೆಂಗಳೂರು: ಬೆಂಗಳೂರಿನ ಖ್ಯಾತ ಉದ್ಯಮಿ ಸುನಿತಾ ತಿಮ್ಮೇಗೌಡ ಮತ್ತು ಅಶೋಕ್ ಶಂಕರ್ ಅವರ ಪುತ್ರ ಯುವ ಉದ್ಯಮಿ ಆರ್ಯಮನ್ ಅವರು, ಅಜ್ಜಿ ದಿ. ಸಾವಿತ್ರಮ್ಮ ತಿಮ್ಮೇಗೌಡ ಅವರ ಸ್ವಂತ ಊರಾದ ಕೊಳ್ಳೆಗಾಲದ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಶಾಲೆಗೆ ಕ್ರೀಡಾ ಪರಿಕರಗಳು ಸೇರಿದಂತೆ ಹಲವು ವಸ್ತುಗಳನ್ನು ವಿತರಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಮ್ಮ ಸಹಪಾಠಿಗಳೊಂದಿಗೆ ಕೊಳ್ಳೆಗಾಲಕ್ಕೆ ತೆರಳಿದ ಆರ್ಯಮನ್ ಅವರು ಕಾವೇರಿಪುರದಲ್ಲಿ ಬಂದಿಳಿದರು. ಅಲ್ಲಿಂದ ಅವರು ರಸ್ತೆ ಮಾರ್ಗವಾಗಿ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಶಾಲೆಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದರು. ಬಳಿಕ ಅಗತ್ಯ ಪರಿಕರಗಳನ್ನು ಆಶ್ರಮದ ಮಕ್ಕಳಿಗಾಗಿ ವಿತರಿಸಿದರು.
ಯುವ ಉದ್ಯಮಿ ಆರ್ಯಮನ್ ಅವರು 11ನೇ ವರ್ಷದಲ್ಲಿ ಸಿಂಗಾಪುರಕ್ಕೆ ಶಿಕ್ಷಣಕ್ಕಾಗಿ ತೆರಳಿದ್ದರು. ವಿದ್ಯಾಭ್ಯಾಸದ ಅವಧಿಯಲ್ಲೇ ಅವರು ಉದ್ಯಮ ಕ್ಷೇತ್ರಕ್ಕೆ ಧುಮುಕಿದ್ದರು. 13ನೇ ವರ್ಷದಲ್ಲಿ ಅವರು ಲಿಮಿಟೆಡ್ ಎಡಿಷನ್ ಶೂಗಳ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಆದಾಯ ಗಳಿಕೆ ಆರಂಭಿಸಿದರು. ವಿದ್ಯಾಭ್ಯಾಸದ ಜತೆಗೆ ಕಠಿಣ ಪರಿಶ್ರಮದ ಪಟ್ಟ ಅವರು ನಿಧಾನವಾಗಿ ತಮ್ಮ ಉದ್ಯಮವನ್ನು ಲಾಭದಾಯಕವಾಗಿ ಪರಿವರ್ತಿಸಿದರು. ವರ್ಷದಿಂದ ವರ್ಷಕ್ಕೆ ಲಾಭ ಹೆಚ್ಚಿಸಿದ ಅವರು ಇದೀಗ 1000 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದಾರೆ.
ಆರ್ಯಮನ್ ಅಶೋಕ್ ಅವರಿಗೆ ಇದೀಗ 18 ವರ್ಷ ತುಂಬಿದೆ. ಅವರೀಗ ಸ್ವಂತ ಉದ್ಯಮದ ಮೂಲಕ ಕೋಟ್ಯಧಿಪತಿಯಾಗಿದ್ದಾರೆ. ಸಿಂಗಾಪುರದಲ್ಲಿ ಶಿಕ್ಷಣ ಮಾಡುತ್ತಿರುವ ಜತೆಗೆ ಹಲವಾರು ಉದ್ಯಮಗಳನ್ನು ನಡೆಸಿದ್ದಾರೆ. ಇದೀಗ ಆರ್ಯಮನ್ ಅವರು ಊರಿಗೆ ಮರಳಿದ್ದು ಸ್ವಂತ ಸಂಪಾದನೆಯಲ್ಲಿ ಅಜ್ಜಿ ಸಾವಿತ್ರಮ್ಮ ತಿಮ್ಮೇಗೌಡ ಅವರ ಊರಾಗಿರುವ ಕೊಳ್ಳೆಗಾಲದ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರದ ಮಕ್ಕಳಿಗೆ ಕ್ರೀಡಾಪರಿಕರಗಳನ್ನು ವಿತರಿಸಿದ್ದಾರೆ.
ಆರ್ಯಮನ್ ಅವರು ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಜಪಾನ್ ದೇಶದ ಸಹಪಾಠಿಗಳಿದ್ದರು. ಅವರೆಲ್ಲರೂ ಉತ್ತಮ ಗೆಳೆಯರಾಗಿದ್ದಾರೆ. ಆರ್ಯಮನ್ ಅವರ ಸಾಧನೆಯನ್ನು ಕಂಡು ಮೆಚ್ಚಿದವರು. ಅವರು ಕೂಡ ಕೊಳ್ಳೆಗಾಲಕ್ಕೆ ಆರ್ಯಮನ್ ಅವರ ಜತೆ ಪ್ರಯಾಣಿಸಿದ್ದಾರೆ. ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರದಲ್ಲಿ ಆರ್ಯಮನ್ ಅವರೊಂದಿಗೆ ಸಮಯ ಕಳೆದಿದ್ದಾರೆ.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡುವಾಗ ಜಪಾನ್ ಮೂಲದ ಸಹಪಾಠಿಗಳು ಕೂಡ ಜತೆಗಿದ್ದರು. ಅಲ್ಲದೆ ಆರ್ಯಮನ್ ಅವರ ಸಮಾಜ ಸೇವೆಗೆ ಸಾಕ್ಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಯಮ ಪರಿಣತ ಕುಟುಂಬದ ಕುಡಿಯಾಗಿರುವ ಆರ್ಯಮನ್ ಅಶೋಕ್ ಅವರು ಉದ್ಯಮ ಕ್ಷೇತ್ರವನ್ನು ಬಾಲ್ಯದಲ್ಲಿಯೇ ಕರಗತ ಮಾಡಿಕೊಂಡಿದ್ದಾರೆ. ಎಳವೆಯಲ್ಲಿಯೇ ಉದ್ಯಮದ ಮೂಲಕ ಯಶಸ್ಸು ಸಾಧಿಸಿರುವ ಅವರು ತಮ್ಮ ಕುಟುಂಬದ ಪರಂಪರೆಯಂತೆ ಸಮಾಜಸೇವೆ ಕಾರ್ಯವನ್ನೂ ಮುಂದುವರಿಸಿಕೊಂಡು ಹೋಗುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಅಜ್ಜಿಯ ಊರಿನಲ್ಲಿರುವ ಶ್ರವಣ ಹಾಗೂ ವಾಕ್ದೋಷ ಇರುವಂಥ ಮಕ್ಕಳ ಕೇಂದ್ರಕ್ಕೆ ತಮ್ಮ ಕೊಡುಗೆ ನೀಡಲು ಮುಂದಾಗಿದ್ದಾರೆ.
ದಿ. ಸಾವಿತ್ರಮ್ಮ ತಿಮ್ಮೇಗೌಡ ಅವರೂ ಸಮಾಜ ಸೇವೆಯಲ್ಲಿ ಖ್ಯಾತಿ ಪಡೆದುಕೊಂಡವರಾಗಿದ್ದರು. ಅವರು ಕೊಳ್ಳೆಗಾಲದಲ್ಲಿನ ಲಕ್ಷ್ಮೀನಾರಾಯಣ ದೇವಸ್ಥಾನ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದರು. ಅದೇ ರೀತಿ ರಾಮ ಮಂದಿರ ನಿರ್ಮಾಣ ಮಾಡಿದ್ದರು. ಅದೇ ರೀತಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಸುನಿತಾ ತಿಮ್ಮೇಗೌಡ ಅವರೂ ಅದೇ ಮಾದರಿಯ ಕಾರ್ಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ ಅವರ ಪುತ್ರ ಆರ್ಯಮನ್ ಅವರೂ ಕೂಡ ಸಮಾಜ ಸೇವೆಯ ಕೆಲಸಗಳನ್ನು ಮುಂದುವರಿಸುತ್ತಿದ್ದಾರೆ.
ಆರ್ಯಮನ್ ಅಶೋಕ್ ಅವರ ತಾಯಿ ಹಾಗೂ ಖ್ಯಾತ ಉದ್ಯಮಿ ಸನಿತಾ ತಿಮ್ಮೇಗೌಡ ಅವರು ಕೂಡ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರಕ್ಕೆಸಾಕಷ್ಟು ನೆರವು ಕೊಟ್ಟಿದ್ದಾರೆ. ಅವರ ಸಾಮಾಜಿಕ ಸೇವೆಗಳಿಗಾಗಿ ಕೇಂದ್ರದ ಪ್ರಿನ್ಸಿಪಾಲ್ ಅಭಿನಂದನೆಗಳನ್ನು ಕೂಡ ಸಲ್ಲಿಸಿದ್ದಾರೆ.
ಲಾಂಟನಾ ಕರಕುಶಲ ವಸ್ತು ತಯಾರಕರಿಗೆ ಗುಡ್ ನ್ಯೂಸ್: 1 ಕೋಟಿ ನೆರವು – ಸಚಿವ ಈಶ್ವರ್ ಖಂಡ್ರೆ ಘೋಷಣೆ
BREAKING : ಶಾಲಾ ಮಕ್ಕಳಿಗೆ ‘ರಾಗಿ ಮಾಲ್ಟ್’ ಕುಡಿಸುವ ಮೂಲಕ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ