ಬೆಂಗಳೂರು: ಕೆ ಐ ಎ ಡಿ ಬಿ ಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ ಜಮೀನು ನೀಡುವುದಿಲ್ಲ ಎಂಬುದಾಗಿ ರೈತ ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ಆದರೇ ಇಂದು ದಿಢೀರ್ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದು, ನಾವು 1771 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು ಪತ್ರ ಬರೆದಿದೆ. ಅದರಲ್ಲಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಜಮೀನನನ್ನು ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ರಾಜ್ಯ ಸರ್ಕಾರವು ರೈತರ ಭೂಮಿಗೆ ಒಳ್ಳೆಯ ಬೆಲೆ ನಿಗದಿ ಪಡಿಸಬೇಕು. ಆ ಮೂಲಕ ಜಮೀನು ಖರೀದಿ ಮಾಡಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ವಿನಂತಿಸಿದ್ದಾರೆ.
ಇನ್ನೂ ನಾಲ್ಕು ಷರತ್ತುಗಳನ್ನು ರೈತ ಹೋರಾಟ ಸಮಿತಿ ವಿಧಿಸಿದೆ. ಅದರಲ್ಲಿ ಮೊದಲನೆಯ ಷರತ್ತು ಪ್ರತಿ ಎಕರೆಗೆ 3.50 ಕೋಟಿಗಳ ದರ ನಿಗದಿ ಪಡಿಸಬೇಕು. ಎರಡನೇಯದು ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸದ ಅನುಗುಣವಾಗಿ ಉದ್ಯೋಗ ನೀಡುವುದು. ಮೂರನೆಯದು ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು. ನಾಲ್ಕನೆಯ ಷರತ್ತಾಗಿ ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು ಎಂಬುದಾಗಿ ತಿಳಿಸಲಾಗಿದೆ.
ರಾಜ್ಯದ 8 ಹೊಸ ತಾಲ್ಲೂಕಿನ ಜನತೆಗೆ ಸರ್ಕಾರ ಗುಡ್ ನ್ಯೂಸ್: ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ