ಬೆಂಗಳೂರು: 2022-23ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಶಾಲೆಗಳನ್ನು ( School of Commerce and Computer Education ) ಪ್ರಾರಂಭಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2022-23ನೇ ಸಾಲಿನಲ್ಲಿ ಅಕ್ಟೋಬರ್ 1ರಿಂದ ಅಕ್ಟೋಬರ್ 31ರವರೆಗೆ ಹೊಸದಾಗಿ ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಶಾಲೆಗಳನ್ನು ಪ್ರಾರಂಭಿಸಲು ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದು ಎಂದಿದ್ದಾರೆ.

ರಸ್ತೆಯಲ್ಲಿ ಸಿಕ್ಕ ‘ಪರ್ಸ್’ ಒಂದೇ ದಿನದಲ್ಲಿ ‘ಡಾಕ್ಟರ್’ಗೆ ತಲುಪಿಸಿ ಕರ್ತವ್ಯನಿಷ್ಠೆ ಮೆರೆದ ‘ಪೊಲೀಸ್’ | Bengaluru City Police

ಹೊಸದಾಗಿ ಬೆರಳಚ್ಚು ಮತ್ತು ಶೀಘ್ರಲಿಪಿಕಾರರ ತರಬೇತಿಗಾಗಿ ವಾಣಿಜ್ಯ ಶಿಕ್ಷಣ ಮತ್ತು ಗಣಕಯಂತ್ರ ಶಿಕ್ಷಣ ಶಾಲೆ ತೆರೆಯಲು ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿ ಎಂದು ಹೇಳಿದ್ದಾರೆ.

Share.
Exit mobile version