ಬೆಂಗಳೂರು: ಜುಲೈ.19ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿಯಿಂದ ಆಗಮ ಘಟಿಕೋತ್ಸವ-2025 ಆಯೋಜಿಸಲಾಗಿದೆ. ಈ ಘಟಿಕೋತ್ಸವದಲ್ಲಿ 2103 ಅರ್ಚಕರಿಗೆ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿತರಣೆ ಮಾಡುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಜುಲೈ.19ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿಯಿಂದ ಆಗಮ ಘಟಿಕೋತ್ಸವ 2025 CONVACATION CERTIFICATE ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಬಸವನಗುಡಿಯ ಶ್ರೀ ಕಾರಂಜಿ ಆಂಜನೇಯ ದೇವಸ್ಥಾನದ ಆವರಣದಲ್ಲಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಈ ಆಗಮ ಘಟಿಕೋತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಪರಮಪೂಜ್ಯ ಸಿದ್ದಲಿಂಗಮಹಾಸ್ವಾಮಿ, ಉಡುಪಿಯ ಪೇಜಾವರ ಮಠದ ಪೀಠಾಧ್ಯಕ್ಷರಾದಂತ ಶ್ರೀ ಶ್ರೀ ಪ್ರಸನ್ನ ತೀರ್ಥ ಶ್ರೀಪಾದರು, ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ಶ್ರೀ ಡಾ ನಿಶ್ಚಲಾನಂದನಾಥ ಮಹಾಸ್ವಾಮಿಗಳು, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್, ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ.
ಇನ್ನೂ ಆಗಮ ಘಟಿಕೋತ್ಸವದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ವಹಿಸಿದ್ದರೇ, ವಿಶೇಷ ಆಹ್ವಾನಿತರಾಗಿ ಬೆಂಗಳೂರು ನಗರದ ಎಲ್ಲಾ ಸಂಸದರು, ಸಚಿವರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರನ್ನು ಆಹ್ವಾನಿಸಲಾಗಿದೆ.
ಐದು ವರ್ಷ ಅಭ್ಯಾಸ ಮಾಡಿ ಈ ಕೆಳಕಂಡ ಏಳು ಆಗಮ ವಿಭಾಗ ಗಳಲ್ಲಿ
1 ಶೈವಾಗಮ
2 ವೈಖಾನಸಾಗಮ
3 ಪಂಚರಾತ್ರೂಗಮ
4 ತಂತ್ರಸಾರಾಗಮ
5 ವಾತುಲಾಗಮ
6 ವೀರಶೈವವಾಗಮ
7 ಜೈನಾಗಮ
ಮೂರು ವರ್ಷ ಆಗಮ ಪ್ರವರ ಹಾಗೂ ನಂತರ ಎರಡು ವರ್ಷ ಆಗಮ ಪ್ರವೀಣ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿರುವ ಅರ್ಚಕರು ಆಗುವ ಅರ್ಹತೆ ಪಡೆದಿರುವ ಸುಮಾರು 2103 ಅರ್ಚಕರಿಗೆವಿದ್ಯಾಭ್ಯಾಸ ಮುಗಿಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವರಿಗೆ ಪ್ರಮಾಣ ಪತ್ರ ಘಟಿಕೋತ್ಸವ CONVACATION CERTIFICATE ನೀಡಲಾಗುವುದು.
2006ರಿಂದ ಇಲ್ಲಿಯವರೆಗೂ ವಿದ್ಯಾಭ್ಯಾಸ ಮುಗಿಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದರು ಯಾವುದೇ ರೀತಿಯ ಪ್ರಮಾಣ ಪತ್ರ ಘಟಿಕೋತ್ಸವ CONVACATION CERTIFICATE ನೀಡರುವುದಿಲ್ಲ,
ಇದನ್ನು ಮನಗೊಂಡ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ನಾಲ್ಕು ತಿಂಗಳ ಹಿಂದೆ 800 ಅರ್ಚಕರಿಗೆ ಸಾಂಕೇತಿಕವಾಗಿ ಮೈಸೂರಿನಲ್ಲಿ ತೇರ್ಗಡೆ ಆದವರಿಗೆ ಪ್ರಮಾಣ ಪತ್ರ ಘಟಿಕೋತ್ಸವ CONVACATION CERTIFICATE ನೀಡಿದ್ದರು.
ಇದೀಗ ಬೆಂಗಳೂರಿನಲ್ಲಿ 2006 ರಿಂದ ಇಲ್ಲಿಯವರೆಗೂ 7 ಆಗಮಗಳ ವಿದ್ಯಾಭ್ಯಾಸ ಮುಗಿಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸುಮಾರು 2103 ಅರ್ಚಕರಿಗೆ ಪ್ರಮಾಣ ಪತ್ರ ಘಟಿಕೋತ್ಸವ CONVACATION CERTIFICATE ನೀಡಲು ನಿರ್ಧರಿಸಿದ್ದಾರೆ.
BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಕೇಸ್: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!