ಬೆಂಗಳೂರು : ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ( ನಿಗದಿಗೊಳಿಸಿರುವುದಕ್ಕಿಂತ ಹೆಚ್ಚು) ಸಂಸ್ಥೆಯ ಪ್ರಶಸ್ತಿಯು ಕೆ ಎಸ್ ಆರ್ ಟಿ ಸಿ ಗೆ ಸತತ 11 ನೇ ಬಾರಿ ಲಭಿಸಿರುತ್ತದೆ.
ಈ ಪ್ರಶಸ್ತಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ, ಕೆ ಎಸ್ ಆರ್ ಟಿ ಸಿ ಯ ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ರಾದ ಡಾ. ನಂದಿನಿದೇವಿ ಕೆ. ಭಾಆಸೇ., ರವರಿಗೆ ಪ್ರದಾನ ಮಾಡಿದರು. ಕೆ.ವಿ. ಶರತ ಚಂದ್ರ, ಭಾ.ಪೊ.ಸೇ., ಪ್ರಧಾನ ಕಾರ್ಯದರ್ಶಿಗಳು, ಗೃಹ ಇಲಾಖೆ, ಫ್ಲೈಟ್ ಲೆಫ್ಟಿನೆಂಟ್ ಎಮ್. ಎಸ್. ಲೋಲಾಕ್ಷ (ನಿವೃತ್ತ), ನಿರ್ದೇಶಕರು (ಪ್ರ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








