ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹನಿಮೂನ್ ಈ ನಾಲ್ಕು ಅಕ್ಷರವನ್ನು ಕೇಳಿದ ತಕ್ಷಣ ನವಜೋಡಿಗಿಳಗೆ ಅದೇನೋ ಒಂದು ತರಹದ ಖುಷಿ ನೀಡುವ ಪದ. ಇನ್ನೂ ಹನಿಮೂನ್ಗೆ ಸಿದ್ದವಾಗುತ್ತಿರುವ ಪ್ರಣಯ ಪಕ್ಷಿಗಳಿಗೆ ಒಂದು ಕಡೆ ಅತಂಕವಾದರೇ ಇನ್ನೊಂದು ಕಡೆ ಆ ಕ್ಷಣಕ್ಕಾಗಿ ಚಾತಕದ ಪಕ್ಷಿಯಂತೆ ಕಾಯುತ್ತಿರುತ್ತಾರೆ, ಹೌದು ಯಾವ ದೇಶ, ಯಾವ ಊರು, ಯಾವ ಹೋಟೆಲ್ ಗೆ ಹೋಗ ಬೇಕು ಎಂದು ಮದುವೆಗೆ ಮುಂಚೆ ಗಂಡು ಹೆಣ್ಣು ಇಬ್ಬರು ಪ್ಲಾನ್ ಮಾಡಿಕೊಂಡು ಬಿಡುತ್ತಾರೆ.
ಹನಿಮೂನ್ ಅನ್ನು ಸುಂದರವಾಗಿ ಇರಬೇಕು ಎನ್ನುವುದು ಅನೇಕ ನವವಧುಗಳ ಅಪೇಕ್ಷೆ ಕೂಡ ಹೌದು. ಅನೇಕ ಮಂದಿ ನವ ಜೋಡಿಗಳು ಸಾಮಾನ್ಯವಾಗಿ ಏಕಾಂತದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅದರಲ್ಲೂ ಹಸಿರು, ಚಳಿ, ಮಂಜಿನ ಪ್ರದೇಶ ಇವರ ಹಾಟ್ ಸ್ಪಾಟ್ ಗಳಲ್ಲಿ ಒಂದು. ತಮ್ಮ ಹೊಸ ಜೀವನಕ್ಕೆ ಅಡಿಗಾಲಿಟ್ಟ ನವ ದಂಪತಿಗಳು ಆ ಮಧುರ, ಸುಂದರ ಕ್ಷಣಗಳನ್ನು ಸ್ಮರಣಾರ್ಹಗೊಳಿಸಲು ಇಚ್ಚೆ ಪಡುತ್ತಾರೆ. ಏಕಾಂತ ಸ್ಥಳದಲ್ಲಿ, ಪ್ರಶಾಂತವಾದ ಸ್ಥಳದಲ್ಲಿ ಸ್ವಚ್ಚಂದವಾಗಿ ಇರಬೇಕು ಎನ್ನುವುದು ಅವರುಗಳ ಆಸೆಯಾಗಿರುತ್ತದೆ ಕೂಡ. ಇನ್ನೂ ಹನಿಮೂಗೆ ಎಂದು ನೀವು ಮೊದಲೇ ಹೋಟೆಲ್ ಗಳನ್ನು ಬುಕ್ ಮಾಡಿದ್ದಾರೆ ಹೋಟೆಲ್ ನವರು ವಿಶೇಷವಾದ ವ್ಯವಸ್ಥೆಯನ್ನು ಮಾಡಿರುತ್ತಾರೆ, ಜೊತೆಗೆ ನೀವು ತಂಗುವ ಕೋಣೆಯನ್ನು ತುಂಬಾ ರೋಮ್ಯಾಂಟಿಕ್ ಆಗಿ ಸಿಂಗರಿಸುತ್ತಾರೆ. ಇನ್ನೂ ನವ ಜೋಡಿಗಳನ್ನು ಸಾಂಪ್ರಾದಾಯಕವಾಗಿ ಬರಮಾಡಿಕೊಳ್ಳುವ ಪದ್ದತಿ ಕೂಡ ಅನೇಕ ಹೋಟೆಲ್ ಗಳಲ್ಲಿ ಕಾಣಬಹುದು. ಇನ್ನೂ ನಮ್ಮ ಕರ್ನಾಟಕದಲ್ಲಿ ಹನಿಮೂನ್ ಗೆ ಬೆಸ್ಟ್ ಸ್ಥಳಗಳೆಂದರೇ ಮೈಸೂರು, ಕೊಡಗು, ಹಾಗೂ ಇನ್ನೀತ್ತರ ಸ್ಥಳಗಳು, ಹೊರ ರಾಜ್ಯದ ವಿಷಯಕ್ಕೆ ಬಂದ್ರೆ ಊಟಿ, ಕೊಡಕೈನಲ್ ಸೇರಿದಂತೆ ಇನ್ನೀತ್ತರ ಸ್ಥಳಗಳಿಗೆ ನೀವು ಹೋಗಬಹುದು. ಹೀಗೆ ಹನಿಮೂಗೆ ಹೋಗುವ ನವ ಜೋಡಿಗಳಿಗೆ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ
ಹನಿಮೂನ್ ಟ್ರಿಪ್ ಗಾಗಿ ಟಿಪ್ಸ್
* ನೀವು ಏಕಾಂಗಿ, ಹಾಗೂ ನೆಮ್ಮದಿ ವಾತಾವರಣವಿರುವ ಸ್ಥಳವನ್ನು ಹನಿಮೂನ್ಗೆ ಆಯ್ಕೆ ಮಾಡಿಕೊಳ್ಳಿ
* ಧಾರ್ಮಿಕ ಕ್ಷೇತ್ರಗಳು ನಿಮ್ಮ ಹನಿಮೂನ್ ಸ್ಥಳಗಳ ಆಯ್ಜೆ ವಿಚಾರದಲ್ಲಿ ಕಡೆಯದಾಗಿರಲಿ ಯಾಂಕದ್ರೆ, ಈ ಸ್ಥಳಗಳಲ್ಲಿ ಹೆಚ್ಚು ಜನ ದಟ್ಟಣೆ ಹೆಚ್ಚಾಗಿರುತ್ತದೆ.
* ನಿಮ್ಮ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ನಿಮ್ಮ ಹನಿಮೂನ್ ಟ್ರಿಪ್ ಅನ್ನು ಸಿದ್ದ ಮಾಡಿಕೊಳ್ಳಿ, ಮಿತಿ ಮೀರಿದ ಹಣದ ಉಸಬಾರಿಯ ಬಗ್ಗೆ ಚಿಂತೆ ಬೇಡ
* ಹನಿಮೂನ್ ಗೆ ಹೊರಡುವ ಮುನ್ನ ನಿಮ್ಮ ಪ್ರವಾಸದ ನೆನಪನ್ನು ಸದಾ ಕಾಲ ನೆನಪಿನಲ್ಲಿ ಇರುವಂತೆ ಮಾಡಲು ಕ್ಯಾಮಾರ ಹಾಗೂ ಉತ್ತಮ ದರ್ಜೆಯ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ
* ಹನಿಮೂನ್ ಇಂದ ವಾಪಸ್ಸು ಬರುವಾಗ ಮರೆಯದೇ ನೆನಪಿಗೆ ನಿಮಗೆ ಅಥಾವ ನಿಮ್ಮ ಮನೆಯವರಿಗೆ ಏನಾದರೂ ಗಿಫ್ಟ್ ಅನ್ನು ತನ್ನಿ,
ಆತಂಕದ ಆ ಕ್ಷಣಗಳು
* ಹನಿಮೂನ್ ಎಂದರೇ ಲೈಂಗಿಕ ಕ್ರಿಯೆ ನಡೆಸುವುದು ಎನ್ನುವ ಮನೋಭಾವನೆಯಿಂದ ಹೊರಬಂದು, ಮೊದಲು ಪರಸ್ಪರ ನಂಬಿಕೆ ಬೆಳಸಿಕೊಂಡು ನಂತರ ಆ ಬಗ್ಗೆ ಗಮನ ಹರಿಸಿ,
* ಹೆಂಡತಿಯನ್ನು ಹೋಟೆಲ್ ನಲ್ಲಿ ಏಕಾಂಗಿಯಾಗಿ ಬಿಟ್ಟು ಹೊರಗೆ ಹೋಗಬೇಡಿ.
* ಕೆಲವು ತುಂಟಾಟಗಳನ್ನು ನಿಮ್ಮ ಸಂಗಾತಿ ಜೊತೆ ಆಡಿ, ಸಾಧ್ಯವಾದಲ್ಲಿ ಗೆದ್ದವರಿಗೆ ಬಹುಮಾನ ನೀಡುವುದನ್ನು ನಿರ್ಧರಸಿಕೊಳ್ಳಿ, ಇದು ನಿಮ್ಮಿಬ್ಬರ ನಡುವಿನ ಉತ್ತಮವಾದ ಸಂಬಂಧಕ್ಕೆ ಕಾರಣವಾಗಬಹುದು,
ಆರೋಗ್ಯದ ಕಡೆ ಗಮನವಿರಲಿ
* ಬಹುತೇಕ ಹೆಣ್ಣುಮಕ್ಕಳು ಹನಿಮೂನ್ ಗೆ ಹೋಗುವ ಸಮಯದಲ್ಲಿ ತಿಂಗಳ ಋತುಸ್ರಾವದ ಬಗ್ಗೆ ಚಿಂತೆ ಮಾಡುತ್ತಾರೆ, ಅದರ ಬಗ್ಗೆ ಯೋಚನೆ ಬಿಟ್ಟು ನಿಮ್ಮ ಕುಟುಂಬ ವೈದ್ಯರನ್ನು ಭೆಟಿ ಮಾಡಿ ಮುಟ್ಟನ್ನು ಮುಂದೂಡುವ ಕೆಲವು ಮಾತ್ರೆಗಳ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದುಕೊಳ್ಳಿ.
* ಇನ್ನೂ ಈಗಿನ ಜೋಡಿಗಳನ್ನು ಮಕ್ಕಳನ್ನು ಬೇಗ ಪಡೆಯಲು ಇಷ್ಟಪಡುವುದಿಲ್ಲ. ಗರ್ಭದಾರಣೆಯನ್ನು ತಡೆಗಟ್ಟುವ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ಸೇವಿಸ ಬಹುದು,
* ಇಷ್ಟೆ ಅಲ್ಲ ಕಾಂಡೋಮ್ ಸೇರಿದಂತೆ, ಎಮರ್ಜೆನ್ಸಿ ಮಾತ್ರೆಗಳು ನಿಮ್ಮ ಉಪಯೋಗಕ್ಕೆ ಬರಬಹುದು,