ಶಿವಮೊಗ್ಗ : 2023-24 ನೇ ಸಾಲಿಗೆ ಶಿಕಾರಿಪುರ ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ತರಕಾರಿ ಬೆಳೆಯಲು ಉತ್ತೇಜನ ನೀಡಲು ತರಕಾರಿ ಬೀಜಗಳ ವಿತರಣೆ ಕಾರ್ಯಕ್ರಮದಡಿ ಫಲಾನುಭವಿಗೆ ರೂ.2000 ಮೊತ್ತದ ತರಕಾರಿ ಬೀಜಗಳ ಕಿಟ್‍ನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರಿಗೆ ವಿತರಿಸಲಾಗುವುದು.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್‍ಪುಸ್ತಕ ಪ್ರತಿ ಹಾಗೂ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಫೆ.26 ರಿಂದ ತರಕಾರಿ ಬೀಜಗಳ ಕಿಟ್‍ಗಳನ್ನು ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಮೊ.ಸಂ ಕಸಬಾ 8971370547, ಅಂಜನಾಪುರ 8151810552, ಹೊಸೂರು 6363095898, ಉಡುಗಣಿ 9108548454, ತಾಳಗುಂದ 6361767251 ನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
BREAKING : ಡಿ ಬಾಸ್ ಗೆ ಮತ್ತೊಂದು ಸಂಕಷ್ಟ : ‘ಶ್ರೀ ಶಕ್ತಿ ಸಂಘದಿಂದ’ ನಟ ದರ್ಶನ್ ವಿರುದ್ಧ ದೂರು ದಾಖಲು
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ