ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಹೀಗಾಗಿ ಬೆಂಗಳೂರು ನಗರ ವಿವಿ, ಇನ್ಮುಂದೆ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಮರುನಾಮಕರಣವಾಗಲಿದೆ.
ಬೆಂಗಳೂರು ನಗರ ವಿವಿಯ ಹೆಸರು ಮರು ನಾಮಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ವಿಧೇಯಕದ ಬಗ್ಗೆ ಚರ್ಚೆಯ ನಂತ್ರ ಅಂಗೀಕಾರವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆಯಾಗಲಿದೆ.
ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವು ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡರೇ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಬೆಂಗಳೂರು ನಗರ ವಿವಿ ಮರು ನಾಮಕರಣವಾಗಲಿದೆ.
BREAKING: ಧರ್ಮಸ್ಥಳ ಕೇಸ್: ವೀರೇಂದ್ರ ಹೆಗಡೆ ಫಸ್ಟ್ ರಿಯಾಕ್ಷನ್ ಇಲ್ಲಿದೆ
BREAKING: ಇಂದು ಸಂಜೆ 5ಕ್ಕೆ ನಡೆಯಬೇಕಿದ್ದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ 7.30ಕ್ಕೆ ಮುಂದೂಡಿಕೆ