ಬೆಂಗಳೂರು : 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಏಪ್ರಿಲ್-2025ರ ಮಾಹೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಹೊಸದಾಗಿ ಗಣಕಯಂತ್ರ ಶಿಕ್ಷಣ ಸಂಸ್ಥೆಗಳನ್ನು ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಪ್ರಾರಂಭಿಸಲು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಮಾನ್ಯತೆ ಪಡೆದಿರುವ ವಾಣಿಜ್ಯ ಶಿಕ್ಷಣ ಸಂಸ್ಥೆಗಳಲ್ಲಿ (ಬೆರಳಚ್ಚು ಮತ್ತು ಶೀಘ್ರಲಿಪಿ) ಗಣಕಯಂತ್ರ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಏಪ್ರಿಲ್-2025ರ ಮಾಹೆಯಲ್ಲಿ ದಿನಾಂಕ: 01-04-2025 ರಿಂದ ದಿನಾಂಕ: 30-04-2025 ರೊಳಗೆ ಬೆಂಗಳೂರು ವಿಭಾಗಕ್ಕೆ ಸಂಬಂಧಪಟ್ಟಂತೆ ಸಹನಿರ್ದೇಶಕರು-1, ಬೆಂಗಳೂರು ವಿಭಾಗ, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಕೆ.ಆರ್.ವೃತ್ತ, ಬೆಂಗಳೂರು ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಲಬುರ್ಗಿ ವಿಭಾಗಕ್ಕೆ ಸಂಬಂಧಿಸಿದಂತೆ ಸಹನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಛೇರಿ, ಕಲಬುರ್ಗಿ ಇವರಿಗೆ, ಮತ್ತು ಬೆಳಗಾವಿ ಹಾಗೂ ಮೈಸೂರು ವಿಭಾಗಗಳಿಗೆ ಸಂಬಂಧಪಟ್ಟಂತೆ, ಶಾಲಾ ಶಿಕ್ಷಣ ಇಲಾಖೆಯ ಆಯಾ ವಿಭಾಗದ ಸಹನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸುವುದು.
ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸುವುದು..
1. ಅರ್ಜಿ ನಮೂನೆ-1
2. ಅಂತರ ದೃಢೀಕರಣ ಪ್ರಮಾಣ ಪತ್ರ: [ಬಿ.ಬಿ.ಎಂ.ಪಿ/ ನಗರಸಭೆ/ಪಟ್ಟಣ ಪಂಚಾಯಿತಿ ಇವರಿಂದ ಪಡೆಯುವುದು] ಈಗಾಗಲೇ ಅಸ್ತಿತ್ವದಲ್ಲಿರುವ ಅಧಿಕೃತ ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆಗೂ ಅಥವಾ ಗಣಕಯಂತ್ರ ಶಿಕ್ಷಣ ಸಂಸ್ಥೆಗೂ ಹಾಗೂ ಈಗ ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳಿಗೂ ನಗರ ಪ್ರದೇಶದಲ್ಲಿ ಒಂದು ಕಿ.ಮೀ ವ್ಯಾಪ್ತಿಯ ಅಂತರ ಇರತಕ್ಕದ್ದು. ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎರಡು ಕಿ.ಮೀ ಅಂತರವಿರತಕ್ಕದ್ದು.
3. ಸ್ವಂತ ಕಟ್ಟಡವಿದ್ದಲ್ಲಿ ಕಟ್ಟಡದ ದಾಖಲೆ [ಖಾತೆ ಪ್ರಮಾಣ ಪತ್ರದ ಪ್ರತಿ] / ಬಾಡಿಗೆ ಕಟ್ಟಡವಿದ್ದಲ್ಲಿ ಬಾಡಿಗೆ ಕರಾರು ಪತ್ರ ಮತ್ತು ಕಟ್ಟಡದ ಮಾಲೀಕರ ಒಪ್ಪಿಗೆ ಪತ್ರ.
4. ಆಯಾ ವಿಭಾಗದ ಸಹನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಇವರ ಹೆಸರಿಗೆ ರೂ:2000/- (ಎರಡು ಸಾವಿರ ರೂಗಳು ಮಾತ್ರ] ಮೊತ್ತದ ಡಿಮಾಂಡ್ ಡ್ರಾಫ್ಟ್ .
5. ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆಯನ್ನು ನಡೆಸಲು ಆರ್ಥಿಕವಾಗಿ ಸಬಲರಾಗಿರುವ ಬಗ್ಗೆ ದಾಖಲೆ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಮುಖಪುಟ ಹಾಗೂ ವ್ಯವಹಾರಿಕ ಕೊನೆ ಪುಟ ಅಥವಾ ಬ್ಯಾಂಕ್ ಸ್ಟೇಟೆಂಟ್ ಪ್ರತಿ ಲಗತ್ತಿಸುವುದು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸ: https://schooleducation.karnataka.gov.in:–commerce education ) ರಲ್ಲಿ ಪರಿಶೀಲಿಸುವುದು.