ಶಿವಮೊಗ್ಗ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಭಾರತೀಯ ಸೇನೆ ಮತ್ತು ಇತರೆ ಯೂನಿಫಾರ್ಮ್ ಸೇವೆಗಳ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗಾಗಿ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1,2(ಎ), 3(ಎ) ಮತ್ತು 3(ಬಿ) ಗಳ ಅರ್ಹ ಬಾಲಕರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳ ಕುಟುಂಬದ ಆದಾಯ ಮಿತಿ ಪ್ರವರ್ಗ-1,2(ಎ) ರೂ.2.5 ಲಕ್ಷಗಳು, ಮತ್ತು 3(ಎ) ಮತ್ತು 3(ಬಿ) ಗಳಿಗೆ 1.00ಲಕ್ಷಗಳಿರುತ್ತದೆ. 10 ನೇ ತರಗತಿ ಉತ್ತೀರ್ಣವಾಗಿದ್ದು, ಶೇ 45 ರಷ್ಟು ಅಂಕ ಪಡೆದಿರಬೇಕು. ವಯೋಮಿತಿ 10 ಜುಲೈ 2004 ರಿಂದ 2007ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ತರಬೇತಿ ನೆಡೆಸಲಾಗುವುದು. ಅಭ್ಯರ್ಥಿಗಳು ಈ ಮೂರರಲ್ಲಿ ಯಾವುದಾದರು ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು, ಆ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ https:bcwd.karnataka.gov.in ಮಾಹಿತಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 10 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ದಕ್ಷಿಣಕನ್ನಡ ದೂ,ಸಂ.: 0824-2225078, ಉಡುಪಿ ದೂ,ಸಂ.: 0820-2574881 ಮತ್ತು ಉತ್ತರಕನ್ನಡ ದೂ,ಸಂ.:08382-226589 ಸಂಪರ್ಕಿಸುವುದು.