ಬೆಂಗಳೂರು: ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಪ್ರತಿಭಾನ್ವಿತ ಯುವತಿಯರಿಗಾಗಿ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ ನಡೆಸುತ್ತಿರುವ ರಾಹ್ ಅಕಾಡೆಮಿ ‘ರಾಹ್ ಸೂಪರ್ 30’, 2025-26ನೇ ಶೈಕ್ಷಣಿಕ ಸಾಲಿಗೆ ಅರ್ಹ ಮಹಿಳಾ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.
ಕಳೆದ ವರ್ಷ ಕನಕಪುರ ರಸ್ತೆಯ ಮ್ಯಾಂಗೋ ಗಾರ್ಡನ್ ಲೇಔಟ್‌ನಲ್ಲಿ ಪ್ರಾರಂಭವಾದ ‘ರಾಹ್ ಸೂಪರ್ 30’ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ, ಅರ್ಹ ಮಹಿಳಾ ಪದವೀಧರರಿಗೆ ಯುಪಿಎಸ್‌ಸಿ (ಪೂರ್ವಭಾವಿ ಮತ್ತು ಮುಖ್ಯ) ಪರೀಕ್ಷೆಗೆ ತರಬೇತಿ, ಪರಿಣಿತರ ಮಾರ್ಗದರ್ಶನ, ಗ್ರಂಥಾಲಯ ಸೇರಿದಂತೆ ವಸತಿ ಸಹಿತ ಅಧ್ಯಯನಕ್ಕೆ ಅಗತ್ಯ ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ.
ಮೊದಲ ಬ್ಯಾಚ್‌ನ ವಿದ್ಯಾರ್ಥಿನಿ ಡಾ. ಅಲ್ಮಾಸ್ ಫಾತಿಮಾ ಅವರು ನಾಗರಿಕ ಸೇವೆಗಳ ಇತ್ತೀಚಿನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ, ತೆಲಂಗಾಣ ರಾಜ್ಯ ಸೇವೆಗಳ ಪರೀಕ್ಷೆಯಲ್ಲಿ 99ನೇ ರ‍್ಯಾಂಕ್ ಗಳಿಸಿದ್ದಾರೆ ಮತ್ತು ತೆಲಂಗಾಣ ಪೊಲೀಸ್ ಸೇವೆಗಳಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಹುದ್ದೆಯನ್ನು ಪಡೆದಿದ್ದಾರೆ. ಇದು ಈ ಕಾರ್ಯಕ್ರಮದ ಆರಂಭಿಕ ಯಶಸ್ಸು. ಮೊದಲ ವರ್ಷ 12 ಅರ್ಹ ಯುವತಿಯರನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು.
“ಒಬ್ಬ ಮಹಿಳೆ ಶಿಕ್ಷಣ ಪಡೆದಾಗ ಇಡೀ ಸಮಾಜದ ಸುಧಾರಣೆಗೆ ಕಾರಣಳಾಗುತ್ತಾಳೆ. ನಮ್ಮ ಕಾರ್ಯಕ್ರಮದ ಮೂಲಕ ಆಡಳಿತ ಸೇವೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಣದ ಮೂಲಕ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ನಿವಾರಿಸುವ ರಾಹ್ ಅಕಾಡೆಮಿಯ ಧ್ಯೇಯಕ್ಕೆ ‘ರಾಹ್ ಸೂಪರ್ 30’ ಕಾರ್ಯಕ್ರಮ ಪೂರಕವಾಗಿದೆ,” ಎಂದು ರಾಹ್ ಅಕಾಡೆಮಿಯ ಟ್ರಸ್ಟಿ ಎಸ್. ಎ. ಹುಸೇನ್ ಹೇಳಿದ್ದಾರೆ.
ಆಸಕ್ತರು www.raahsuper30.com ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ 8123494947 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15, 2025.
ಬೆಂಗಳೂರಲ್ಲಿ ಮಂಜೂರಾತಿ ನಕ್ಷೆ ಮೀರಿ ಕಟ್ಟಡ ಕಟ್ಟಿದ್ದವರಿಗೆ ಬಿಬಿಎಂಪಿ ಶಾಕ್
ರಾಜ್ಯದ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರವೇ ಟಿಕೆಟ್ ದರದ ‘ರೌಂಡಪ್ ವ್ಯವಸ್ಥೆ’ ರದ್ದು