ತಮಿಳುನಾಡು: ಬರೋಬ್ಬರಿ 30 ವರ್ಷಗಳ ನಂತ್ರ ಉಗ್ರ ಅಬೂಬಕರ್ ಸಿದ್ದಿಕಿಯನ್ನು ಬಂಧಿಸಲಾಗಿದೆ. ಬಂಧಿತ ಉಗ್ರ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಇಂತಹ ಆರೋಪಿಯನ್ನು ತಮಿಳುನಾಡು ಎಟಿಎಸ್ ನಿಂದ ಬಂಧಿಸಲಾಗಿದೆ.
ತಮಿಳುನಾಡು ಎಟಿಎಸ್ ನಿಂದ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಂತ ಉಗ್ರ ಅಬೂಬಕರ್ ಸಿದ್ದಕಿಯನ್ನು ಬಂಧಿಸಲಾಗಿದೆ. ಈತನಿಗೆ ಆಶ್ರಯ ನೀಡಿದ್ದಂತ ಮೊಹಮ್ಮದ್ ಆಲಿ ಕೂಡ ಬಂಧನವಾಗಿದೆ.
ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಸ್ಪೋಟದಲ್ಲಿ ಭಾಗಿಯಾಗಿದ್ದಂತ ಆರೋಪಿ ಅಬೂಬಕರ್ ಸಿದ್ದಿಕಿ ಆಗಿದ್ದಾನೆ. ಉಗ್ರ ಅಬೂಬಕರ್ ಸಿದ್ದಿಕಿ ಬೆಂಗಳೂರಿಗೆ ಕರೆತರಲು ಎಟಿಎಸ್ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈ.14ರಂದು ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಅಬೂಬಕರ್ ಕರೆತರುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಬಾಂಬ್ ತಯಾರಿಸುವುದರಲ್ಲಿ ಸಿದ್ಧಿಕಿ ನಿಸ್ಸೀಮನಾಗಿದ್ದನು.
ಮಹಾರಾಷ್ಟ್ರ ಎನ್‌ಸಿಪಿ-ಎಸ್‌ಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಯಂತ್ ಪಾಟೀಲ್ ರಾಜೀನಾಮೆ | Jayant Patil Resigns
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ