ನವದೆಹಲಿ: ರಕ್ತದಲ್ಲಿನ ಸಕ್ಕರೆ ಮಟ್ಟವು 320 ಕ್ಕೆ ತಲುಪಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು ತಿಹಾರ್ ಜೈಲಿನಲ್ಲಿ ಇನ್ಸುಲಿನ್ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಪದೇ ಪದೇ ವಿನಂತಿಸಿದರೂ ತಿಹಾರ್ ಜೈಲು ಆಡಳಿತವು ತನಗೆ ಇನ್ಸುಲಿನ್ ಒದಗಿಸಿಲ್ಲ ಎಂದು ಎಎಪಿ ಮುಖ್ಯಸ್ಥರು ನಿನ್ನೆ ಆರೋಪಿಸಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದ ನೆಪದಲ್ಲಿ ಜಾಮೀನು ಪಡೆಯೋ ಸಂಬಂಧ ಸಕ್ಕರೆ ಅಂಶವಿರುವಂತ ಹಣ್ಣಿನ ರಸವನ್ನು ಸೇವಿಸುತ್ತಿದ್ದಾರೆ ಎಂಬುದಾಗಿ ತಿಹಾರ್ ಜೈಲಿನ ಅಧಿಕಾರಿಗಳು ಆರೋಪಿಸಿದ್ದರು. ಈ ಬೆನ್ನಲ್ಲೇ ಅವರ ಶುಗರ್ ಲೆವೆಲ್ ಹೆಚ್ಚಾಗಿರೋದು ಪರೀಕ್ಷೆಯಿಂದ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಕ್ಕರೆ ಮಟ್ಟದ ಏರಿಕೆಯನ್ನು ನಿಯಂತ್ರಿಸೋ ಸಂಬಂಧ ತಿಹಾರ್ ಜೈಲಿನ ವೈದ್ಯರು ಇನ್ಸುಲಿನ್ ನೀಡಿದ್ದಾರೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ಬೆಂಗಳೂರಿನ ‘ಮದ್ಯ ಪ್ರಿಯ’ರ ಗಮನಕ್ಕೆ: ಇಂದು ಈ ಪ್ರದೇಶಗಳಲ್ಲಿ ‘ಎಣ್ಣೆ ಸಿಗಲ್ಲ’
2024-25ರಲ್ಲಿ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಚಿಲ್ಲರೆ ಹಣದುಬ್ಬರ : `CMIE’ ವರದಿ