ಬೆಂಗಳೂರು : ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ವಿಕಲಚೇತನರ ಕುಂದು ಕೊರತೆಗಳ ನಿವಾರಣಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕಲಂ-23(1) ರಲ್ಲಿ “ಸರ್ಕಾರದ ಪ್ರತಿಯೊಂದು ಸಂಸ್ಥೆಯು, 19ನೇ ಪ್ರಕರಣದ ಉದ್ದೇಶಕ್ಕಾಗಿ ಒಬ್ಬರು ಕುಂದುಕೊರತೆಗಳ ನಿವಾರಣಾಧಿಕಾರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಅಂಥ ಅಧಿಕಾರಿಯ ನೇಮಕದ ಬಗ್ಗೆ ಸಂದರ್ಭಾನುಸಾರ ಚೀಫ್ ಕಮಿಷನರ್ರಿಗೆ ಅಥವಾ ಸ್ಟೇಟ್ ಕಮಿಷನರ್ರಿಗೆ ತಿಳಿಸತಕ್ಕದ್ದು.” ಎಂದು ನಮೂದಿಸಲಾಗಿರುತ್ತದೆ.
ಅದರಂತೆ ಸುತ್ತೋಲೆ ಸಂಖ್ಯೆ: ಮಮಇ 131 ಪಿಹೆಚ್ಪಿ 2019, ದಿನಾಂಕ: 10.10.2019, ಮತ್ತು ದಿನಾಂಕ:09.01.2023ರ ಸುತ್ತೋಲೆಗಳಲ್ಲಿ ಎಲ್ಲಾ ಇಲಾಖೆಗಳು, ಸಂಸ್ಥೆ, ನಿಗಮ, ಮಂಡಳಿ ಹಾಗೂ ಆಯೋಗಗಳು ಅಂಗವಿಕಲರ ಕುಂದುಕೊರತೆ ನಿವಾರಿಸಲು ಅಧಿಕಾರಿಯೊಬ್ಬರನ್ನು ನೇಮಿಸುವಂತೆಯೂ ಹಾಗೂ ಈ ರೀತಿ ನೇಮಕ ಮಾಡಿದ ಅಧಿಕಾರಿಗಳ ಹೆಸರು, ಪದನಾಮ, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇತ್ಯಾದಿ ವಿವರವನ್ನು ರಾಜ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಇವರಿಗೆ ತಿಳಿಸಲು ಕ್ರಮವಹಿಸುವಂತೆ ಕೋರಲಾಗಿರುತ್ತದೆ.
ದಿನಾಂಕ:08.07.2025ರಂದು ಜರುಗಿದ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ ಸಭೆಯ ನಡವಳಿಗಳಲ್ಲಿ ಎಲ್ಲಾ 건FO ಕಛೇರಿಗಳಲ್ಲಿ ಸರ್ಕಾರದ ನಿವಾರಣಾಧಿಕಾರಿಯನ್ನು ನೇಮಕ ವಿಕಲಚೇತನರ ಕುಂದು ಮಾಡಿರುವ ಕುರಿತು ಮಾಹಿತಿಯನ್ನು ಕೊರತೆಗಳ ಪಡೆಯಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕಲಂ-23ರನ್ವಯ “ಸರ್ಕಾರದ ಪ್ರತಿಯೊಂದು ಇಲಾಖೆ ಮತ್ತು ಅಧೀನ ಕಚೇರಿಗಳಲ್ಲಿ 19ನೇ ಪ್ರಕರಣದ ಉದ್ದೇಶಕ್ಕಾಗಿ ಒಬ್ಬರು ಕುಂದುಕೊರತೆಗಳ ನಿವಾರಣಾಧಿಕಾರಿಯನ್ನು ನೇಮಿಸುವಂತೆಯೂ ಹಾಗೂ ಈ ರೀತಿ ನೇಮಕ ಮಾಡಿದ ಅಧಿಕಾರಿಗಳ ಹೆಸರು, ಪದನಾಮ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ರಾಜ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಇವರಿಗೆ ಕೂಡಲೇ ಕಳುಹಿಸಲು ಕ್ರಮವಹಿಸುವಂತೆ ಈ ಮೂಲಕ ಕೋರಿದೆ.