ಬೆಂಗಳೂರು: ನಿವೇಶನ ಖರೀದಿಯ ವೇಳೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕೆಲವೊಮ್ಮೆ ಮೋಸ ಆಗೋದು ಉಂಟು. ಆದರೇ ಈ ನಡುವೆ ಆನ್ ಲೈನ್ ಸೇವೆ ಆರಂಭದ ನಂತ್ರ ಕೊಂಚ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ನೀವು ಸೈಟ್ ಖರೀದಿ ಮಾಡ್ತಾ ಇದ್ದೀರಿ ಅಂದರೇ, ನೋಂದಣಿಯ ವೇಳೆಯಲ್ಲಿ ಕೆಲವು ಮಹತ್ವದ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಅದು ಯಾವುವು ಅಂತ ಮುಂದೆ ಓದಿ.
ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದಲೇ ಮಾಹಿತಿ ಹಂಚಿಕೊಳ್ಳಲಾಗಿದೆ. ಕಾವೇರಿ 2.0 ತಂತ್ರಾಂಶದಲ್ಲಿ ದಾಸ್ತಾವೇಜುಗಳ ನೋಂದಣಿಗೆ ಅರ್ಜಿ ಸಲ್ಲಿಸಲು ಮಾಹಿತಿ ನಮೂದಿಸಿದ ನಂತ್ರ, ಅಂತಿಮ ಅರ್ಜಿಯನ್ನು ಉಪ ನೋಂದಣಾಧಿಕಾರಿ ಅವರಿಗೆ ಸಲ್ಲಿಸುವ ಮುನ್ನ ಅರ್ಜಿದಾರರು ಅಥವಾ ಪಕ್ಷದಾರರು ಕಡ್ಡಾಯವಾಗಿ ದಾಸ್ತಾವೇಜು ಸಾರಾಂಶವನ್ನು ಪರಿಶೀಲಿಸಬೇಕು ಅಂತ ತಿಳಿಸಿದೆ.
ಈ ಮಹತ್ವದ ದಾಸ್ತಾವೇಜು ಸಾರಾಂಶ ಪರಿಶೀಲಿಸೋದು ಮರೆಯಬೇಡಿ
- ಸ್ವತ್ತಿನ ಮಾಲೀಕರ ಹೆಸರು ಹಾಗೂ ಸ್ವತ್ತಿನ ಪಿಐಡಿ ಸಂಖ್ಯೆ
- ದಾಸ್ತಾವೇಜು ಮಾದರಿ, ಆರ್ಟಿಕಲ್ ಮತ್ತು ಸಬ್ ಆರ್ಟಿಕಲ್
- ಪಕ್ಷಕಾರರ ಹೆಸರುಗಳು, ಗುರುತಿನ ದಾಖಲೆಗಳಾದಂತ ಆಧಾರ್, ಪಾಸ್ ಪೋರ್ಟ್, ಪಾನ್ ಕಾರ್ಡ್ ಗಳಲ್ಲಿ ಇರುವಂತೆ ಇದ್ಯಾ ಅಂತ ಪರಿಶೀಲಿಸುವುದು.
- ಸ್ವತ್ತಿನ ವಿಸ್ತೀರ್ಣದ ಮಾಹಿತಿ, ಚಕ್ಕುಬಂದಿ ವಿವರ
- ಮಾರುಕಟ್ಟೆ ಮೌಲ್ಯ, ನೋಂದಣಿ ಶುಲ್ಕ ಮತ್ತು ಮುದ್ರಾಂಕ
ಈ ಮಹತ್ವದ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬೇಕು. ಈ ಮಾಹಿತಿಯಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಅರ್ಜಿಯನ್ನು ಪರಿಷ್ಕರಿಸಿ, ಸರಿಯಾದ ಮಾಹಿತಿಯೊಂದಿಗೆ ಅಂತಿಮ ಅರ್ಜಿಯನ್ನು ಉಪನೋಂದಣಾಧಿಕಾರಿಗೆ ಸಲ್ಲಿಸೋದು ಮರೆಯಬೇಡಿ.
ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-68265316 ಗೆ ಕರೆ ಮಾಡಿ ಪಡೆಯಬಹುದಾಗಿದೆ.
#KarnatakaGovernment #eGovernance #GoodGovernance#DigitalIndia #stamps #property #propertyregistration #kaveri2 #SubRegistrar #IGR #karnataka pic.twitter.com/LbmQrhZE8e
— IGR karnataka (@IGRKarnataka) January 16, 2025
ಬೆಂಗಳೂರು ಜನತೆ ಗಮನಕ್ಕೆ: ಜ.18ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
2024-25ನೇ ಸಾಲಿನ ‘GDP’ ಬೆಳವಣಿಗೆ ದರ ಶೇ.6.4ಕ್ಕೆ ಏರಿಕೆ : ‘FICCI’ ಆರ್ಥಿಕ ಮುನ್ನೋಟ ಸಮೀಕ್ಷೆ