ಕೆಎನ್‌ಎನ್‌ಸಿನಿಮಾಡೆಸ್ಕ್: ಅಖಿಲ ಕರ್ನಾಟಕ ವಾದ್ಯಗೋಷ್ಠಿ ಮಹಾ ಸಂಘ” ದ ವತಿಯಿಂದ ಆಯೋಜಿಸಿದ್ದ “ಅಪ್ಪು ನಮನ” ಕಾರ್ಯಕ್ರಮದಲ್ಲಿ “ರವಿಕೆ ಪ್ರಸಂಗ” ಚಿತ್ರ ತಂಡ ಭಾಗವಹಿಸಿ ಅಗಲಿದ ಅಪ್ಪುವಿಗೆ ನಮನ ಸಲ್ಲಿಸಿದೆ.
“ರವಿಕೆಪ್ರಸಂಗ” ಚಿತ್ರದ ಟೈಟಲ್ ಸಾಂಗಿಗೆ ಅದ್ಭುತವಾಗಿ ಕೋರಿಯೋಗ್ರಫಿ ಮಾಡಿದ್ದ ರಾಜು ಮಾಸ್ಟರ್ ಮಾಡಿದ್ದ ಸೇರಿ ಗೀತಾಭಾರತಿ ಭಟ್, ಕಲಾರತಿ ಮಹಾದೇವ್, ರಕ್ಷಕ್, ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ, ಹಾಗೂ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದ ಪಾವನ ಸಂತೋಷ್ ಮತ್ತು ಚಿತ್ರದ ನಿರ್ಮಾಪಕ ಶಿವರುದ್ರಯ್ಯ, ಗಿರೀಶ್.ಬಿ, ಸಂಸ್ಥಾಪಕರು, ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್ ಮತ್ತು ಕಂದಯ್ಯಶೆಟ್ಟಿ , ಈ ವೇಳೇ ಹಾಜರಿದ್ದು ನೆಚ್ಚಿನ ನಟನನ್ನು ಸ್ಮರಣೆ ಮಾಡಿದರು.
ಇನ್ನೂ “ರವಿಕೆ ಪ್ರಸಂಗ” ಚಿತ್ರದ ನಾಯಕಿಯಾದ ಗೀತಾಭಾರತಿಭಟ್ ಮಾತನಾಡಿದು ರವಿಕೆಯ ಕುರಿತು ಮಾಡಿರುವ ವಿಶೇಷವಾದ ಸಿನಿಮಾ ಇದಾಗಿದ್ದು, ಕುಟುಂಬದ ಎಲ್ಲರೂ ಕೂಡ ನೋಡಬಹುದಾಗಿದೆ ಅಂತ ತಮ್ಮ ಸಂಭ್ರಮವನ್ನು ಹಂಚಿಕೊಂಡರು.
ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಅಧ್ಯಕ್ಷರಾದ ಡಾಕ್ಟರ್.ಆರ್ ಶಂಕರ್ ಅವರೊಂದಿಗೆ ಅಲ್ಲಿ ನೆರೆದಿದ್ದ ವಾದ್ಯಗೋಷ್ಠಿಯ ಕಲಾವಿದರೆಲ್ಲಾ ರವಿಕೆಪ್ರಸಂಗ ಚಿತ್ರತಂಡಕ್ಕೆ ಶುಭಕೋರಿದ್ದು ವಿಶೇಶವಾಗಿತ್ತು
ಇನ್ನೂ ಸಿನಿಮಾದ ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಮಾತನಾಡಿ ರವಿಕೆ ಎಂದರೇ ತಾಯಿಯಷ್ಟೇ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನಮ್ಮಲ್ಲಿ ಅರಿಶಿಣ-ಕುಂಕುಮದ ಜೊತೆಗೆ ರವಿಕೆಯನ್ನು ನೀಡುವ ಸಂಪ್ರದಾಯವಿದೆ. ಹೀಗಾಗಿ ಹಾಗೇ ರವಿಕೆಗೆ ತನ್ನದೇ ಆದ ವಿಶೇಷ ಮಹತ್ವವಿರುವುದರಿಂದ ಸಿನಿಮಾದಲ್ಲಿ ಕೂಡ ಇದನ್ನು ನಾವುಕಾಣಬಹುದಾಗಿದೆ ಅಂಥ ತಿಳಿಸಿದರು . ಕುಟುಂಬದವರು ಎಲ್ಲರೂ ನೋಡುವ ಸುಂದರ ಸಿನಿಮಾ ಇದಾಗಿದ್ದು, ಮಿಸ್ ಮಾಡದೇ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾವನ್ನು ನೋಡುವಂತೆ ನೋಡುಗರಲ್ಲಿ ಮನವಿ ಮಾಡಿಕೊಂಡರು. ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ಭರ್ಜರಿಯಾಗಿ ರವಿಕೆಪ್ರಸಂಗ ಚಿತ್ರ ಬಿಡುಗಡೆಯಾಗುತ್ತಿದೆ.