ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ಜೇನು ಹೆಚ್ಚು ಪರಿಚಯ ಬೇಕಿಲ್ಲ. ಚಿಕ್ಕ ಮಕ್ಕಳಿಗೂ ಜೇನುತುಪ್ಪದ ಬಗ್ಗೆ ತಿಳಿದಿದೆ. ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನ ಹೊಂದಿದ್ದು, ಜೇನು ತುಪ್ಪವನ್ನ ಆಯುರ್ವೇದದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಬಳಸಲಾಗುತ್ತದೆ. ಜೇನುತುಪ್ಪವು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನ ಒಳಗೊಂಡಿದೆ. ಜೇನುತುಪ್ಪದಿಂದ ಆರೋಗ್ಯವಷ್ಟೇ ಅಲ್ಲ ಸೌಂದರ್ಯವೂ ಹೆಚ್ಚುತ್ತದೆ. ಜೇನುತುಪ್ಪದಿಂದ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.
ಜೇನುತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೇನುತುಪ್ಪ ಕೂಡ ಗಾಯಗಳನ್ನ ಬೇಗ ವಾಸಿ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನ ಸಹ ಸುಧಾರಿಸುತ್ತದೆ. ಜೇನುತುಪ್ಪದ ಪ್ರಯೋಜನಗಳು ಅಷ್ಟೆ ಅಲ್ಲ. ಆದ್ರೆ, ಜೇನುತುಪ್ಪದಿಂದ ತ್ವಚೆಯ ಸೌಂದರ್ಯವನ್ನ ಇಮ್ಮಡಿಗೊಳಿಸಬಹುದು. ಆದ್ರೆ, ಜೇನುತುಪ್ಪವನ್ನ ನೇರವಾಗಿ ಮುಖಕ್ಕೆ ಹಚ್ಚಬಾರದು. ಆದರೆ ಜೇನುತುಪ್ಪವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಪ್ಯಾಚ್ ಟೆಸ್ಟ್ ಮಾಡಿ ಉಪಯೋಗಿಸಬೇಕು. ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ನೋಡೋಣ.
ಮೊಡವೆ ಸಮಸ್ಯೆ : ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಅವುಗಳಿಂದ ಶೀಘ್ರ ಪರಿಹಾರ ಪಡೆಯಬಹುದು. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನ ಹೊಂದಿದೆ. ಇವು ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಕಲೆಗಳನ್ನ ಕಡಿಮೆ ಮಾಡುತ್ತದೆ. ಹಾಗಾಗಿ ಮೊಡವೆ ಸಮಸ್ಯೆ ಇರುವವರು ಜೇನುತುಪ್ಪವನ್ನ ಹಚ್ಚಿಕೊಳ್ಳಬಹುದು.
ಹೈಡ್ರೇಟ್ : ಜೇನುತುಪ್ಪವು ಚರ್ಮವನ್ನ ಎಫ್ಫೋಲಿಯೇಟ್ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಜೇನುತುಪ್ಪದಲ್ಲಿರುವ ಕೆಲವು ಕಿಣ್ವಗಳು ನೈಸರ್ಗಿಕ ಎಕ್ಸ್‌ಫೋಲಿಯೇಟರ್’ಗಳಾಗಿ ಕಾರ್ಯನಿರ್ವಹಿಸುತ್ತವೆ. ಒಣ ತ್ವಚೆಯಿಂದ ಬಳಲುತ್ತಿರುವವರು ಜೇನುತುಪ್ಪವನ್ನ ಲೇಪಿಸಿದರೆ ಅದು ಮೃದು ಮತ್ತು ತೇವಾಂಶವನ್ನ ನೀಡುತ್ತದೆ. ಚರ್ಮವು ತಾಜಾವಾಗಿರುತ್ತದೆ.
ಚಿಕ್ಕವರಂತೆ ಕಾಣುತ್ತೀರಿ.!
ಜೇನು ತುಪ್ಪವನ್ನ ಮುಖಕ್ಕೆ ಹಚ್ಚುವುದರಿಂದ ಸದಾಕಾಲ ಹೊಳೆಯುತ್ತಿರುತ್ತದೆ. ಯಾಕಂದ್ರೆ, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕಾಲಜನ್ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ. ಹಾಗಾಗಿ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ವಯಸ್ಸಾದ ಪ್ರಕ್ರಿಯೆಯನ್ನ ಸಹ ನಿಧಾನಗೊಳಿಸುತ್ತದೆ.
ಸುಂದರ ಚರ್ಮ.!
ಜೇನು ತುಪ್ಪವನ್ನ ಹಚ್ಚುವುದರಿಂದ ಚರ್ಮ ಸುಂದರವಾಗುತ್ತದೆ. ಕಲೆಗಳು, ಮೊಡವೆಗಳು, ಸುಕ್ಕುಗಳು ಮತ್ತು ಗೆರೆಗಳಿಲ್ಲದೇ ಚರ್ಮವು ತುಂಬಾ ಸ್ಪಷ್ಟವಾಗಿರುತ್ತದೆ ಮತ್ತು ಪ್ರಕಾಶಮಾನವಾಗಿರುತ್ತದೆ. ಇದು ಪಿಗ್ಮೆಂಟೇಶನ್ ಸಮಸ್ಯೆಯನ್ನ ಸಹ ಕಡಿಮೆ ಮಾಡುತ್ತದೆ ಅವ್ರು ಚಿಕ್ಕವರಂತೆ ಕಾಣುತ್ತಾರೆ.
ಪಿಂಚಣಿದಾರರೇ ಎಚ್ಚರ : ಇನ್ನು 14 ದಿನ ಮಾತ್ರ ಬಾಕಿ, ಈ ಕೆಲಸ ಬೇಗ ಮಾಡಿದಿದ್ರೆ ‘ಪಿಂಚಣಿ’ ನಿಲ್ಲುತ್ತೆ!
14 ಲಕ್ಷ ಬಡವರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧ: ಸಿ.ಟಿ.ರವಿ ಆಕ್ಷೇಪ
BREAKING : ಸಂಗೀತ ಮಾಂತ್ರಿಕ ‘ಎ.ಆರ್. ರೆಹಮಾನ್’ ದಾಂಪತ್ಯದಲ್ಲಿ ಬಿರುಕು ; ವಿಚ್ಛೇದನ ಘೋಷಣೆ