ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಆನ್‌ಲೈನ್ ಕೌನ್ಸಿಲಿಂಗ್ ಮುಖಾಂತರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು /ಸರ್ಕಾರಿ ಪಾಲಿಟೆಕ್ನಿಕ್ / ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಸಂಸ್ಥೆಗಳಲ್ಲಿನ ಖಾಯಂ ಉಪನ್ಯಾಸಕರಿಗೆ ಬೋಧನಾ ಕಾರ್ಯಭಾರವನ್ನು ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ 2025-26ನೇ ಶೈಕ್ಷಣಿಕ ಸಾಲಿನ ಅವಧಿಗೆ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಉಲ್ಲೇಖ-(1) ರ ಸರ್ಕಾರದ ಪತ್ರದಲ್ಲಿ ಅನುಮೋದನ ನೀಡಲಾಗಿದೆ.
2025-2026 ನೇ ಸಾಲಿನಲ್ಲಿ ಸಂಸ್ಥೆಗಳಲ್ಲಿ ವಿಷಯವಾರು ಮಂಜೂರಾಗಿರುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ‘ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ನೇಮಕ ಮಾಡಿ ಆದೇಶಿಸಿಸಲಾಗಿದೆ.
ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಷರತ್ತು ಹಾಗೂ ನಿಬಂಧನೆಗಳು ಈ ಕೆಳಗಿನಂತಿರುತ್ತವೆ:
2024-25 ನೇ ಸಾಲಿನಲ್ಲಿ ‘ಆಯುಕ್ತರ ಕಛೇರಿ ಮುಖಾಂತರ ಕೌನ್ಸಲಿಂಗ್/ Retain ನಲ್ಲಿ ಆಯ್ಕೆಗೊಂಡು ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಸದರಿ ಸಂಸ್ಥೆಯಲ್ಲಿಯೇ ಮುಂದುವರಿಯಲು ಇಚ್ಛಿಸುವ ಅಭ್ಯರ್ಥಿಗಳನ್ನು ಸದರಿ ಸಂಸ್ಥೆಯಲ್ಲಿನ ಕಾರ್ಯಭಾರದ ಲಭ್ಯತೆಗೆ ಅನುಸಾರವಾಗಿ ಅದೇ ಸಂಸ್ಥೆಯಲ್ಲಿ ಮುಂದುವರೆಯುವ ಅಭ್ಯರ್ಥಿಗಳ ಪಟ್ಟಿಯನ್ನು ಉಲ್ಲೇಖ(4) ಸುತ್ತೋಲೆಯಲ್ಲಿ ಪ್ರಕಟಿಸಲಾಗಿದೆ (Retain List).
2025-26ನೇ ಶೈಕ್ಷಣಿಕ ಸಾಲಿಗೆ ಆನ್‌ಲೈನ್ ಕೌನ್ಸಿಲಿಂಗ್ ನಲ್ಲಿ ಆಯ್ಕೆ ಮಾಡಿಕೊಂಡ ಅತಿಥಿ ಉಪನ್ಯಾಸಕರು ವಿಷಯವಾರು ಪಟ್ಟಿ ಅನುಬಂಧ-2 (Allotment) ನ್ನು ಈ ಅಧಿಸೂಚನೆಗೆ ಲಗತ್ತಿಸಿದೆ. ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ ಆಯ್ಕೆಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು / ಸರ್ಕಾರಿ ಪಾಲಿಟೆಕ್ನಿಕ್ / ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಸಂಸ್ಥೆಗಳಲ್ಲಿ ವರದಿ ಮಾಡಿಕೊಳ್ಳಲು 03 ಕೆಲಸದ ದಿನಗಳವರೆಗೆ ಮಾತ್ರ ಅವಕಾಶವಿರುತ್ತದೆ. ಆಯ್ಕೆಯಾದ ಅತಿಥಿ ಉಪನ್ಯಾಸಕರು 03 ಕೆಲಸದ ದಿನಗಳ ಒಳಗೆ ಸಂಸ್ಥೆಯಲ್ಲಿ ಕಾರ್ಯವರದಿ ಮಾಡಿಕೊಳ್ಳದಿದ್ದಲ್ಲಿ ಸದರಿ ಅತಿಥಿ ಉಪನ್ಯಾಸಕರ ನೇಮಕಾತಿಯು ಸ್ವಯರಿ’ರಾಗುವುದು. ಪ್ರಾಂಶುಪಾಲರು, ಆಯ್ಕೆಯಾದ ಅತಿಥಿ ಉಪನ್ಯಾಸಕರ ವಿದ್ಯಾರ್ಹತೆ ಪ್ರಮಾಣ ಪತ್ರ, ಸೇವಾ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಮೂಲದಾಖಲೆಗಳೊಂದಿಗೆ ಪರಿಶೀಲಿಸಿ ಸದರಿ ದಾಖಲೆಗಳು ಕ್ರಮಬದ್ಧವಾಗಿರುವ ಬಗ್ಗೆ, ಖಚಿತಪಡಿಸಿಕೊಳ್ಳುವುದು ಒಂದು ವೇಳೆ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಮೂಲದಾಖಲೆಗಳೊಂದಿಗೆ ಪರಿಶೀಲಿಸದೆ ಕರ್ತವ್ಯಕ್ಕೆ ವರದಿ ಮಾಡಿಸಿಕೊಂಡಲ್ಲಿ/ವ್ಯತ್ಯಾಸಗಳಾದಲ್ಲಿ ಸಂಬಂಧಪಟ್ಟ ಹೊಣೆಗಾರರನ್ನಾಗಿಸಲಾಗುತ್ತದೆ. ಕಾಲೇಜಿನ ಪ್ರಾಂಶುಪಾಲರನ್ನೇ ನೇರ
ಆಯ್ಕೆಯಾದ ಅತಿಥಿ ಉಪನ್ಯಾಸಕರು ಆನ್‌ಲೈನ್ ಮೂಲಕ ಸಲ್ಲಿಸಿರುವ ಮಾಹಿತಿಯು ತಪ್ಪಾಗಿ ನೀಡಿದಲ್ಲಿ ಅಂತಹ ತಪ್ಪು ಮಾಹಿತಿ / ನ್ಯೂನ್ಯತೆಗಳಿಗೆ ಸಂಬಂದಪಟ್ಟ ಅತಿಥಿ ಉಪನ್ಯಾಸಕರೇ ಜವಾಬ್ದಾರರಾಗಿರುತ್ತಾರೆ. ಆಯ್ಕೆಯಾದ ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಹಾಜರುಪಡಿಸುವ ವಿದ್ಯಾರ್ಹತೆಯ ಅಂಕಪಟ್ಟಿಗಳು, ವಿಕಲಚೇತನರ ಪ್ರಮಾಣ ಪತ್ರ. ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ಸೇವಾ ಅವಧಿಯ ಪ್ರಮಾಣ ಪತ್ರಗಳು ಹಾಗೂ ಇತರೆ ಅಗತ್ಯ ದಾಖಲೆಗಳಲ್ಲಿ ತಪ್ಪು/ನ್ಯೂನ್ಯತೆ ಅಥವಾ ‘ನಕಲಿ’ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಿ ಅಂತಹ ಅಭ್ಯರ್ಥಿಗಳ ಮಾಹಿತಿಯನ್ನು ಆಯುಕ್ತರು, ತಾಂತ್ರಿಕ ಶಿಕ್ಷಣ ಇಲಾಖೆರವರ ಗಮನಕ್ಕೆ ತರಲು ಸೂಚಿಸಲಾಗಿದೆ.
ಉಲ್ಲೇಖ(5) ರ ಸುತ್ತೋಲೆರನ್ನಯ ಎಪ್ರಿಲ್-2025 ರಿಂದ ಪ್ರಾಂಶುಪಾಲರ ಹಂತದಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ನಿಯಮಾನುಸಾರ ಗೌರವಧನ ಪಾವತಿಸುವುದು.
ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಾಲೇಜು ಶಿಕ್ಷಣ ಇಲಾಖೆಯಲ್ಲೂ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಉಲ್ಲೇಖ 3 ರ ಆದೇಶದಲ್ಲಿ ಸೇವಾ ಅವಧಿಗೆ ಅನುಗುಣವಾಗಿ ಹೆಚ್ಚಿಸಿರುವ ಗೌರವಧನವನ್ನು (ರೂ.5000/-, ರೂ.6000/-, ರೂ.7000/- ಹಾಗೂ ರೂ.8000/-) ಇಡಿಗಂಟು ಮತ್ತು ಆರೋಗ್ಯ ವಿಮೆ ಸೌಲಭ್ಯಗಳನ್ನು ಯಾವುದಾದರೂ ಒಂದು ಇಲಾಖೆಯಲ್ಲಿ ಮಾತ್ರ ಪಡೆಯತಕ್ಕದ್ದು.
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿಗೆ ನಿಯಮಾನುಸಾರ ಗೌರವಧನ ಪಾವತಿಸುವುದು. ಪೂರ್ಣ ಕಾರ್ಯಭಾರವಿಲ್ಲದ ಅತಿಥಿ ಉಪನ್ಯಾಸಕರಿಗೆ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ಪಾವತಿಸುವುದು.
ಆಯ್ಕೆಯಾದ ಅತಿಥಿ ಉಪನ್ಯಾಸಕರು ಆನ್-ಲೈನ್ ಅರ್ಜಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆಗಳನ್ನು ಮಾತ್ರ ಪರಿಗಣಿಸಿ, ಗೌರವಧನವನ್ನು ನಿಗದಿಪಡಿಸತಕ್ಕದ್ದು. (ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ನಿಗಧಿತ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು ಹಾಗೂ ಅಂತಹ ವಿದ್ಯಾರ್ಹತೆಯ ಅಂಕಪಟ್ಟಿ/ಪಮಾಣ ಪತ್ರಗಳನ್ನು ಹೊಂದಿರಬೇಕು) ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅವಧಿಯ ನಂತರ ಪಡೆಯುವ ಹೆಚ್ಚುವರಿ ವಿದ್ಯಾರ್ಹತೆಗಳನ್ನು ಅದೇ ಶೈಕ್ಷಣಿಕ ವರ್ಷದಲ್ಲಿ ಪರಿಗಣಿಸಿ, ಗೌರವಧನ ಪರಿಷ್ಕರಿಸಲು ಅವಕಾಶವಿರುವುದಿಲ್ಲ.
ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಹಾಜರಾತಿ ವಹಿಯನ್ನು ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದು ಹಾಗೂ ಪೂರ್ಣ ಪ್ರಮಾಣದ ಕಾರ್ಯಭಾರ ಲಭ್ಯವಿರುವ ಎಲ್ಲಾ ಅತಿಥಿ ಉಪನ್ಯಾಸಕರುಗಳು ಕಛೇರಿ ವೇಳೆ ಸಂಸ್ಥೆಯಲ್ಲಿ ಹಾಜರಿರತಕ್ಕದ್ದು.
ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕಾಲೇಜು ಆಯ್ಕೆಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ ಗರಿಷ್ಠ 6 ತಿಂಗಳ ಕಾಲಾವಧಿಗೆ ಗೌರವಧನ ರಹಿತ Maternity Leave ಪಡೆಯಲು ಅವಕಾಶ ನೀಡಲಾಗಿದ್ದು ಸಾಮಾನ್ಯ ಮುಕ್ತಾಯ ದಿನಾಂಕದವರೆಗೆ ಸೀಮಿತಗೊಳಿಸಿ ಸದರಿ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಲಾಗುವುದು. Maternity Leave ಪಡೆದ ಅತಿಥಿ ಉಪನ್ಯಾಸಕರ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆಮಾಡಿಕೊಳ್ಳಲಾಗುವುದು. ಬದಲಿ ಅತಿಥಿ ಉಪನ್ಯಾಸಕರನ್ನು Maternity Leave ಪಡೆದಿರುವ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಂಡ ನಂತರ ಬಿಡುಗಡೆ ಮಾಡಲಾಗುವುದು.
ಅತಿಥಿ ಉಪನ್ಯಾಸಕರು ಕಾಲೇಜಿನ ಪ್ರಾಂಶುಪಾಲರ ನಿರ್ದೇಶನದ ಮೇರೆಗೆ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವುದು.
ಅತಿಥಿ ಉಪನ್ಯಾಸಕರು ತಮಗೆ ವಹಿಸಿದ ಕಾರ್ಯಭಾರವನ್ನು ನಿರ್ವಹಿಸುವುದರೊಂದಿಗೆ ಪ್ರಾಂಶುಪಾಲರು ವಹಿಸುವ ಇತರೆ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
ಕರ್ತವ್ಯ ನಿರತ ಅತಿಥಿ ಉಪನ್ಯಾಸಕರು 60 ವರ್ಷ ವಯೋಮಿತಿ ಪೂರೈಸಿದ ತಕ್ಷಣ ಅವರನ್ನು ಕರ್ತವ್ಯದಿಂದ ಪ್ರಾಂಶುಪಾಲರ ಹಂತದಲ್ಲಿಯೇ ಬಿಡುಗಡೆ ಮಾಡುವುದು.
ಹೊಸ ನೇಮಕಾತಿ/ವರ್ಗಾವಣೆ/ನಿಯೋಜನೆ ಹಾಗೂ ಇನ್ನಿತರ ಕಾರಣದಿಂದಾಗಿ ಖಾಯಂ ಉಪನ್ಯಾಸಕರು ಕಾಲೇಜಿನಲ್ಲಿ ಕರ್ತವ್ಯಕ್ಕೆ, ಹಾಜರಾದಾಗ ಅಥವಾ ಸೆಮಿಸ್ಟರ್ ಅವಧಿಯಲ್ಲಿ ಕಾರ್ಯಭಾರ ಕಡಿಮೆಯಾದಾಗ ಅಥವಾ ಇತರ ಕಾರಣಗಳಿಂದ ಕಾರ್ಯಭಾರ ಕೊರತೆಯಾದಲ್ಲಿ ಆ ಕಾಲೇಜಿಗೆ ಸಂಬಂಧಪಟ್ಟ ವಿಷಯದಲ್ಲಿ ಕೊನೆಯದಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸುವುದು.
ಖಾಯಂ ಉಪನ್ಯಾಸಕರು ವರ್ಗಾವಣೆ/ನಿಯೋಜನೆ/ವಯೋನಿವೃತಿ/ಸ್ವಯಂ ನಿವೃತ್ತಿ/ ನಿಧನ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ವಿವಿಧ ಕಾರಣಗಳಿಂದ ಕರ್ತವ್ಯದಿಂದ ಬಿಡುಗಡೆಯಾದಾಗ ಲಭ್ಯವಾಗುವ ಕಾರ್ಯಭಾರದ ಮಾಹಿತಿಯನ್ನು ಆಯುಕ್ತಾಲಯದ ಗಮನಕ್ಕೆ ಕಾಲಕಾಲಕ್ಕೆ ತರುವುದು.
ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ತಾತ್ಕಾಲಿಕ ವ್ಯವಸ್ಥೆಯಡಿ ಆಯ್ಕೆ ಮಾಡಿಕೊಳ್ಳುವುದರಿಂದ ಸದರಿ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ, ಖಾಯಂ ಮಾಡಲು ಮತ್ತು ಭೋದಕ ಹುದ್ದೆಯ ನೇಮಕಾತಿಯಲ್ಲಿ ಆದ್ಯತೆ ನೀಡಲು ಅವಕಾಶ ಇರುವುದಿಲ್ಲ ಹಾಗೂ ಈ ಬಗ್ಗೆ ಕೃಪಾಂಕ ಕೋರಲು ಸಹ ಯಾವುದೇ ಹಕ್ಕು ಇರುವುದಿಲ್ಲ.
ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರಿಂದ ಈ ಸುತ್ತೋಲೆಗೆ ಲಗತ್ತಿಸಿರುವ ಅನುಬಂಧ-1 ರ ಮುಚ್ಚಳಿಕೆಯನ್ನು ಪಡೆದು ಪ್ರಾಂಶುಪಾಲರು ಪ್ರತ್ಯೇಕ ಕಡತವನ್ನು ನಿರ್ವಹಿಸತಕ್ಕದ್ದು.
ಅತಿಥಿ ಉಪನ್ಯಾಸಕರುಗಳು ಯಾವುದೇ ಮನವಿ/ದೂರು/ಇತರೆ ಯಾವುದೇ ಪತ್ರಗಳನ್ನು ಕಡ್ಡಾಯವಾಗಿ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸತಕ್ಕದ್ದು, ಪ್ರಾಂಶುಪಾಲರು ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆರವರ ಗಮನಕ್ಕೆ ತರುವುದು.
ಸಂಸ್ಥೆಗಳಲ್ಲಿ ವರದಿಮಾಡಿಕೊಂಡಿರುವ ಅತಿಥಿ ಉಪನ್ಯಾಸಕರುಗಳ ಮಾಹಿತಿಯ ನಮೂನೆಯನ್ನು ಮಾತ್ರ ಇಲಾಖೆಗೆ ಸಲ್ಲಿಸತಕ್ಕದ್ದು ಹಾಗೂ ಸದರಿ ಅರೆಕಾಲಿಕ ಉಪನ್ಯಾಸಕರುಗಳ ದಾಖಲಾತಿಗಳನ್ನು ಸಂಸ್ಥೆಯಲ್ಲಿಯೇ ಇರಿಸಿಕೊಳ್ಳತಕ್ಕದ್ದು.
ಅತಿಥಿ ಉಪನ್ಯಾಸಕರು ಸಲ್ಲಿಸುವ ಮನವಿಗಳಿಗೆ ಸರ್ಕಾರ! ಈ ಕಛೇರಿಯ ಸುತ್ತೋಲೆಗಳಲ್ಲಿ ಸೂಚಿಸಿರುವಂತೆ ಪ್ರಾಂಶುಪಾಲರ ಹಂತದಲ್ಲಿ ಸೂಕ್ತ ಮಾಹಿತಿಯನ್ನು ನೀಡುವುದು ಒಂದು ವೇಳೆ ತಮ್ಮ ಹಂತದಲ್ಲಿ ಸಾಧ್ಯವಾಗದಿದ್ದಲ್ಲಿ ಸದರಿ ಮನವಿಯನ್ನು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆರವರ ಗಮನಕ್ಕೆ ತರುವುದು.
ಅತಿಥಿ ಉಪನ್ಯಾಸಕರ ವಿರುದ್ಧ ಗಂಭೀರ ಆರೋಪಗಳು ಅಧಿಕೃತವಾಗಿ ಸ್ವೀಕೃತವಾದಲ್ಲಿ ಅಥವಾ ಅತಿಥಿ ಉಪನ್ಯಾಸಕರಿಂದ ಅಶಿಸ್ತು ವರ್ತನೆ/ ಪಾಠ ಪ್ರವಚನೆಗಳಿಗೆ ತೊಂದರೆಯಾದಲ್ಲಿ ಅಥವಾ ಪಾಠ-ಪ್ರವಚನಗಳನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅಂತಹ ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರ ಹಂತದಲ್ಲಿ ಎಚ್ಚರಿಕೆ ನೋಟೀಸನ್ನು ನೀಡುವುದು. ಆದಾಗ್ಯೂ ಸದರಿ ಅತಿಥಿ ಉಪನ್ಯಾಸಕರು ಅದೇ ಚಟುವಟಿಕೆಗಳನ್ನು ಮರುಕಳಿಸಿದರೆ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ವಿವರವಾದ ವರದಿಯನ್ನು ಸಲ್ಲಿಸತಕ್ಕದ್ದು.