Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘US ಸೇನಾ ನೆಲೆಗಳನ್ನು ಮುಚ್ಚಿ, ಇಲ್ಲವೇ ದಾಳಿ ಎದುರಿಸಿ’: ಇರಾನ್ ನೂತನ ಸುಪ್ರೀಂ ಲೀಡರ್ ಖಡಕ್ ವಾರ್ನಿಂಗ್!

13/03/2026 7:03 AM

‘ಸದನ ನಡೆಯುವುದು ನಿಯಮಗಳ ಮೇಲೆ, ವೈಯಕ್ತಿಕ ಇಚ್ಛೆಯ ಮೇಲಲ್ಲ’: ಅವಿಶ್ವಾಸ ನಿರ್ಣಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ಓಂ ಬಿರ್ಲಾ ಖಡಕ್ ಎಚ್ಚರಿಕೆ!

13/03/2026 6:57 AM

​ಗ್ಯಾಸ್ ಬುಕ್ಕಿಂಗ್ ಇನ್ಮುಂದೆ ಅತಿ ಸುಲಭ: ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡಿ!

13/03/2026 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5707/02/2026 8:29 AM

ಬೆಂಗಳೂರು : 2026-27ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೋಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

2026-27ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು https://schooleducation.karnataka.gov.in/ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಆನ್ ಲೈನ್ ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳು ಅಳವಡಿಸಿದ್ದು ಅದರಂತೆ ಪರಿಷ್ಕರಿಸಿ ಉಲ್ಲೇಖಿತ(9)ರಲ್ಲಿ ವಿವರವಾದ ಸುತ್ತೋಲೆ ಹೊರಡಿಸಲಾಗಿದೆ.

ಹೊಸ ಖಾಸಗಿ ಅನುದಾನರಹಿತ ಶಾಲೆಯ ನೋಂದಣಿಗಾಗಿ ಅಳವಡಿಸಿರುವ ಮಾನದಂಡಗಳು:-

ಉಲ್ಲೇಖ [5]ರ ತಿದ್ದುಪಡಿ ಆದೇಶದಂತೆ ಕೆಳಕಂಡ ಸಂಸ್ಥೆಗಳು ಹೊಸ ಶಾಲಾ ನೊಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
1. ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 [1960 ರ ಕರ್ನಾಟಕ ಕಾಯ್ದೆ 17] ಅಡಿಯಲ್ಲಿ ನೋಂದಾಯಿಸಲಾದ ಸಂಘ.

2. ಭಾರತೀಯ ಟ್ರಸ್ಟ್ ಕಾಯ್ದೆ 1882 ರ ಅಡಿಯಲ್ಲಿ ನೋಂದಾಯಿಸಲಾದ ದತ್ತಿ ಟ್ರಸ್ಟ್.

3. ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 8 ರ ಅಡಿಯಲ್ಲಿ ನೋಂದಾಯಿಸಲಾದ ಕಂಪನಿ [2013 ರ ಕೇಂದ್ರ ಕಾಯ್ದೆ 18]

4. ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆ 2008 [2009 ರ ಕೇಂದ್ರ ಕಾಯ್ದೆ 6] ಅಡಿಯಲ್ಲಿ ನೋಂದಾಯಿಸಲಾದ ಲಾಭರಹಿತ ಉದ್ದೇಶದ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ.

ಆದರೆ, ಆಸಕ್ತ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವ ಮೊದಲು ವೆಬ್ಸೈಟ್ನಲ್ಲಿನ ಮಾನದಂಡಗಳನ್ನು ಗಮನಿಸಿ ಎಲ್ಲಾ ಪೂರಕ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು / ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸತಕ್ಕದ್ದು.

ಉಲ್ಲೇಖ[5]ರ ಅಧಿಸೂಚನೆಯಲ್ಲಿ ಶಾಲೆಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ. 1. ಪ್ರಾಥಮಿಕ ಶಾಲೆ – 01 ರಿಂದ 05 ಕಿರಿಯ ಪ್ರಾಥಮಿಕ ಶಾಲೆ, 1 ರಿಂದ 8ನೇ ತರಗತಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ 6 ರಿಂದ 8 ಹಿರಿಯ ಪ್ರಾಥಮಿಕ ಶಾಲೆ.

2. ಪ್ರೌಢ ಶಾಲೆ – 9 ಮತ್ತು 10ನೇ ತರಗತಿ.

2025-26ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಶಾಲಾ ಆಡಳಿತ ಮಂಡಳಿಗಳು ಉದ್ದೇಶಿತ ಸ್ಥಳದಲ್ಲಿ ಉಲ್ಲೇಖ [5]ರ ನಿಯಮ-4 [i] ರಲ್ಲಿ ನಿಗದಿಪಡಿಸಿರುವಂತೆ ಪ್ರತಿ ವಿದ್ಯಾರ್ಥಿಗೆ ಒಂದು ಚದರ ಮೀಟರ್ ಸ್ಥಳಾವಕಾಶವನ್ನು ಕಲ್ಪಿಸಬೇಕು ಹಾಗೂ ನಿಯಮ-4 [i] [iv]ರಲ್ಲಿ ನಿಗದಿಪಡಿಸಿರುವಂತೆ ಸ್ವಂತದ ಅಥವಾ ಕನಿಷ್ಟ 30 ವರ್ಷಗಳು ಭೋಗ್ಯಕ್ಕೆ ಪಡೆದ ಶಾಲಾ ಕಟ್ಟಡ ಮತ್ತು ಆಟದ ಮೈದಾನವನ್ನು ಕೆಳಕಂಡಂತೆ ಹೊಂದಿರಬೇಕಾಗಿರುತ್ತದೆ. ಹಾಗೂ ಸದರಿ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಪರಿವರ್ತಿತ ನಿವೇಶನವಾಗಿರಬೇಕು.

ನೋಂದಣಿ ಮತ್ತು ಸಂಸ್ಕರಣಾ ಶುಲ್ಕದ ವಿವರಗಳು:

ಪೂರ್ವ ಪ್ರಾಥಮಿಕ ಶಾಲೆ: 2,500 ರೂ. ದಿಂದ 15,000 ರೂ. ವರೆಗೆ (ಪ್ರದೇಶಕ್ಕೆ ಅನುಗುಣವಾಗಿ).

ಪ್ರಾಥಮಿಕ ಶಾಲೆ: 50,000 ರೂ.

ಪ್ರೌಢಶಾಲೆ: 1,00,000 ರೂ.

ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ (ಬಿಬಿಎಂಪಿ ವ್ಯಾಪ್ತಿ): 1,65,000 ರೂ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು:

ಆಸಕ್ತ ಸಂಸ್ಥೆಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.karnataka.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ನಗದು ಪಾವತಿ (Cash Mode): ಅರ್ಜಿ ಸಲ್ಲಿಸಲು 30-03-2026 ಕೊನೆಯ ದಿನಾಂಕ.

ಆನ್‌ಲೈನ್ ಪಾವತಿ (Online Payment): ಅರ್ಜಿ ಸಲ್ಲಿಸಲು 02-04-2026 ಕೊನೆಯ ದಿನಾಂಕ.

ಅರ್ಜಿಯೊಂದಿಗೆ ಶಾಲಾ ಕಟ್ಟಡದ ಫೋಟೋ ಮತ್ತು ವಿಡಿಯೋಗಳನ್ನು ಜಿಯೋ ಟ್ಯಾಗ್ (Geo-tag) ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

ಸುರಕ್ಷತಾ ಕ್ರಮಗಳು:

ಹೊಸ ಶಾಲೆಗಳು ಕಡ್ಡಾಯವಾಗಿ ಪಿಡಬ್ಲ್ಯೂಡಿ (PWD) ಇಲಾಖೆಯಿಂದ ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಮತ್ತು ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಅಥವಾ ಉಪನಿರ್ದೇಶಕರ (DDPI) ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

 

Applications invited to start new unaided private schools in the state: Here is the complete information
Share. Facebook Twitter LinkedIn WhatsApp Email

Related Posts

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM2 Mins Read

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM1 Min Read

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM2 Mins Read
Recent News

‘US ಸೇನಾ ನೆಲೆಗಳನ್ನು ಮುಚ್ಚಿ, ಇಲ್ಲವೇ ದಾಳಿ ಎದುರಿಸಿ’: ಇರಾನ್ ನೂತನ ಸುಪ್ರೀಂ ಲೀಡರ್ ಖಡಕ್ ವಾರ್ನಿಂಗ್!

13/03/2026 7:03 AM

‘ಸದನ ನಡೆಯುವುದು ನಿಯಮಗಳ ಮೇಲೆ, ವೈಯಕ್ತಿಕ ಇಚ್ಛೆಯ ಮೇಲಲ್ಲ’: ಅವಿಶ್ವಾಸ ನಿರ್ಣಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ಓಂ ಬಿರ್ಲಾ ಖಡಕ್ ಎಚ್ಚರಿಕೆ!

13/03/2026 6:57 AM

​ಗ್ಯಾಸ್ ಬುಕ್ಕಿಂಗ್ ಇನ್ಮುಂದೆ ಅತಿ ಸುಲಭ: ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡಿ!

13/03/2026 6:52 AM

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM
State News
KARNATAKA

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

By kannadanewsnow5713/03/2026 6:45 AM KARNATAKA 2 Mins Read

ಬೆಂಗಳೂರು: ಬೀರ್‌ ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತದೆ, ಇದು ಕುಡಿದರೆ ದೇಹಕ್ಕೆ ಏನೂ ಆಗಲ್ಲ ಇದು ಇಂದಿನ ಯುವಜನತೆ…

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM

ALERT : ಬಣ್ಣ ಸೇರಿಸಿದ ಆಹಾರ ತಿನ್ನುವವರೇ ಎಚ್ಚರ : ನಿಮ್ಮ ಜೀವಿತಾವಧಿ ಕಮ್ಮಿ ಮಾಡುತ್ತಿದೆ ಈ ‘ಸ್ಲೋ ಪಾಯ್ಸನ್’ !

13/03/2026 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.