Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2025ನೇ ಸಾಲಿನ ‘ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನ: ಜು.15 ಕೊನೇ ದಿನ
KARNATAKA

2025ನೇ ಸಾಲಿನ ‘ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನ: ಜು.15 ಕೊನೇ ದಿನ

By kannadanewsnow5713/07/2025 6:49 PM

ಬೆಂಗಳೂರು: 2025ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಿನಾಂಕ 15-07-2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದೇಶದಾದ್ಯಂತ ಶಿಕ್ಷಕರು ನೀಡಿರುವ ಅನನ್ಯ ಸೇವೆಯನ್ನು ಸ್ಮರಿಸಿ, ಅಂತಹ ಅತ್ಯುತ್ತಮ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರದಾನ ಮಾಡಲಾಗುತ್ತಿದೆ. ಅದರಂತೆ, 2025 ನೇ ಸಾಲಿನ “ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹ ಶಿಕ್ಷಕರು / ಉಪನ್ಯಾಸಕರು / ಮುಖ್ಯ ಶಿಕ್ಷಕರು / ಪ್ರಾಂಶುಪಾಲರು ಆನ್ ಲೈನ್ ಪೋರ್ಟಲ್ (https://nationalawardstoteachers.education.gov.in) ಮೂಲಕ ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ವ್ಯಾಪ್ತಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಉಲ್ಲೇಖಿತ ಪತ್ರ & ಅದರೊಂದಿಗಿನ ಪೂರಕ ದಾಖಲೆಗಳ ಅನುಸಾರ, ದಿನಾಂಕ: 23-06-2024 ರಿಂದ 15-07-2024 ರವರೆಗೆ ಅವಕಾಶ ಕಲ್ಪಿಸಿರುತ್ತದೆ ಎಂದಿದ್ದಾರೆ.

ಅರ್ಜಿ ಸಲ್ಲಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಳಕಂಡ ಅಂಶಗಳಂತೆ ಕ್ರಮವಹಿಸುವಂತೆ ಅರ್ಹ ಅರ್ಜಿದಾರರಿಗೆ, ಶಾಲಾ / ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿದೆ.

ಅರ್ಹ ಅರ್ಜಿದಾರರಿಗೆ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕೆಳಕಂಡ ಅಂಶಗಳನ್ನು ಗಮನಕ್ಕೆ ತರಲಾಗಿದೆ.

ಉಲ್ಲೇಖಿತ ಪತ್ರ ಹಾಗೂ ಅದರೊಂದಿಗಿನ ಪೂರಕ ದಾಖಲೆಗಳು ಮತ್ತು ತತ್ಸಂಬಂಧಿ (https://nationalawardstoteachers.education.gov.in) ಅಂಶಗಳಂತೆ ಕೆಳಕಂಡವರು ” ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ 2025 ” ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ನಿಗದಿತ ಅವಧಿಯಲ್ಲಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

1. ರಾಜ್ಯ ಸರ್ಕಾರದ, ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮತ್ತು ರಾಜ್ಯ ಸರ್ಕಾರಕ್ಕೆ/ರಾಜ್ಯ ಮಂಡಳಿಗೆ ಸಂಯೋಜನೆಗೊಂಡಿರುವ (ರಾಜ್ಯ ಸರ್ಕಾರದಿಂದ ನೋಂದಣಿ & ಮಾನ್ಯತೆ ಪಡೆದಿರುವ) ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿನ /ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.

2. ಕೇಂದ್ರ ಸರ್ಕಾರದ ಮತ್ತು ಸಿ.ಬಿ.ಎಸ್.ಇ ಹಾಗೂ ಸಿ.ಐ.ಎಸ್.ಸಿ.ಇ ಸಂಯೋಜನೆ ಪಡೆದಿರುವ / ಮಾನ್ಯತೆ ಪಡೆದ ಶಾಲೆಗಳ/ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.

3. ಈ ಕ್ಯಾಲೆಂಡ‌ರ್ ವರ್ಷದಲ್ಲಿ ಕನಿಷ್ಟ ನಾಲ್ಕು ತಿಂಗಳು ಅಂದರೆ, ದಿನಾಂಕ: 30-04-2025 ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೇಲ್ಕಂಡ ಶಾಲೆಗಳ/ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡಿದ್ದ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದಿದ್ದ ಹಾಗೂ ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರೈಸಿದ್ದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.

ಮೇಲ್ಕಂಡವರು “ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ – 2025 ” ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ಆನ್-ಲೈನ್ ಮೂಲಕ ಕೆಳಕಂಡಂತೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Applications invited for the 2025 ‘National Best Teacher Award’: Last date is July 15
Share. Facebook Twitter LinkedIn WhatsApp Email

Related Posts

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM1 Min Read

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM1 Min Read

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM2 Mins Read
Recent News

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರ: ರೋಹಿತ್ ಶರ್ಮಾ ದಾಖಲೆ ಪುಡಿಪುಡಿ ಮಾಡಿದ ‘ಕಿಂಗ್ ಕೊಹ್ಲಿ’!

05/04/2026 9:15 PM
State News
KARNATAKA

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

By kannadanewsnow0905/04/2026 9:28 PM KARNATAKA 1 Min Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ರಾಜ್ಯದಲ್ಲಿ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ಯನ್ನು…

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM

ಮನೆಯ ‘ಗೃಹಮಂತ್ರಿ’ಯಾದತಂಹ ಗೃಹಿಣಿಗಾಗಿ ಉಪಯುಕ್ತ ‘ಟಿಪ್ಸ್’ಗಳು.!

05/04/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.