ಬೆಂಗಳೂರು: ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ವಾರ್ಷಿಕ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಏಪ್ರಿಲ್ 20 ರಂದು ಈ ಕೆಳಗಿನ ಮೆಮು ರೈಲು ಸೇವೆಗಳನ್ನು ರದ್ದುಗೊಳಿಸಿ ಭಾಗಶಃ ರದ್ದುಗೊಳಿಸುವುದಾಗಿ ತಿಳಿಸಿದೆ.
66548 ಮಾರಿಕುಪ್ಪಂ-ಕೆ.ಆರ್.ಪುರಂ ಮೆಮು ಮತ್ತು 66547 ಕೆ.ಆರ್.ಪುರಂ-ಮಾರಿಕುಪ್ಪಂ ಮೆಮು ರೈಲುಗಳನ್ನು ರದ್ದುಪಡಿಸಲಾಗಿದೆ.
66546 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ವೈಟ್ಫೀಲ್ಡ್ ಮತ್ತು ಮಾರಿಕುಪ್ಪಂ ನಡುವೆ ರದ್ದುಗೊಂಡು ವೈಟ್ಫೀಲ್ಡ್ನಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 66545 ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ಮಾರಿಕುಪ್ಪಂ ಮತ್ತು ವೈಟ್ಫೀಲ್ಡ್ ನಡುವೆ ರದ್ದುಗೊಳ್ಳಲಿದ್ದು, ನಿಗದಿತ ಸಮಯದಲ್ಲಿ ಮಾರಿಕುಪ್ಪಂ ಬದಲಿಗೆ ವೈಟ್ಫೀಲ್ಡ್ನಿಂದ ಹೊರಡಲಿದೆ.
ರೈಲು ಸಂಖ್ಯೆ 66530 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ಮೆಮು ರೈಲು ತ್ಯಾಗಲ್ ಮತ್ತು ಬಂಗಾರಪೇಟೆ ನಡುವೆ ರದ್ದುಗೊಂಡು ತ್ಯಾಕಲ್ನಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 56531 ಬಂಗಾರಪೇಟೆ-ವೈಟ್ಫೀಲ್ಡ್ ಮೆಮು ಬಂಗಾರಪೇಟೆ ಮತ್ತು ತ್ಯಾಕಲ್ ನಡುವೆ ರದ್ದುಗೊಂಡು ನಿಗದಿತ ಸಮಯಕ್ಕೆ ಬಂಗಾರಪೇಟೆಯ ಬದಲು ತ್ಯಾಗಲ್ನಿಂದ ಹೊರಡಲಿದೆ.
ರೈಲು ಸಂಖ್ಯೆ 66581 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ಮೆಮು ರೈಲು ಮಾಲೂರು ಮತ್ತು ಬಂಗಾರಪೇಟೆ ನಡುವೆ ರದ್ದುಗೊಂಡು ಮಾಲೂರಿನಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 66582 ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ರೈಲು ಬಂಗಾರಪೇಟೆ ಮತ್ತು ಮಾಲೂರು ನಡುವೆ ರದ್ದುಗೊಂಡಿದ್ದು, ಬಂಗಾರಪೇಟೆಯ ಬದಲು ಮಾಲೂರಿನಿಂದ ನಿಗದಿತ ಸಮಯಕ್ಕೆ ಹೊರಡಲಿದೆ