ಬೆಳಗಾವಿ ಸುವರ್ಣ ವಿಧಾನಸೌಧ : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇ-ಖಾತಾ ಮತ್ತು ಹೊಸ ಖಾತೆಗಾಗಿ ಸ್ವೀಕರಿಸಲಾದ ಒಟ್ಟು 31,274 ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಗೋಪಾಲಯ್ಯ ಕೆ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇ-ಖಾತಾ ಮತ್ತು ಹೊಸ ಖಾತಾ ಅರ್ಜಿಗಳನ್ನು ಕೆಲಸದ ಹೊರೆ ಮತ್ತು ವಿಳಂಬವನ್ನು ಕಡಿಮೆ ಮಾಡಲು ಹಾಗೂ ಡಿಜಿಟಲ್ ದಾಖಲೆಯಿಂದಾಗಿ ನಾಗರೀಕರಿಗೆ ಟ್ರ್ಯಾಕ್ ಮಾಡುವ ಹಾಗೂ ಭ್ರಷ್ಟಾಚಾರ ರಹಿತವಾಗಿ ಇ-ಖಾತಾ ನೀಡಲು ಸಕ್ಷಮ ಕಂದಾಯ ಅಧಿಕಾರಿ ಮತ್ತ ಸಿಬ್ಬಂದಿಯವರಿಗೆ ಒಂದೇ ಸಂಖ್ಯಾ ಪ್ರಮಾಣದಲ್ಲಿ ಸ್ವಯಂ ಚಾಲಿತ ಮತ್ತು ಖಚಿಟಿಜom ಹಂಚಿಕೆ ಮಾಡುವ ವ್ಯವಸ್ಥೆಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿತ್ತು.
ಹೊಸ ಮಾದರಿಯಲ್ಲಿ ಇ-ಖಾತಾ ನೀಡುತ್ತಿರುವುದು ಸಾರ್ವಜನಿಕರಿಗೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿಧಾನಸಭೆಯ ಇನ್ನಿತರ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಎಲ್ಲಾ ಸಾಧಕ ಬಾಧಕಗಳನ್ನು ಚರ್ಚಿಸಿ ಈ ಹಿಂದೆ ಇದ್ದಂತಹ ಹಳೇ ಪದ್ದತಿಯಲ್ಲೇ ಇ-ಖಾತೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.








