ಕೆಎನ್ ಎನ್ ನ್ಯೂಸ್ ಡೆಸ್ಕ್ : ಕೊರೊನಾ ಸಮಯದಲ್ಲೂ ಅಂತೂ ವಿಟಮಿನ್ ಸಿ ಇರುವಂತಹ ಅಂಶಗಳು ಬೇಕಿತ್ತು. ಇದಕ್ಕೆ ಎಲ್ಲರೂ ಮನೆಯಲ್ಲಿ ನಿಂಬೆ ಹಣ್ಣುಗಳೇ ಜಾಸ್ತಿ ಇರುತ್ತಿತ್ತು. ಇದರಿಂದ ಆರೋಗ್ಯಕ್ಕೆ ಭಾರಿ ಪ್ರಯೋಜನೆಗಳಿವೆ.
ಆಯಾಸ ಅಥವಾ ವಾಂತಿ ಆದಾಗ ಮೊದಲು ನೆನಪಿಗೆ ಬರೋದೆ ನಿಂಬೆ ಹಣ್ಣಿನ ಜ್ಯೂಸ್ . ಇದರಲ್ಲಿ ವಿಟಮಿನ್ ಜೀವಸತ್ವ ಇರುತ್ತದೆ. ಹೀಗಾಗಿ ಜನರು ಜಾಸ್ತಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ ನಾನಾ ರೋಗಗಳಿಗೂ ಮನೆ ಮದ್ದು ಆಗಿದೆ. ನಿಂಗೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಲಾಭ ಇದೆ ನೋಡೋಣ ಬನ್ನಿ.
ಜೀರ್ಣಕ್ರಿಯೆ ವೃದ್ಧಿ
ನಿಂಬೆ ರಸವು ಜೀರ್ಣಾಂಗದಲ್ಲಿರುವ ವಿಷವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಒತ್ತಡದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳತ್ತದೆ. ಇದರಿಂದ ಪ್ರತಿನಿತ್ಯ ನಿಂಬೆ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗತ್ತದೆ.
ಪೊಟ್ಯಾಸಿಯಮ್ ಹೆಚ್ಚಿಸುತ್ತದೆ
ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ನರಗಳ ಕಾರ್ಯಗಳಿಗೆ ಸಹಾಯ ಮಾಡುತ್ತದೆ.
ಕಿಡ್ನಿ ಸ್ಟೋನ್ ತಡೆಯಬಹುದು
ಪ್ರತಿದಿನ ಬೆಳಿಗ್ಗೆ ನಿಂಬೆ ಜ್ಯೂಸ್ ಕುಡಿಯುವುದು ಮೂತ್ರದ ಪ್ರಮಾಣ ಮತ್ತು ಮೂತ್ರದ PH ಅನ್ನು ಹೆಚ್ಚಿಸುವ ಮೂಲಕ ನೋವಿನ ಕಿಡ್ನಿಕಲ್ಲುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಕಲೆ ಮುಕ್ತಿಗೊಳಿಸಬಹುದು
ನಿಂಬೆ ರಸ ನಿಮ್ಮ ರಕ್ತವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಚರ್ಮದ ಕೋಶಗಳನ್ನು ನಿರ್ವಿಶೀಕರಣಕ್ಕೆ ಪ್ರೇರೇಪಿಸುವ ಮೂಲಕ ನಿಮ್ಮ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದು.
ನನ್ನ ವಿರುದ್ಧ ದಾಖಲಿಸಿರುವ FIR ಹಾಸ್ಯಾಸ್ಪದ, ದ್ವೇಷಪೂರಿತವಾಗಿದ್ದು: HDK ಕೆಂಡಾಮಂಡಲ
BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!