ಬೆಂಗಳೂರು: 2024ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಿನಾಂಕ 15-07-2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದೇಶದಾದ್ಯಂತ ಶಿಕ್ಷಕರು ನೀಡಿರುವ ಅನನ್ಯ ಸೇವೆಯನ್ನು ಸ್ಮರಿಸಿ, ಅಂತಹ ಅತ್ಯುತ್ತಮ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರದಾನ ಮಾಡಲಾಗುತ್ತಿದೆ. ಅದರಂತೆ, 2024 ನೇ ಸಾಲಿನ “ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹ ಶಿಕ್ಷಕರು / ಉಪನ್ಯಾಸಕರು / ಮುಖ್ಯ ಶಿಕ್ಷಕರು / ಪ್ರಾಂಶುಪಾಲರು ಆನ್ ಲೈನ್ ಪೋರ್ಟಲ್ (https://nationalawardstoteachers.education.gov.in) ಮೂಲಕ ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ವ್ಯಾಪ್ತಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಉಲ್ಲೇಖಿತ ಪತ್ರ & ಅದರೊಂದಿಗಿನ ಪೂರಕ ದಾಖಲೆಗಳ ಅನುಸಾರ, ದಿನಾಂಕ: 27-06-2024 ರಿಂದ 15-07-2024 ರವರೆಗೆ ಅವಕಾಶ ಕಲ್ಪಿಸಿರುತ್ತದೆ ಎಂದಿದ್ದಾರೆ.

ಉಲ್ಲೇಖಿತ ಪತ್ರ & ಅದರೊಂದಿಗಿನ ಪೂರಕ ದಾಖಲೆಗಳನ್ನು ಯಥಾವತ್ತಾಗಿ ಈ ಪತ್ರದೊಂದಿಗೆ ಲಗತ್ತಿಸಿದೆ. ಅದರಂತೆ, ಸದರಿ ವಿಷಯದ ಕುರಿತು ವ್ಯಾಪಕ ಪ್ರಚಾರದ ಮೂಲಕ ರಾಜ್ಯದ ಕೆಳಕಂಡ ಅರ್ಜಿದಾರರ ಗಮನಕ್ಕೆ ತಂದು ರಾಜ್ಯದಿಂದ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ (ಪ್ರತಿ ಜಿಲ್ಲೆಯಿಂದ ಕನಿಷ್ಟ 50-60 ಮಂದಿ) ನಿಗದಿತ ಅವಧಿಯೊಳಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಳಕಂಡ ಅಂಶಗಳಂತೆ ಕ್ರಮವಹಿಸುವಂತೆ ಅರ್ಜಿದಾರರಿಗೆ, ಕೆಳಕಂಡ ಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.

ಕೆಳಕಂಡ ಅಂಶಗಳನ್ನು ಅರ್ಜಿದಾರರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ.

ಉಲ್ಲೇಖಿತ ಪತ್ರ ಹಾಗೂ ಅದರೊಂದಿಗಿನ ಪೂರಕ ದಾಖಲೆಗಳು ಮತ್ತು ತತ್ಸಂಬಂಧಿ ಅಂತರ್ಜಾಲ ತಾಣ https://nationalawardstoteachers.education.gov.in ದಲ್ಲಿನ ಅಂಶಗಳಂತೆ ಕೆಳಕಂಡವರು “ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ – 2024 ” ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ನಿಗದಿತ ಅವಧಿಯಲ್ಲಿ ಆನ್-ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

1. ರಾಜ್ಯ ಸರ್ಕಾರದ, ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮತ್ತು ರಾಜ್ಯ ಸರ್ಕಾರಕ್ಕೆ/ರಾಜ್ಯ ಮಂಡಳಿಗೆ ಸಂಯೋಜನೆಗೊಂಡಿರುವ (ರಾಜ್ಯ ಸರ್ಕಾರದಿಂದ ನೋಂದಣಿ & ಮಾನ್ಯತೆ ಪಡೆದಿರುವ) ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.
2. ಕೇಂದ್ರ ಸರ್ಕಾರದ ಮತ್ತು ಸಿ.ಬಿ.ಎಸ್.ಇ ಹಾಗೂ ಸಿ.ಐ.ಎಸ್.ಸಿ.ಇ ಸಂಯೋಜನೆ ಪಡೆದಿರುವ / ಮಾನ್ಯತೆ ಪಡೆದ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.
3. ಈ ಕ್ಯಾಲೆಂಡರ್ ವರ್ಷದಲ್ಲಿ ಕನಿಷ್ಟ ನಾಲ್ಕು ತಿಂಗಳು ಅಂದರೆ, ದಿನಾಂಕ: 30-04-2024 ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೇಲ್ಕಂಡ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡಿದ್ದ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದಿದ್ದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿದ್ದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.
ಮೇಲ್ಕಂಡವರು “ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ – 2024 ” ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ಆನ್-ಲೈನ್ ಪೋರ್ಟಲ್ ಮೂಲಕ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
4. ಶೈಕ್ಷಣಿಕ ಆಡಳಿತಗಾರರು, ಶಿಕ್ಷಣ ಪರಿವೀಕ್ಷಕರು, ತರಬೇತಿ ಸಂಸ್ಥೆಗಳ ಸಿಬ್ಬಂದಿಗಳು, ಗುತ್ತಿಗೆ, ಶಿಕ್ಷಣಮಿತ್ರ, ಅರೆಕಾಲಿಕ, ಗೌರವ, ಅತಿಥಿ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಸದರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಆನ್-ಲೈನ್ ಪೋರ್ಟಲ್ ಮೂಲಕ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸುವ ಕಾರ್ಯ ವಿಧಾನ

5. https://national awardstoteachers.education.gov.in/Login.aspx ತಾಣದ ಈ ಅಂತರ್ಜಾಲ ಲಿಂಕ್ ಮೂಲಕ ಅಥವಾ ಶಾಲಾ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣ https://schooleducation.karnataka.gov.in ದಲ್ಲಿನ ಮೇಲ್ಕಂಡ ವೆಬ್ ತಾಣದ ಕೊಂಡಿಯ ಮೂಲಕ ಅರ್ಹ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಾವೇ ಸ್ವಯಃ / ಸ್ವತಃ ಆನ್‌ಲೈನ್ (Online Self-nomination) ಮೂಲಕ ನೋಂದಾಯಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.
6. ಅರ್ಹ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಅರ್ಜಿ ಸಲ್ಲಿಸುವ ಪೂರ್ವದಲ್ಲಿ  https://nationalawardstoteachers.education.gov.in ಈ ಅಂತರ್ಜಾಲ ತಾಣದಲ್ಲಿರುವ ತತ್ಸಂಬಂಧಿ ಸೂಚನೆಗಳನ್ನು ಪದೇ-ಪದೇ ಕೇಳಲಾಗುವ ಪ್ರಶ್ನೆಗಳ (FAQ’S) ಸಹಿತವಾದ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಓದಿ ಮನನ ಮಾಡಿಕೊಳ್ಳುವುದು.
7. ನಂತರ ಸದರಿ ಅಂತರ್ಜಾಲ ತಾಣದಲ್ಲಿನ ಸೂಚನೆಗಳಂತೆ ಸೂಕ್ತ ಕಾರ್ಯ ವಿಧಾನವನ್ನು ಅನುಸರಿಸಿ ಅರ್ಹ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಾವೇ ಸ್ವಯಃ / ಸ್ವತಃ ಆನ್‌ಲೈನ್ (Online Self-nomination) ಮೂಲಕ ನೋಂದಾಯಿಸಿಕೊಂಡು, ಆನ್- ಲೈನ್ ಪೋರ್ಟಲ್‌ನಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ ನಿಗದಿತ ಮಿತಿಯ ಪೂರಕ ಮಾಹಿತಿಗಳೊಂದಿಗೆ (ದಾಖಲೆಗಳು,ಆಡಿಯೋ,ವೀಡಿಯೋ ಇತ್ಯಾದಿ…) ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಸದರಿ ಅರ್ಜಿಯಲ್ಲಿ ಸಲ್ಲಿಸಿರುವ ಎಲ್ಲಾ ಮಾಹಿತಿ ಮತ್ತು ಎಲ್ಲಾ ಪೂರಕ ದಾಖಲೆಗಳು ನೈಜತೆಯಿಂದ ಕೂಡಿರುತ್ತದೆ / ಸತ್ಯವಾಗಿರುತ್ತದೆ ಎಂದು, ಒಂದು ವೇಳೆ ಪ್ರಸ್ತುತ ಅಥವಾ ಭವಿಷ್ಯದಲ್ಲಿ ಸದರಿ ಮಾಹಿತಿ ಮತ್ತು ಪೂರಕ ದಾಖಲೆಗಳು ನೈಜತೆಯಿಂದ ಕೂಡಿಲ್ಲದಿರುವುದು / ಅಸತ್ಯವಾಗಿರುವುದು ಕಂಡುಬಂದಲ್ಲಿ ಅಥವಾ ಸಾಬೀತಾದಲ್ಲಿ ಅಂತಹ ಪ್ರಕರಣದಲ್ಲಿ ನಿಯಮಾನುಸಾರ ಶಿಸ್ತುಕ್ರಮಕ್ಕೆ ಅರ್ಹರಿರುವುದಾಗಿ ಸ್ವಯಂ ದೃಢೀಕರಣವನ್ನು ಕಡ್ಡಾಯವಾಗಿ ಖುದ್ದು ಅರ್ಜಿದಾರರು ನೀಡತಕ್ಕದ್ದು.
8. ಅರ್ಹ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಅರ್ಜಿ ಸಲ್ಲಿಸುವ ಪುಕ್ರಿಯೆಯಲ್ಲಿ ಯಾವುದೇ ರೀತಿಯ ಅಡಚಣೆಗಳುಂಟಾದಲ್ಲಿ ಇ-ಮೇಲ್ ಐಡಿ helpdesk- nat@gov.in ಯನ್ನು ಸಂಪರ್ಕಿಸಿ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದಾಗಿರುತ್ತದೆ.

ರಾಜ್ಯದ ಮೇಲ್ಕಂಡ ಎಲ್ಲಾ ಶಾಲೆಗಳ ಮತ್ತು ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ಶಿಕ್ಷಕರ ತರಬೇತಿ ಕೇಂದ್ರ (ಟಿ.ಟಿ.ಐ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ಆಡಳಿತ, ಅಭಿವೃದ್ಧಿ, ಪದವಿ ಪೂರ್ವ ಶಿಕ್ಷಣ ಮತ್ತು ಪ್ರಾಂಶುಪಾಲರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿ.ಟಿ.ಇ) ಇವರುಗಳು ತಮ್ಮ-ತಮ್ಮ ವ್ಯಾಪ್ತಿಯಲ್ಲಿನ ಅರ್ಹ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಮುಖ್ಯ ಶಿಕ್ಷಕರಿಗೆ ಮತ್ತು ಪ್ರಾಂಶುಪಾಲರಿಗೆ 2024 ನೇ ಸಾಲಿನ “ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ದಿನಾಂಕ: 27-06-2024 ರಿಂದ 15-07-2024 ರವರೆಗೆ ಮೇಲ್ಕಂಡಂತೆ ಆನ್-ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ವ್ಯಾಪಕ ಪ್ರಚಾರದ ಮೂಲಕ ಮತ್ತು ಕಛೇರಿ ಸೂಚನಾ ಫಲಕದಲ್ಲಿ ಅಳವಡಿಸುವುದರ ಮೂಲಕ ಗಮನಕ್ಕೆ ತರುವುದು ಮತ್ತು ಮೇಲ್ಕಂಡ ಅಂಶಗಳನ್ನು ಅನುಸರಿಸಿ ಸದರಿಯವರು (ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 50-60 ಮಂದಿ) ನಿಗದಿತ ಅವಧಿಯೊಳಗೆ ಸುಸೂತ್ರವಾಗಿ ಪೂರ್ಣ ಪ್ರಮಾಣದಲ್ಲಿ (Final submission) ಅರ್ಜಿ ಸಲ್ಲಿಸಲು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ವಹಿಸುವುದು.

ಈ ಸಂಬಂಧ ಸದರಿ ಕಛೇರಿಗಳಲ್ಲಿ ಸಹಾಯ ಕೇಂದ್ರ (Help desk) ಗಳನ್ನು ಈ ಪ್ರಕ್ರಿಯೆ ಅಂತ್ಯದವರೆಗೂ ತೆರೆಯಲು ಹಾಗೂ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನು ನೇಮಿಸಿ ಸದರಿ ಅರ್ಜಿದಾರರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಹಾಗೂ ಸದರಿ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಪ್ರಕ್ರಿಯೆಯನ್ನು ನಿರಂತರ ಅನುಪಾಲನೆ ಮಾಡಲು ನಿಯಮಾನುಸಾರ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ವಹಿಸುವಂತೆ ಮೇಲ್ಕಂಡ ಅಧಿಕಾರಿಗಳಿಗೆ ಈ ಮೂಲಕ ತಿಳಿಸಲಾಗಿದೆ.

ಈ ಪುಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ/ ಅಪರ ಆಯುಕ್ತರ ಕಛೇರಿ ಹಂತದಲ್ಲಿ ಸಹ ಸಹಾಯ ಕೇಂದ್ರ (Help desk) ಗಳನ್ನು ಈ ಪ್ರಕ್ರಿಯೆ ಅಂತ್ಯದವರೆಗೂ ತೆರೆಯಲು ಹಾಗೂ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು, ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಅರ್ಜಿದಾರರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಹಾಗೂ ಸದರಿ ನೋಡಲ್ ಅಧಿಕಾರಿಗಳು ಹಾಗೂ ಇಲಾಖಾಧಿಕಾರಿಗಳು ನಿರಂತರ ಅನುಪಾಲನೆ ಮಾಡಿ ರಾಜ್ಯದ ಪ್ರತಿ ಜಿಲ್ಲೆಯಿಂದ ಕನಿಷ್ಟ 50-60 ಪುಸ್ತಾವನೆಗಳು ಸಲ್ಲಿಕೆಯಾಗುವ ನಿಟ್ಟಿನಲ್ಲಿ ಸದರಿ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಹಾಗೂ ಮೇಲುಸ್ತುವಾರಿ ಮಾಡಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ವಹಿಸುವಂತೆ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿದೆ ಮತ್ತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ / ಕಲಬುರಗಿ, ನಿರ್ದೇಶಕರು, ಪ್ರೌಢ ಶಿಕ್ಷಣ, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ನಿರ್ದೇಶಕರು, ಡಿ.ಎಸ್.ಇ.ಆರ್.ಟಿ., ಬೆಂಗಳೂರು ಹಾಗೂ ಉಪನಿರ್ದೇಶಕರು, ಕ.ರಾ.ಶಿ.ಕ.ನಿಧಿ, ಬೆಂಗಳೂರು ಇವರುಗಳಿಗೆ ತಿಳಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

BREAKING: ಅತ್ಯಾಚಾರ ಕೇಸ್: ಜುಲೈ.8ರವರೆಗೆ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ

Share.
Exit mobile version