ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬೇಕಾಗಿಲ್ಲ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸೋಡಿಯಂ ಮತ್ತು ರಂಜಕವು ಆರೋಗ್ಯವನ್ನ ಕಾಪಾಡಿಕೊಳ್ಳಲು ಉಪಯುಕ್ತವಾಗಿದೆ. ಆದ್ರೆ, ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಸತ್ಯವೋ ಕೆಲವು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದಲ್ಲ ಅನ್ನೋದು ಅಷ್ಟೇ ಸತ್ಯ. ಹಾಗಿದ್ರೆ, ಯಾರು ಬೆಲ್ಲದಿಂದ ದೂರವಿರಬೇಕು ಎಂಬುದನ್ನ ಈಗ ತಿಳಿಯೋಣ.
* ತಜ್ಞರ ಪ್ರಕಾರ ಮಧುಮೇಹಿಗಳು ಹೆಚ್ಚು ಬೆಲ್ಲ ತಿನ್ನಬಾರದು. ಯಾಕಂದ್ರೆ, 10 ಗ್ರಾಂ ಬೆಲ್ಲದಲ್ಲಿ 9.7 ಗ್ರಾಂ ಸಕ್ಕರೆ ಇರುತ್ತದೆ. ಇದನ್ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಹೆಚ್ಚಿಸಬಹುದು. ಹಾಗಾಗಿ ಸಕ್ಕರೆ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಬೆಲ್ಲವನ್ನ ತಿನ್ನಬಾರದು.
* ತೂಕ ಇಳಿಸಿಕೊಳ್ಳಲು ಬಯಸುವವರು ಬೆಲ್ಲವನ್ನ ಆದಷ್ಟು ತ್ಯಜಿಸಬೇಕು. 100 ಗ್ರಾಂ ಬೆಲ್ಲದಲ್ಲಿ 385 ಕ್ಯಾಲೋರಿಗಳಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಾರಣ ಕಡಿಮೆ ಪ್ರಮಾಣದಲ್ಲಿ ತಿಂದರೆ ಯಾವುದೇ ಅಪಾಯವಿಲ್ಲ.
* ಕೀಲು ನೋವಿನಿಂದ ಬಳಲುತ್ತಿರುವವರೂ ಬೆಲ್ಲವನ್ನ ಮಿತವಾಗಿ ಸೇವಿಸಬೇಕು ಎನ್ನುತ್ತಾರೆ ತಜ್ಞರು. ಬೆಲ್ಲವನ್ನ ಸೇವಿಸುವುದರಿಂದ ಕೀಲು ನೋವು ಮತ್ತು ಊತ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
* ಮಲಬದ್ಧತೆಯಿಂದ ಬಳಲುತ್ತಿರುವವರು ಕೂಡ ಬೆಲ್ಲವನ್ನ ಸೇವಿಸಬಾರದು. ಬೆಲ್ಲ ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
BIG NEWS : ಅಮಿತ್ ಶಾ ಒಬ್ಬ ‘ಗೂಂಡಾ-ರೌಡಿ’ : ಕೇಂದ್ರ ಗೃಹ ಸಚಿವರ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು: ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿಕೆಶಿಗೆ ಕೋರ್ಟ್ ಸಮನ್ಸ್